ಜಾಮೀನು ಮಂಜೂರಾದ್ರೂ. ಜೈಲಿನಿಂದ ಹೊರಬರಲು ಹಿಂದೇಟು ಹಾಕುತ್ತಿರುವುದೇಕೆ ಕ್ರಿಮಿನಲ್ ಗಳು. ಗಣಪತಿ ಹಬ್ಬ ಮುಗಿಲಿ ಅನ್ನುತ್ತಿರುವುದೇಕೆ ಪಾಪಿ ಪ್ರಪಂಚ? ಈ ಕುರಿತ ವರದಿ ಇಲ್ಲದೆ


COMMERCIAL BREAK
SCROLL TO CONTINUE READING

ಯಾವುದೇ ವ್ಯಕ್ತಿ ಯಾವುದೇ ಪ್ರಕರಣದಲ್ಲಿ ಜೈಲು ಸೇರಿದ್ರೆ ಮೊದಲು ಆತ ಮಾಡುವುದೇ ವಕೀಲರನ್ನು ಹಿಡಿದು ಜಾಮೀನು ಪಡೆಯುವ ಕೆಲಸ. ಜಾಮೀನು ಮಂಜೂರಿಗಾಗಿ ಒಳ್ಳೆಯ ವಕೀಲರನ್ನೇ ಸಂಪರ್ಕಿರಿಸಿ ಕೇಳಿದಷ್ಟು ಹಣಕೊಟ್ಟು, ಜೈಲಿನಿಂದ ಹೊರಬರುವುದಕ್ಕೆ ಎದುರು ನೋಡುತ್ತಿರುತ್ತಾನೆ. ಆದ್ರೆ ರಾಜ್ಯದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಜೈಲಿನಲ್ಲಿರುವ ಯಾವ ಕ್ರಿಮಿನಲ್ ಗಳು ಹೊರ ಬರೋದಕ್ಕೆ ಮುಂದಾಗ್ತಿಲ್ಲ. ಜಾಮೀನು ಸಿಕ್ರೂ.. ಶ್ಯೂರಿಟಿ ಕೊಡೋದಕ್ಕೆ ಮುಂದೆ ಬರ್ತಿಲ್ಲ. ಇದಕ್ಕೆ ಕಾರಣ ಗಣೇಶ ಹಬ್ಬ.


ಇದನ್ನೂ ಓದಿ- ತನ್ನ ಮಗಳ ಹಿಂದೆ ಬಿದ್ದ ಪೋಲಿಗೆ ಬುದ್ದಿ ಹೇಳಿದ ತಂದೆ: ಚಾಕು ಇರಿದು ಕೊಂದೇಬಿಟ್ಟ ಪಾಪಿ


ಹೌದು, ಗಣೇಶ ಹಬ್ಬದ ಸಂದರ್ಭದಲ್ಲಿ ಪೊಲೀಸರು, ರೌಡಿಗಳಿಗೆ ಸಮಾಜಘಾತುಕ ಶಕ್ತಿಗಳಿಗೆ ಒಂದು ಶಾಕ್ ಕೋಟ್ಟೇ ಇರ್ತಾರೆ. ಜೈಲಿನಿಂದ ಹೊರಬಂದ ಕ್ರಿಮಿನಲ್ ಗಳಿಗೆ ವಾರ್ನಿಂಗ್ ನೀಡುವುದು, ಆತ ನಟೋರಿಯಸ್ ಆಗಿದ್ರೆ  ಗಡಿಪಾರು ಮಾಡೋದು. ಸಣ್ಣ ಪುಟ್ಟ ಕೇಸ್ ಹಾಕಿ ಮತ್ತೆ ಜೈಲಿಗೆ ಕಳಿಸೋದು ಕಾಮನ್. ಹೀಗಾಗಿಯೇ ಜೈಲಿನಲ್ಲಿರುವ ಬಹಳಷ್ಟು ಕ್ರಿಮಿನಲ್ ಗಳು ತಮಗೆ ಜಾಮೀನು ಸಿಗೋದೇ ಬೇಡಪ್ಪ. ಗಣಪತಿ ಹಬ್ಬ ಮುಗಿದ ಮೇಲೆ ನೋಡೋಣ ಎಂಬ ಭಾವನೆಯಲ್ಲಿದ್ದಾರೆ. 


ಈಗ ಹಬ್ಬದ ಸಂದರ್ಭದಲ್ಲಿ ಹೊರಗೆ ಹೋದ್ರು ಮತ್ತೆ ಪೊಲೀಸ್ರು ಯಾವುದಾದ್ರು ಒಂದು ಕೇಸ್ ಹಾಕಿ ಜೈಲಿಗೆ ಕಳಿಸುತ್ತಾರೆ. ಹೀಗಾಗಿ ಹಬ್ಬದ ವಾತಾವರಣ ತಿಳಿಯಾದ ಮೇಲೆ ಜಾಮೀನು ಪಡೆದರೆ ಆಯ್ತು ಎಂದು ಕ್ರಿಮಿನಲ್ ಗಳು ತಣ್ಣಗೆ ಜೈಲಿನಲ್ಲಿ ಸೇಫ್ ಆಗಿ ಸೆಟಲ್ ಆಗಿದ್ದಾರೆ.


ಇದನ್ನೂ ಓದಿ- ಪೊಲೀಸಪ್ಪನಿಂದ ಪತ್ನಿಗೆ ವರದಕ್ಷಿಣೆ ಕಿರುಕುಳ.. ರಕ್ಷಣೆ ನೀಡಬೇಕಿದ್ದ ಆರಕ್ಷಕನಿಂದಲೇ ಟಾರ್ಚರ್!


ಗಣಪತಿ ಹಬ್ಬದ ನಂತರ ಬಹಳಷ್ಟು ಕ್ರಿಮಿನಲ್ ಗಳು ಜೈಲಿನಿಂದ ಹೊರಬರುವವರಿದ್ದಾರೆ. ಅದರಲ್ಲಿ ಗಾಂಜಾ ಪೆಡ್ಲರ್ ಗಳು ಕಳ್ಳತನ ದರೋಡೆ ಪ್ರಕರಣದ ಆರೋಪ ಎದುರಿಸುತ್ತಿರುವ ರೌಡಿಗಳು ಇದ್ದಾರೆ. ಇವರೆಲ್ಲರೂ ಒಂದೇ ಬಾರಿ ರಿಲೀಸ್ ಆದ್ರೆ... ಮತ್ತೆ ಕ್ರೈಂ ಗಳು ಮರುಕಳಿಸುವ ಸಾಧ್ಯತೆಗಳು ಹೆಚ್ಚಿದೆ.  ಶಿವಮೊಗ್ಗದಲ್ಲೂ ಕೂಡ ಕೆಲವು ಕ್ರಿಮಿನಲ್ ಗಳಿಗೆ ಜಾಮೀನು ಮಂಜೂರಾದ್ರೂ, ಹಬ್ಬ ಆಗ್ಲಿ ಅಂತಾ ರೌಡಿಗಳು ಕಳ್ಳರು ಹಾಗೆಯೇ ಸುಮ್ಮನಿದ್ದಾರೆ. ಇಂತವರ ಮೇಲೆ ಪೊಲೀಸರು ಹದ್ದಿನ ಕಣ್ಣಿಡಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.