Geyser gas leak death : ಕೆಲವೊಮ್ಮೆ ಎಷ್ಟೇ ಎಚ್ಚರಿಕೆಯಿಂದ ಇದ್ದರು ಸಹ ಅನಿರೀಕ್ಷಿತ ದುರ್ಘಟನೆ ಸಂಭವಿಸಿಯೇ ಬಿಡುತ್ತವೆ. ಅಂತಹದ್ದೇ ಒಂದು ಬೀಕರ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಹೌದು, ಬೆಂಗಳೂರಿನ ಅಶ್ವಥ್‌ ನಗರದಲ್ಲಿ ಘಟನೆ ಸಂಭವಿಸಿದ್ದು ಗ್ಯಾಸ್‌ ಸೋರಿಕೆಯಿಂದಾಗಿ ಗರ್ಭಿಣಿಯೊಬ್ಬಳು ದಾರುಣವಾಗಿ ಮೃತಪಟ್ಟಿದ್ದಾಳೆ. ಮೃತಳನ್ನು ರಮ್ಯ ಎಂದು ಗುರುತಿಸಲಾಗಿದೆ. 23 ವರ್ಷದ ಈಕೆ ಮತ್ತು ಅವಳ ನಾಲ್ಕು ವರ್ಷದ ಮಗುವನ್ನು ತಕ್ಷಣವೇ ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿತ್ತು. ಆದರೆ ದುರದೃಷ್ಟವಶ ಚಿಕಿತ್ಸೆ ಫಲಕಾರಿಯಾಗದೆ ಗರ್ಭಿಣಿ ಸಾವನ್ನಪ್ಪಿದ್ದಾರೆ.


COMMERCIAL BREAK
SCROLL TO CONTINUE READING

ಗ್ಯಾಸ್ ಸೋರಿಕೆ ದುರಂತ: 


ಶನಿವಾರ ಬೆಳಗ್ಗೆ ರಮ್ಯ ತನ್ನ ಮಗುವಿನೊಟ್ಟಿಗೆ ಸ್ನಾನ ಮಾಡಲು ಹೋಗಿದ್ದರು. ಗ್ಯಾಸ್ ಗೀಸರ್‌ನಿಂದ  ವಿಷ ಅನಿಲವು  ಸೋರಿಕೆಯಾಗಿ ತಾಯಿ ಮಗಳು ಇಬ್ಬರು ಪ್ರಜ್ಞೆ ತಪ್ಪಿದ್ದರು, ಆದರೆ ರಮ್ಯ ಸ್ಥಳದಲ್ಲೇ ಮೃತಪಟ್ಟಿದ್ದು ಅವರ ಮಗುವನ್ನು ರಾಮಯ್ಯ ಆಸ್ಪತ್ರೆಯ ತೀವ್ರ ನಿಗಾಘಟಕದಲ್ಲಿ  ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಇದನ್ನೂ ಓದಿ: Viral Video: ಕೆಲಸಗಾರರಿಗೆ ನೀರುನಾಯಿ ಹೇಗೆ ಹೆಲ್ಪ್ ಮಾಡುತ್ತೆ ನೋಡಿ


ಸ್ಥಳೀಯ ಪ್ರತಿಕ್ರಿಯೆ:


ಮನೆಗೆ ಬಂದು  ಪತ್ನಿ ಹಾಗೂ ಮಗುವನ್ನ ಪ್ರಜ್ಷಾಹೀನ ಸ್ಥಿತಿಯಲ್ಲಿ ನೋಡಿದ್ದ ಪತಿ ಜಗದೀಶ್ . ತಕ್ಷಣವೇ  ಘಟನೆಯ ಬಗ್ಗೆ ತಿಳಿಸಿ ಸ್ಥಳಿಯರ ಬಳಿ ಸಹಾಯ ಕೋರಿದ್ದಾರೆ. ಸ್ಥಳಿಯರ ನೆರವಿನಿಂದ ರಮ್ಯ ಮತ್ತು ಮಗುವನ್ನ  ಆಸ್ಪತ್ರೆಗೆ ರವಾನಿಸಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೇ ರಮ್ಯ ಮೃತಪಟ್ಟಿದ್ದಾರೆ. ಅಶ್ವಥ್ ನಗರ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೋಲಿಸರು ವಿಚಾರಣೆ ನಡೆಸುತ್ತಿದ್ದಾರೆ. 


ಪೊಲೀಸ್‌ ಹೇಳಿಕೆ:  


ಬಾತ್ ರೂಂನಲ್ಲಿ ಸಾಕಷ್ಟು ಗಾಳಿ ಇಲ್ಲದ ಕಾರಣ ಗೀಸರ್ ನಿಂದ ಸೋರಿಕೆಯಾದ ಕಾರ್ಬನ್ ಮಾನಾಕ್ಸೈಡ್ ವಿಷಕಾರಿ ಘಟನೆಗೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ  ಸ್ಥಳೀಯ ಪೊಲೀಸ್ ಅಧಿಕಾರಿ ಸುಧೀರ್  "ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ದುರಂತ ಸಂಭವಿಸಿದೆ. ತಾವು ಕೆಲಸದಲ್ಲಿ ತೊಡಗಿಕೊಂಡಿರುವಾಗ ಜಗದೀಶ್ ಅವರು ಘಟನೆ ಬಗ್ಗೆ ತಿಳಿಸಿ ಸಹಾಯ ಕೋರಿದ್ದಾರೆ. ನಾವು ಆಸ್ಪತ್ರೆಗೆ ಹೋಗಿ ರಮ್ಯ ಮತ್ತು ಅವಳ ಮಗುವನ್ನು ದಾಖಲಿಸಿದ್ದೇವೆ. ದಂಪತಿ ಕಳೆದ ಒಂದು ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ" ಎಂದು ಹೇಳಿಕೆ ನೀಡಿದ್ದಾರೆ. 


ಇದನ್ನೂ ಓದಿ: ಚೀನೀ ಡ್ರ್ಯಾಗನ್ ಕೆಂಗಣ್ಣಿಗೆ ಮಣಿಯದೆ ಫಿಲಿಪೈನ್ಸ್ ಮತ್ತು ಆಗ್ನೇಯ ಏಷ್ಯಾ ಜೊತೆ ಸಂಬಂಧ ವೃದ್ಧಿಗೆ ಭಾರತದ ಹೆಜ್ಜೆ


ಗ್ಯಾಸ್ ಗೀಸರ್‌ಗಳು ಇಂಗಾಲದ ಮಾನಾಕ್ಸೈಡ್ ಅನ್ನು ಹೊರಸೂಸುತ್ತವೆ, ಇದು ಕೇಲವೇ ನಿಮಿಷಗಳಲ್ಲಿ ಉಸಿರಾಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅದರೊಂದಗೆ ತಲೆತಿರುಗಿವಿಕೆ ಮತ್ತು ಪ್ರಜ್ಞಾನಹೀನತೆಯನ್ನು ಉಂಟುಮಾಡುತ್ತದೆ. ಬಹಳ ಮುಖ್ಯವಾಗಿ ಮನೆಯಲ್ಲಿ ಗ್ಯಾಸ್‌ ಗೀಸರ್‌ಗಳನ್ನು ಬಳಸುತ್ತಿದ್ದರೆ ಕನಿಷ್ಟ ಒಂದು ಕಿಟಕಿಯ ಬಾಗಿಲನ್ನು ತೆಗೆದಿಟ್ಟು ಚೆನ್ನಾಗಿ ಗಾಳಿ ಸ್ನಾನದ ಗೃಹದೊಳಗೆ ಬರುತ್ತಿದೇಯೇ ಎಂದು ಗಮನಿಸಿ ನಂತರ ಒಳಗೆ ಹೋಗುವುದು ಉತ್ತಮ ಏಕೆಂದರೆ ಎಂದಹತ್ತೆ ವಿಷ ಅನಿಲ ಸೋರಿಕೆಯಾದ ಗಾಳಿಯ ಮೂಲಕ ಅದು ಹೊರಟುಹೊಗುವುದರಿಂದ ಇಂತಹ ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.