ಲಕ್ನೋ: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಬರೋಬ್ಬರಿ 10 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿಯನ್ನು ವಪಡಿಸಿಕೊಂಡಿದ್ದಾರೆ.  ಈ ಪ್ರಕರಣ ಸಂಬಂಧ ಲಕ್ನೋದಲ್ಲಿ ತಿಮಿಂಗಿಲ ವಾಂತಿ ಕಳ್ಳಸಾಗಣೆ ಮಾಡುತ್ತಿದ್ದ ಗ್ಯಾಂಗ್‌ನ ನಾಲ್ವರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆ (UPSTF) ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ದಾಳಿಯ ವೇಳೆ ಎಸ್‌ಟಿಎಫ್ 4.12 ಕೆಜಿಯಷ್ಟು ತಿಮಿಂಗಿಲ ವಾಂತಿ ವಶಕ್ಕೆ ತೆಗೆದುಕೊಂಡಿದ್ದು, ಇದರ ಮಾರುಕಟ್ಟೆ ಮೌಲ್ಯ 10 ಕೋಟಿ ರೂ. ಎಂದು ಪೊಲೀಸರು ಅಧಿಕಾರಿಗಳು ತಿಳಿಸಿದ್ದಾರೆ. 1972ರ ವನ್ಯಜೀವಿ (ರಕ್ಷಣೆ) ಕಾಯಿದೆಯ ಪ್ರಕಾರ ಸುಗಂಧ ದ್ರವ್ಯಗಳಿಗೆ ಭಾರೀ ಬೇಡಿಕೆ ಇರುವ ತಿಮಿಂಗಿಲ ವಾಂತಿ ಮಾರಾಟವನ್ನು ನಿಷೇಧಿಸಲಾಗಿದೆ.  


ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ‘ಝಡ್‌ ಪ್ಲಸ್‌’ ಭದ್ರತೆ


ಸೆಪ್ಟೆಂಬರ್ 5ರಂದು ಯುಪಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ನಿಷೇಧಿಸಿರುವ ತಿಮಿಂಗಿಲ ವಾಂತಿ ಕಳ್ಳಸಾಗಣೆಯಲ್ಲಿ ತೊಡಗಿದ್ದ ಗ್ಯಾಂಗ್‌ನ ನಾಲ್ವರು ಸದಸ್ಯರನ್ನು ಲಕ್ನೋದ ಗೋಮ್ತಿನಗರ ವಿಸ್ತರಣಾ ಪ್ರದೇಶದ ಪೊಲೀಸ್ ಠಾಣಾ ವ್ಯಪ್ತಿಯಲ್ಲಿ ಬಂಧಿಸಲಾಯಿತು. ಬಂಧಿತರ ಬಳಿ ಇದ್ದ 10 ಕೋಟಿ ರೂ. ಮೌಲ್ಯದ 4.12 ಕೆಜಿಯಷ್ಟು ತಿಮಿಂಗಿಲ ವಾಂತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.  


ತಿಮಿಂಗಿಲ ವಾಂತಿಯನ್ನು ‘ಗ್ರೇ ಅಂಬರ್’ ಮತ್ತು ‘ಫ್ಲೋಟಿಂಗ್ ಗೋಲ್ಡ್’ ಎಂದೂ ಕರೆಯುತ್ತಾರೆ. ಇದನ್ನು ಪ್ರಪಂಚದ ವಿಚಿತ್ರವಾದ ನೈಸರ್ಗಿಕ ವಸ್ತುವೆಂದು ಹೇಳಲಾಗಿದೆ. ಈ ‘ಫ್ಲೋಟಿಂಗ್ ಗೋಲ್ಡ್’ ಪತ್ತೆ ಹಚ್ಚಿ ಅದನ್ನು ಅಕ್ರಮವಾಗಿ ಮಾರಾಟ ಮಾಡಲು ಅನೇಕರು ಪ್ರಯತ್ನಿಸುತ್ತಾರೆ. ಈ ವರ್ಷ ಅಕ್ರಮವಾಗಿ ತಿಮಿಂಗಲ ವಾಂತಿ ಮಾರಾಟ ಮಾಡಲು ಯತ್ನಿಸಿದ್ದ ಅನೇಕರನ್ನು ಪೊಲೀಸರು ಬಂಧಿಸಿದ್ದಾರೆ. ಆಗಾಗ ಕಳ್ಳಸಾಗಣೆ ಮಾಡುವ ಈ ಘನ, ಮೇಣದಂತಹ ವಸ್ತು ಚಿನ್ನಕ್ಕಿಂತಲೂ ಹೆಚ್ಚು ದುಬಾರಿಯಾಗಿದೆ.


ಇದನ್ನೂ ಓದಿ: ದ್ವೇಷ ರಾಜಕಾರಣಕ್ಕೆ ತಂದೆಯನ್ನು ಕಳೆದುಕೊಂಡಂತೆ ನನ್ನ ದೇಶವನ್ನು ಕಳೆದುಕೊಳ್ಳಲ್ಲ : ರಾಹುಲ್‌ ಗಾಂಧಿ


ತಿಮಿಂಗಲ ವಾಂತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಸುಗಂಧ ದ್ರವ್ಯ ತಯಾರಿಸಲು ಹೆಚ್ಚಾಗಿ ಇದನ್ನು ಬಳಕೆ ಮಾಡಲಾಗುತ್ತದೆ. ಹೀಗಾಗಿ ಇದಕ್ಕೆ ಭಾರೀ ಬೇಡಿಕೆ ಜೊತೆಗೆ ದುಬಾರಿ ಬೆಲೆಯೂ ಇದೆ.   022


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.