ಬೆಂಗಳೂರು: ಸುಲಭವಾಗಿ ಹಣ ಮಾಡೊ ಖದೀಮರಿಗೆ ಚಿನ್ನದ ಮಳಿಗೆ ಗಳೆ ಅಡ್ಡೆಯಾಗಿಬಿಟ್ಟಿದೆ. ಫೇಕ್ ಪೇಮೆಂಟ್ ಮಾಡಿ ವಂಚಜಸಿರೊ ಚಾಲಾಕಿ ಜೋಡಿ ಒಂದ್ಕಡೆ ಆದರೆ.. ಮಾಲೀಕನ ಗಮನ ಬೇರೆಡೆ ಸೆಳೆದು ಚಿನ್ನದ ಉಂಗುರ ಕದ್ದಿರೊ ಕಳ್ಳ ಸ್ನೇಹಿತರು ಮತ್ತೊಂದ್ಕಡೆ.. ಈ ಎರಡು ಪ್ರಕರಣವನ್ನು ಪೊಲೀಸರು ಬೇಧಿಸಿದ್ದು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಆ ಉಂಗುರ ತೋರಿಸಿ... ಅದು ಬೇಡ ಈ ನೆಕ್ಲೆಸ್ ತೋರಿಸಿ.. ಇದರ ಬೆಲೆ ಎಷ್ಟು.. ಅದರ ಬೆಲೆ ಎಷ್ಟು‌.. ಹೀಗೆ ಚಿನ್ನದ ಅಂಗಡಿಗೆ ಬಂದ ಕಿಲಾಡಿ ಜೋಡಿ ಆಭರಣಗಳನ್ನ ನೋಡಿದ್ದೇ ನೊಡಿದ್ದು.. ಅಂಗಡಿ ಮಾಲೀಕ ಕೂಡ ಒಳ್ಳೆ ವ್ಯಾಪಾರ ಆಯ್ತು ಅನ್ನೋ ಖುಷಿಯಲ್ಲಿದ್ದ.. ಒಡವೆ ಕೊಟ್ಟು ಹಣವನ್ನು ಪಡೆದುಕೊಂಡಿದ್ದ... ಆನ್ ಲೈನ್ ನಲ್ಲಿ ಪೇಮೆಂಟ್ ಆಯ್ತಾ ಅಂತಾ ನೋಡಿದಾಗ್ಲೇ ಶಾಕ್ ಎದುರಾಗಿತ್ತು..


ಇದನ್ನೂ ಓದಿ:ಪ್ರೊಫೆಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದ KPSC : ಅರ್ಜಿ ಸಲ್ಲಿಸಲು ಈ ಕುರಿತು ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ


ಹೌದು... ಈ ಫೋಟೊದಲ್ಲಿ ಕಾಣ್ತಿರೊ ವ್ಯಕ್ತಿಯ ಹೆಸರು ನಂದನ್.‌ ಇನ್ನು ಈ ಕಿಲಾಡಿ ಲೇಡಿಯ ಹೆಸರು ಕಲ್ಪಿತಾ...ಇಬ್ಬರು ಗಂಡ ಹೆಂಡತಿ ಅಲ್ಲ ಆದ್ರು ಜೊತೆ ಜೊತೆಗೆ ಸುತ್ತಾಡ್ತಿದ್ರು.. ಶಾಪಿಂಗ್ ಮಾಡ್ತಿದ್ರು.. ಚಿನ್ನ ಬೆಳ್ಳಿ ಖರೀದಿಸಿ ಶೋಕಿ ಮಾಡ್ತಿದ್ರು... ಕಷ್ಟಪಟ್ಟು ದುಡಿದ ಹಣದಲ್ಲಿ ಶೋಕಿ ಮಾಡಿದ್ದಿದ್ರೆ ಸಮಸ್ಯೆ ಏನು ಇರ್ತಿರ್ಲಿಲ್ಲ... ಆದ್ರೆ ಈ ಜೋಡಿ ಶಾಪಿಂಗ್ ಮಾಡ್ತಿದ್ದ ಸ್ಟೈಲ್ ನೋಡಿದ್ರೆ ನೀವೆ ಬೆಚ್ಚಿ ಬೀಳ್ತಿರಾ.


ಹೌದು ಡಿಜಿಟಲ್‌ ಪೇಮೆಂಟ್ ಆ್ಯಪ್ ಗಳನ್ನೇ ಬಂಡವಾಳ ಮಾಡಿಕೊಳ್ತಿದ್ದ ಈ ಜೋಡಿ ವಸ್ತುಗಳನ್ನ ಖರೀದಿಸಿ ಫೆಕ್ ಪೇಮೆಂಟ್ ಆ್ಯಪ್ ಮೂಲಕ ಹಣ ಪಾವತಿಸಿರೋದಾಗಿ ತೋರಿಸಿ ವಂಚಿಸ್ತಿದ್ರು.. ಜ್ಯೂಯಲ್ಲರಿ ಶಾಪ್ ನಲ್ಲಿ ಅದೇ ರೀತಿಯ ನಾಟಕ ಮಾಡಿ ಎಸ್ಕೇಪ್ ಆಗಿದ್ರು. ಆದ್ರೆ ಇದೇ ವಂಚಕರನ್ನ 15 ದಿನದ ಬಳಿಕ ಬ್ಯಾಡರಹಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.


ಇದನ್ನೂ ಓದಿ:ಸಿಲಿಕಾನ್‌ ಸಿಟಿ ಚಿನ್ನದ ಅಂಗಡಿ ಮಾಲೀಕರೇ ಹುಷಾರ್..‌ ಹುಷಾರ್..!‌


ತೆಸ್.‌.15 ದಿನದ ಹಿಂದೆ ಗೊಲ್ಲರಹಟ್ಟಿಯಲ್ಲಿರುವ ಪರಮೇಶ್ವರ ಬ್ಯಾಂಕರ್ಸ್ ಅಂಡ್ ಜ್ಯೂವಲ್ಲರ್ಸ್ ಗೆ ಬಂದಿದ್ದಾರೆ...ಹೀಗೆ ಬಂದವರು 1.65 ಲಕ್ಷ ಮೌಲ್ಯದ 36 ಗ್ರಾಂ ಚಿನ್ನಾಭತಣ ಖರೀದಿ ಮಾಡಿದ್ದಾರೆ..ಬಳಿಕ ಆನ್ ಲೈನ್ ಮೂಲಕ ಹಣ ಪಾವತಿಸಿ ಹೊರಟಿದ್ದಾರೆ.‌.. ಹಣ ಪಾವತಿಸಿದ ಸಂದೇಶವನ್ನು ಮಾಲೀಕರಿಗೆ ತೋರಿಸಿದ್ದಾರೆ.. ಸ್ವಲ್ಪ ಹೊತ್ತಿನ ಬಳಿಕ ಮಾಲೀಕರು ತಮ್ಮ ಖಾತೆ ಪರಿಶೀಲಿಸಿದಾಗ ಮೋಸ ಹೋಗಿರೋದು ಗೊತ್ತಾಗಿದೆ.


ಫೆಕ್ ಪೇಮೆಂಟ್ ಆ್ಯಪ್ ಮೂಲಕ ಹಣ ಪಾವತಿಸಿರೊ ರೀತಿ ಡ್ರಾಮಾ ಮಾಡಿ ವಂಚಿಸಿರೋದು ಬೆಳಕಿಗೆ ಬಂದಿದೆ. ಮಾಲೀಕ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿದ್ದಾರೆ..ವಿಚಾರಣೆ ವೇಳೆ ಆರೋಪಿಗಳು 1.30 ಲಕ್ಷ ಚಿನ್ನ ಅಡಮಾನ ಇಟ್ಟಿರೋದು ಗೊತ್ತಾಗಿದೆ. ಅಷ್ಟೇ ಅಲ್ಲ. ಇದೇ ರೀತಿ ಹಲವು ಚಿನ್ನದ ಅಂಗಡಿಗಳಲ್ಲಿ ವಂಚಿಸೊರೊ ಶಾಕಿಂಗ್ ಸಂಗತಿ ಬಯಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.