ತಿರುವನಂತಪುರಂ : ಶಾಲಾ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯುವತಿಗೆ 13 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಅರುವಿಕ್ಕುಜಿ ಮೂಲದ ಸಂಧ್ಯಾಗೆ ಕಠಿಣ ಕಾರಾಗೃಹ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. 


COMMERCIAL BREAK
SCROLL TO CONTINUE READING

ತಿರುವನಂತಪುರಂನ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸಿ ಚಿತ್ರಹಿಂಸೆ ನೀಡಲಾಗಿತ್ತು. ಮದ್ಯ ನೀಡಿ ಥಳಿಸಿದ ಬಳಿಕ ಚಿತ್ರಹಿಂಸೆ ನೀಡಲಾಗಿತ್ತು. ಇನ್ನು ಶಿಕ್ಷೆಯ ಜೊತೆಗೆ 50,000 ರೂ.ದಂಡ ತೆರಬೇಕಾಗುತ್ತದೆ. ದಂಡ ಕಟ್ಟದಿದ್ದರೆ ಇನ್ನೂ ಹತ್ತು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. 


ಇದನ್ನೂ ಓದಿ: ಬಿಹಾರದಲ್ಲಿ ಮತ್ತೆ NDA ಸರ್ಕಾರ: ನಿತೀಶ್ ಕುಮಾರ್​ ಜೊತೆ ಸಚಿವರಾಗಿ 8 ಮಂದಿ ಪ್ರಮಾಣವಚನ


ಘಟನೆ ಹಿನ್ನಲೆ :  ಅಕ್ಟೋಬರ್ 2016 ರಲ್ಲಿ ಈ ಘಟನೆ ನಡೆಯಿತು. ಕಿರುಚಿತ್ರ ಮಾಡಲು ಹಣ ನೀಡುವುದಾಗಿ ನಂಬಿಸಿ ಸಂಧ್ಯಾ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಬಾಲಕಿ ಬಂದ ಸ್ನೇಹಿತರನ್ನ ಮನೆ ಹೊರಗೆ ಇಟ್ಟು ಯುವತಿಗೆ ಮದ್ಯ ನೀಡಿ ನಂತರ ಲೈಂಗಿಕ ಕಿರುಕುಳ ನೀಡಲಾಗಿತ್ತು. ಸ್ನೇಹಿತರು ಗಲಾಟೆ ಮಾಡಿದಾಗ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.


ಇನ್ನು ಪ್ರಕರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ಪರ ವಿಶೇಷ ಸರಕಾರಿ ಅಭಿಯೋಜಕ ಪ್ರಮೋದ್ ವಾದ ಮಂಡಿಸಿ, 25 ಸಾಕ್ಷಿಗಳನ್ನು ವಿಚಾರಣೆ ನಡೆಸಿ 26 ಮಂದಿಯನ್ನು ಹಾಜರುಪಡಿಸಿದ್ದರು. ಇದೀಗ ಕೋಲಾಹಲ ಸೃಷ್ಟಿಸಿದ್ದ ಪ್ರಕರಣದ ತೀರ್ಪು ಹೊರಬಿದ್ದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.