ತುಮಕೂರು : ಕಂಟ್ರಾಕ್ಟರ್ ಒಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ದೇವರಾಯನ ದುರ್ಗದ ಗೆಸ್ಟ್ ಹೌಸ್ ನಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ನಗರದ ಸಪ್ತಗಿರಿ ಬಡಾವಣೆ ಮೂಲದ ಟಿ.ಎನ್ ಪ್ರಸಾದ್ ಎಂಬುವ ಕಂಟ್ರಾಕ್ಟರ್ ಒಬ್ಬರು ತುಮಕೂರಿನ ದೇವರಾಯನ ದುರ್ಗದ ಗೆಸ್ಟ್ ಹೌಸ್ ನಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಮೂಲತಹ ಪ್ರಸಾದ್ ರವರು ತುಮಕೂರಿನಲ್ಲಿ ಕಂಟ್ರಾಕ್ಟರ್ ವೃತ್ತಿ ನಿರ್ವಹಿಸುತ್ತಿದ್ದು ಪಿಡಬ್ಲ್ಯೂಡಿ ಇಲಾಖೆಯ ಸಿವಿಲ್ ಕಂಟ್ರಾಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು ಇತ್ತೀಚಿಗೆ ಸಾಲದ ಸುಳಿಯಲಿ ಸಿಲುಕಿದ್ದರು ಎನ್ನಲಾಗಿದೆ.


ಇನ್ನು ಕಂಟ್ರಾಕ್ಟರ್ ಆತ್ಮಹತ್ಯೆ ವಿಷಯ ತುಮಕೂರಿನ ಕಾಂಟ್ರಾಕ್ಟರ್ ಗಳಿಗೆ ತಿಳಿದ ಕೂಡಲೇ ದೇವರಾಯನ ದುರ್ಗದ ಗೆಸ್ಟ್ ಹೌಸ್ ಗೆ ಕಂಟ್ರಾಕ್ಟರ್ ಗಳ ತಂಡ  ಜಮಾವನೆಗೊಂದರು


ಇನ್ನು ಇದೆ  ವೇಳೆ ಮಾತನಾಡಿರುವ ತುಮಕೂರು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಬಲರಾಮ್ ಮಾತನಾಡಿ ಇತ್ತೀಚಿಗೆ ಮೃತಪಟ್ಟಿರುವ ಗೆಳೆಯ ಟಿ.ಎನ್ ಪ್ರಸಾದ್ ಸಾವಿನ ಸುಳಿಯಲ್ಲಿ ಸಿಲುಕಿದ್ದರು ಇನ್ನು ಸಾಲದ ಒತ್ತಡ ಕೂಡ ಜಾಸ್ತಿಯಾಗಿದ್ದು ಇತ್ತೀಚಿಗೆ ಕೆಲಸ ನಿರ್ವಹಿಸಿದ್ದ ಬಿಲ್ಗಳು ಸಹ ಆಗಿರಲಿಲ್ಲ ಇತ್ತೀಚಿಗೆ ಇದ್ದ ಮನೆಯನ್ನು ಸಹ ಮಾರಿಕೊಂದಿದ್ದರು ಇನ್ನು ರಾಜ್ಯದ ಭ್ರಷ್ಟ ಆಡಳಿತ ಹಾಗೂ ರಾಜಕಾರಣಿಗಳ ವ್ಯವಸ್ಥೆ ಇಂದಿನ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ.


ಮತ್ತೋರ್ವ ಕಂಟ್ರಾಕ್ಟರ್  ರಾಜು ಪ್ರತಿಕ್ರಿಯೆ ನೀಡಿದ್ದು ನೆನ್ನೆಯಿಂದ ನಾಪತ್ತೆಯಾಗಿದ್ದ ಸ್ನೇಹಿತನಾಗಿ ಹಲವು ಕಡೆ ಹುಡುಕಾಡಿದ್ದು ಇಂದು ಬೆಳಗ್ಗೆ ದೇವರಾಯನ ದುರ್ಗದ ಗೆಸ್ಟ್ ಹೌಸ್ ನಲ್ಲಿ ಇರುವ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದು ಕಂಡುಬಂದಿದೆ ಎಂದ ಅವರು ಇನ್ನು ಆತ್ಮಹತ್ಯೆಗೆ ಸಾಲದ ಸುಳಿ ಹಾಗೂ ಭ್ರಷ್ಟ ವ್ಯವಸ್ಥೆ ಹಾಗೂ ಸರಿಯಾದ ಸಮಯಕ್ಕೆ ಬಿಲ್ಗಳು ಪಾವತಿಯಾಗದೆ ಸಾಕಷ್ಟು ಮನನೊಂದಿದ್ದರು ಇದಕ್ಕೆ ಸಂಬಂಧಿಸಿದಂತೆ ನಾವು ಸಹ ಧೈರ್ಯ ತುಂಬಿದ್ದೆವು ಆದರೆ ಏಕಾಏಕಿ ಫ್ಯಾನ್ಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದರು.


ಇನ್ನು ರಾಜ್ಯದ್ಯಂತ ಸುದ್ದಿಯಲ್ಲಿರುವ 40 ಪರ್ಸೆಂಟ್ ಕಮಿಷನ್ ಆರೋಪದ ಬೆನ್ನಲ್ಲೇ ಮತ್ತೋರ್ವ ಕಂಟ್ರಾಕ್ಟರ್ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ .


 ಇನ್ನು ಆತ್ಮಹತ್ಯೆ ಮಾಡಿಕೊಂಡಿರುವ ಪಿಡಬ್ಲ್ಯೂಡಿ ಕಂಟ್ರಾಕ್ಟರ್ ಟಿ.ಎನ್ ಪ್ರಸಾದ್ ರವರು ಇತ್ತೀಚಿಗೆ ಸಿವಿಲ್ ಕಾಂಟ್ರಾಕ್ಟ್ ಕೆಲಸ ನಿರ್ವಹಿಸಿದ್ದ ಬಿಲ್ಗಳು ಪೆಂಡಿಂಗ್ ಇದ್ದು ಇದರಿಂದ ಸಾಲದ ಸುಳಿಗೆ ಸಿಲುಕಿದ್ದರು ಎನ್ನಲಾಗಿದೆ.


ಸ್ಥಳದಲ್ಲಿ ಡೆತ್ ನೋಟ್ ಪತ್ತೆ?


ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದೆ ಎನ್ನಲಾಗಿದೆ.


ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಪ್ರಸಾದ್ ಮೃತಪಟ್ಟ ಘಟನೆ ತಿಳಿಯುತ್ತಿದ್ದಂತೆ ತುಮಕೂರಿನ ಕಂಟ್ರಾಕ್ಟರ್ ಗಳು ಹಾಗೂ ಕುಟುಂಬ ವರ್ಗದವರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿದಿದ್ದಾರೆ.


ಸ್ಥಳಕ್ಕೆ ಪೊಲೀಸರ ಬೇಟಿ ಪರಿಶೀಲನೆ


ಘಟನೆ ತಿಳಿದ ಕೂಡಲೇ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ತನಿಖೆ ಕೈಗೊಂಡಿದ್ದು. ಮೃತ ದೇಹವನ್ನ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.