OMG: ಶಾಲಾ ಶುಲ್ಕ ಪಾವತಿಸಲು ಸಾಧ್ಯವಾಗದೆ ಪುತ್ರಿಯೊಂದಿಗೆ ತಾಯಿ ಆತ್ಮಹತ್ಯೆ!
Heart-warming incident: ಮಂಗಳವಾರ(ಜೂನ್ ೧೮) ಸಂಜೆ 5.30ರ ವೇಳೆಗೆ ತನ್ನ ಪುತ್ರಿಯೊಂದಿಗೆ ಜಮೀನಿನಲ್ಲಿರುವ ಬಾವಿಯ ಹತ್ತಿರ ಹೋಗಿದ್ದಳು. ಅಲ್ಲಿಂದಲೇ ಪತಿಗೆ ವಿಡಿಯೋ ಕಾಲ್ ಮಾಡಿದ್ದ ಭಾಗ್ಯಶ್ರೀ ಅವರು ಕೊನೆಯ ಬಾರಿಗೆ ಮಗಳ ಮುಖವನ್ನು ನೋಡುವಂತೆ ಹೇಳಿದ್ದಳು. ಬಳಿಕ ಪುತ್ರಿಯೊಂದಿಗೆ ಬಾವಿಗೆ ಹಾರಿದ್ದಾಳೆ.
Heart-warming incident: ಮಕ್ಕಳ ಶಾಲೆಯ ಶುಲ್ಕವನ್ನು ಕಟ್ಟಲು ಸಾಧ್ಯವಾಗದೆ ಮಹಿಳೆಯೊಬ್ಬರು ತಮ್ಮ ಪುತ್ರಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮೃತರನ್ನು ಭಾಗ್ಯಶ್ರೀ ವೆಂಕಟ್ ಹಲ್ಸೆ (26) ಮತ್ತು ಸಮೀಕ್ಷಾ ವೆಂಕಟ್ ಹಲ್ಸೆ (5) ಎಂದು ಗುರುತಿಸಲಾಗಿದೆ. ಹಣದ ಕೊರತೆಯಿಂದ ತನ್ನ ಮಗಳನ್ನು CBSE ಶಾಲೆಗೆ ಕಳುಹಿಸಲು ಸಾಧ್ಯವಾಗದ ಹಿನ್ನೆಲೆ ಭಾಗ್ಯಶ್ರೀ ನೊಂದುಕೊಂಡಿದ್ದರು. ಮಗಳ ಜೊತೆಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿಲಂಗಾ ತಹಸಿಲ್‌ನ ಮಾಲೆಗಾಂವ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಪತಿ ಒಂದೂವರೆ ಎಕರೆ ಜಮೀನು ಹೊಂದಿದ್ದರು. ಕೃಷಿ ಮತ್ತು ಮೇಕೆ ಸಾಕಣೆಯಿಂದ ಈ ಕುಟುಂಬ ಜೀವನ ನಡೆಸುತ್ತಿತ್ತು. ಭಾಗ್ಯಶ್ರೀಯವರು ತನ್ನ ಮಗ ಮತ್ತು ಮಗಳನ್ನು CBSE-ಸಂಯೋಜಿತ ಶಾಲೆಗೆ ಕಳುಹಿಸಲು ಬಯಸಿದ್ದರು. ಆದರೆ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಿರಲಿಲ್ಲ. ಹೀಗಾಗಿ ಮಕ್ಕಳ ಶಿಕ್ಷಣದ ಬಗ್ಗೆ ಭಾಗ್ಯಶ್ರೀಯವರು ಖಿನ್ನತೆಗೆ ಒಳಗಾಗಿದ್ದರಂತೆ.
ಇದನ್ನೂ ಓದಿ: Shocking News: ಪೋರ್ನ್ ವಿಡಿಯೋ ಚಟಕ್ಕೆ ಮಗಳನ್ನೇ ಬಲಿ ಪಡೆದ ಪಾಪಿ ತಂದೆ..!
ಕಳೆದ ವರ್ಷವಷ್ಟೇ ಭಾಗ್ಯಶ್ರೀಯವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದರು. ಹೀಗಾಗಿ ಅವರಿಗೆ ಖಿನ್ನತೆ ಹೆಚ್ಚಾಗಿತ್ತು ಅಂತಾ ಆಕೆಯ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಮಂಗಳವಾರ(ಜೂನ್ ೧೮) ಸಂಜೆ 5.30ರ ವೇಳೆಗೆ ತನ್ನ ಪುತ್ರಿಯೊಂದಿಗೆ ಜಮೀನಿನಲ್ಲಿರುವ ಬಾವಿಯ ಹತ್ತಿರ ಹೋಗಿದ್ದಳು. ಅಲ್ಲಿಂದಲೇ ಪತಿಗೆ ವಿಡಿಯೋ ಕಾಲ್ ಮಾಡಿದ್ದ ಭಾಗ್ಯಶ್ರೀ ಅವರು ಕೊನೆಯ ಬಾರಿಗೆ ಮಗಳ ಮುಖವನ್ನು ನೋಡುವಂತೆ ಹೇಳಿದ್ದಳು. ಬಳಿಕ ಪುತ್ರಿಯೊಂದಿಗೆ ಬಾವಿಗೆ ಹಾರಿದ್ದಾಳೆ.
ಸ್ಥಳೀಯರೊಂದಿಗೆ ಬಾವಿ ಬಳಿ ತೆರಳಿದ ಭಾಗ್ಯಶ್ರೀಯವರ ಪತಿಗೆ ಶಾಕ್ ಆಗಿತ್ತು. ಅವರು ಬಾವಿಯ ಬಳಿ ತೆರಳಿದ್ದಾಗ ಭಾಗ್ಯಶ್ರೀ ಮತ್ತು ಆಕೆಯ ಪುತ್ರಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಸ್ಥಳೀಯರ ನೆರವಿನಿಂದ ಪೊಲೀಸರು ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಭಾಗ್ಯಶ್ರೀ ತಮ್ಮ ಪುತ್ರನನ್ನು ಸಹ ಬಾವಿಗೆ ಕರೆದೊಯ್ಯಲು ಪ್ರಯತ್ನಿಸಿದ್ದರಂತೆ. ಆದರೆ ಆತ ಬಾರದ ಕಾರಣ ಪುತ್ರಿಯೊಂದಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಪುತ್ರನ ಜೀವ ಉಳಿದಿದೆ. ಈ ಬಗ್ಗೆ ಔರಾದ್ ಶಹಾಜಾನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಶ್ವದ 3ನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿ ಭಾರತ...!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.