OMG: ಟಿವಿ ರಿಮೋಟ್ ಗಲಾಟೆ ಸಾವಿನಲ್ಲಿ ಅಂತ್ಯ..!
Molakalmuru Crime News: ಕೋಪದಲ್ಲಿ ಅಪ್ಪ ಎಸೆದ ಕತ್ತರಿ ಕತ್ತಿಗೆ ಬಿದ್ದು 16 ವರ್ಷದ ಚಂದ್ರಶೇಖರ್ ಸಾವನ್ನಪ್ಪಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಬೆಂಗಳೂರು: ಟಿವಿ ರಿಮೋಟ್ಗಾಗಿ ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ. ಅಣ್ಣ-ತಮ್ಮಂದಿರ ಟಿವಿ ರಿಮೋಟ್ ಗಲಾಟೆಯಿಂದ ಬೇಸತ್ತ ತಂದೆ ಹಿರಿಮಗನ ಮೇಲೆ ಕತ್ತರಿ ಎಸೆದಿದ್ದಾರೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಹೌದು, ಕೋಪದಲ್ಲಿ ಅಪ್ಪ ಎಸೆದ ಕತ್ತರಿ ಕತ್ತಿಗೆ ಬಿದ್ದು 16 ವರ್ಷದ ಚಂದ್ರಶೇಖರ್ ಸಾವನ್ನಪ್ಪಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಐಟಿ ದಾಳಿಯಲ್ಲಿ ಸಿಕ್ಕಿದ್ದು SST & YST ಟ್ಯಾಕ್ಸ್ ಹಣ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಹೆಚ್ಡಿಕೆ
ಟಿವಿ ನೋಡುತ್ತಿದ್ದಾಗ ನನಗೆ ರಿಮೋಟ್ ಬೇಕು… ನನಗೆ ರಿಮೋಟ್ ಬೇಕು.. ಅಂತಾ ಅಣ್ಣ-ತಮ್ಮಂದಿರು ಜಗಳವಾಡುತ್ತಿದ್ದರು. ಈ ವೇಳೆ ಅಲ್ಲಿಯೇ ಇದ್ದ ಅವರ ಅಪ್ಪನಿಗೆ ವಿಪರಿತ ಕೋಪ ಬಂದಿದೆ. ರಿಮೋಟ್ಗಾಗಿ ಅಣ್ಣ-ತಮ್ಮಂದಿರುವ ಜಗಳವಾಡುವುದನ್ನು ಕಂಡು ಬೇಸತ್ತ ತಂದೆ ಸ್ಥಳದಲ್ಲಿಯೇ ಇದ್ದ ಕತ್ತರಿಯನ್ನು ತೆಗೆದುಕೊಂಡು ರಭಸವಾಗಿ ಎಸೆದಿದ್ದಾನೆ.
ಅಪ್ಪ ಕೋಪದಲ್ಲಿ ಎಸೆದ ಕತ್ತರಿ ಅವರ ಹಿರಿಯ ಮಗ ಚಂದ್ರಶೇಖರ್ನ ಕತ್ತಿಗೆ ಬಿದ್ದಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ವಿಷಯ ತಿಳಿದು ಮೊಳಕಾಲ್ಮೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ಮುದಿನ ತನಿಖೆ ಕೈಗೊಂಡದ್ದಾರೆ.
ಇದನ್ನೂ ಓದಿ: ಶಕ್ತಿ ಯೋಜನೆ ತಂದ ನಾಯಕರೇ ಈ ಸುದ್ದಿ ನೋಡಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.