Tumakuru: ತುಮಕೂರಿನಲ್ಲಿ ನಾಪತ್ತೆಯಾಗಿದ್ದ 4 ಮಕ್ಕಳು ಹಾಸನದಲ್ಲಿ ಪತ್ತೆ..!
ಕಳೆದ 2 ವರ್ಷಗಳಿಂದ ಬಾಲಕಿ ರಮೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ತಮ್ಮಿಬ್ಬರ ಪ್ರೀತಿಗೆ ಸಹಾಯ ಮಾಡಿದಕ್ಕೆ ಮೂವರು ಮಕ್ಕಳನ್ನು ಬಾಲಕಿ ತಮ್ಮ ಜತೆಯಲ್ಲೇ ಬೆಂಗಳೂರಿಗೆ ಕರೆದೊಯ್ದಿದ್ದಾಳಂತೆ.
ತುಮಕೂರು: ತುಮಕೂರಿನ ಒಂದೇ ಗ್ರಾಮದಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಹಾಸನದಲ್ಲಿ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಪತ್ತೆಯಾಗಿದ್ದ ಈ ಮಕ್ಕಳನ್ನು ಹಾಸನದ KSRTC ಬಸ್ ನಿಲ್ದಾಣದಲ್ಲಿ ಪಟ್ಟನಾಯಕನಹಳ್ಳಿ ಪೊಲೀಸರು ಹಾಸನ ಪೊಲೀಸರ ಸಹಕಾರದೊಂದಿಗೆ ರಕ್ಷಿಸಿದ್ದಾರೆ. ಈ ಮೂಲಕ ನೊಂದ ಕುಟುಂಬದ ಸದಸ್ಯರ ಆಶಾಕಿರಣಗಳಾಗಿ ಹೊರ ಹೊಮ್ಮಿದ್ದಾರೆ.
ಅಂದಹಾಗೆ ಇವರು ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚಿಕ್ಕಬಾಣಗೆರೆ ಗ್ರಾಮದ ಒಂದೇ ಮನೆಯ ನಾಲ್ವರು ಮಕ್ಕಳಾಗಿದ್ದಾರೆ. ಮೊನ್ನೆ ಶನಿವಾರ (ಮೇ 20)ರಂದು ನಾಪತ್ತೆಯಾಗಿ ಈ ಪ್ರಕರಣ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ತನಿಖಾ ಹಂತದಲ್ಲಿತ್ತು. ಪೊಲೀಸರು ಇವರನ್ನು ಹುಡುಕಿದ ಸ್ಥಳ ಒಂದಲ್ಲ ಎರಡಲ್ಲ. ತುಮಕೂರು, ಚಿಕ್ಕಮಗಳೂರು, ಬೆಂಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹುಡುಕಾಡಿ ಹೈರಾಣಾಗಿದ್ದರು.
ಇದನ್ನೂ ಓದಿ: ಕಾಲುವೆಯಲ್ಲಿ ಮುಳುಗಿ ಮೂವರು ಯುವಕರ ದಾರುಣ ಸಾವು
ಕೊನೆಗೆ ಹಾಸನದ KSRTC ಬಸ್ ನಿಲ್ದಾಣದಲ್ಲಿ ನಾಲ್ವರು ಮಕ್ಕಳು ಪತ್ತೆಯಾಗಿ ಪ್ರಕರಣ ಸುಖಾಂತ್ಯ ಕಂಡಿದೆ. ಈ ಬಗ್ಗೆ ಪಟ್ಟನಾಯಕಹಳ್ಳಿ DYSP ನವೀನ್ ನೇತೃತ್ವದಲ್ಲಿ 4 ತಂಡಗಳು ಶ್ರಮಿಸಿವೆ. ಈ ಮಕ್ಕಳು ಓಡಿ ಬಂದ ವಿಷಯ ಕೇಳಿದರೆ ಆಶ್ಚರ್ಯ ಪಡುತ್ತೀರಾ! ಕಳೆದ 2 ವರ್ಷಗಳಿಂದ ಬಾಲಕಿ ರಮೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳಂತೆ. ತಮ್ಮಿಬ್ಬರ ಪ್ರೀತಿಗೆ ಸಹಾಯ ಮಾಡಿದಕ್ಕೆ ಮೂವರು ಮಕ್ಕಳನ್ನು ಬಾಲಕಿ ತಮ್ಮ ಜತೆಯಲ್ಲೇ ಬೆಂಗಳೂರಿಗೆ ಕರೆದೊಯ್ದಿದ್ದಾಳಂತೆ.
ಬಳಿಕ ಬೆಂಗಳೂರಿನಿಂದ ಹಾಸನಕ್ಕೆ ಬಂದಿದ್ದಾರೆ. ಇದೀಗ ಪೊಲೀಸರ ಸತತ ಪ್ರಯತ್ನದಿಂದ ನಾಲ್ವರು ಮಕ್ಕಳನ್ನು ಪೊಲೀಸರು ಪತ್ತೆ ಮಾಡಿ ಈ ಹೈಲಾಟಕ್ಕೆ ಬ್ರೇಕ್ ಹಾಕಿದ್ದಾರೆ. ಮಕ್ಕಳ ಆಟ, ಪೋಷಕರಿಗೆ ಸಂಕಟ ಎಂಬತಾಗಿದೆ ಈ ಘಟನೆ.
ಇದನ್ನೂ ಓದಿ: ಸಿದ್ದರಾಮಯ್ಯ ಬಗ್ಗೆ ಫೇಕ್ ನ್ಯೂಸ್ ಹಂಚಿದ ಶಿಕ್ಷಕ ಅಮಾನತು; ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.