WATCH: ಸಿಲಿಕಾನ್ ಸಿಟಿಯಲ್ಲಿ ವೀಲಿಂಗ್ ಪುಂಡರ ಹಾವಳಿ, ಎದೆ ಝಲ್ ಎನ್ನುವ ದೃಶ್ಯ ಸೆರೆ

ಯುವಕರ ವೀಲಿಂಗ್ ನೋಡಿದ್ರೆ ನಿಮ್ಮ ಎದೆ ಝಲ್ ಎನ್ನುತ್ತೆ. ಹಗಲು ಹೊತ್ತು ಸಾಲದು ಅಂತ ನೈಟ್ ಟೈಂ ನಲ್ಲೂ ವೀಲಿಂಗ್ ಮಾಡಿ ಪುಂಡರು ಪುಂಡಾಟ ಮುಂದುವರೆಸಿದ್ದಾರೆ.
ಬೆಂಗಳೂರು: ಯುವಕರ ವೀಲಿಂಗ್ ನೋಡಿದ್ರೆ ನಿಮ್ಮ ಎದೆ ಝಲ್ ಎನ್ನುತ್ತೆ. ಹಗಲು ಹೊತ್ತು ಸಾಲದು ಅಂತ ನೈಟ್ ಟೈಂ ನಲ್ಲೂ ವೀಲಿಂಗ್ ಮಾಡಿ ಪುಂಡರು ಪುಂಡಾಟ ಮುಂದುವರೆಸಿದ್ದಾರೆ.
ಇದನ್ನೂ ಓದಿ: Vikrant Rona: ‘ವಿಕ್ರಾಂತ್ ರೋಣ‘ದಲ್ಲಿ ದ್ವಿಪಾತ್ರದಲ್ಲಿ ಕಿಚ್ಚ? ಹೀರೋನಾ? ವಿಲನ್ನಾ!!
ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿ ಮೂರು ಸ್ಕೂಟರ್‌ನಲ್ಲಿ ಪುಂಡರು ವೀಲಿಂಗ್ ಮಾಡುವ ದೃಶ್ಯ ಮೊಬೈಲ್‌ನಲ್ಲಿ ಸರೆಯಾಗಿದೆ. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ವಾಹನ ದಟ್ಟಣೆ ಇರುವ ವೇಳೆಯಲ್ಲೇ ವೀಲಿಂಗ್ ಮಾಡಿ ಹುಚ್ಚಾಟ ಮೆರೆದಿದ್ದಾರೆ.
ಹೆಲ್ಮೆಟ್ ಧರಿಸದೇ ಓವರ್ ಸ್ಪೀಡ್ ಆಗಿ ಅಡ್ಡದಿಡ್ಡಿ ಬೈಕ್ ಓಡಿಸಿದ್ದಾರೆ. ಯುವಕರ ಹುಚ್ಚಾಟದಿಂದ ಇತರೆ ವಾಹನ ಸವಾರರಿಗೆ ಸಂಕಷ್ಟ ಅನುಭವಿಸುವಂತಾಗಿದೆ. ರೀಲ್ಸ್ ಶೋಕಿಗಾಗಿ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ಯುವಕರು ವೀಲಿಂಗ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ.
ಏರಿಯಾದಲ್ಲಿ ವೀಲಿಂಗ್ ಹುಚ್ಚಾಟ ನಡೆಸುವವರನ್ನು ಕಂಡರೆ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಇಲಿ ಕಚ್ಚಿದ್ದಕ್ಕೆ 5 ಲಕ್ಷ ಪರಿಹಾರ ಕೇಳಿದ ಭೂಪ, ಠಾಣಾ ಮೆಟ್ಟಿಲೇರಿದ ಪ್ರಕರಣ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.