ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿಆತ್ಮಹತ್ಯೆ: ತಾಯಿ ಶವದ ಮುಂದೆ ಮಕ್ಕಳ ಕಣ್ಣೀರು
ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಶರಣಾಗಿರುವ ಘಟನೆ ಸಿಲಿಕಾನ್ ಸಿಟಿಯ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ವಿಜಯ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ.
ಬೆಂಗಳೂರು: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಶರಣಾಗಿರುವ ಘಟನೆ ಸಿಲಿಕಾನ್ ಸಿಟಿಯ ರಾಮಮೂರ್ತಿ ನಗರ ಠಾಣಾ ವ್ಯಾಪ್ತಿಯ ವಿಜಯ ಬ್ಯಾಂಕ್ ಕಾಲೋನಿಯಲ್ಲಿ ನಡೆದಿದೆ. ಚಂದಾ ಪುರೋಹಿತ್ ಮೃತ ದುರ್ದೈವಿಯಾಗಿದ್ದಾರೆ. ಈಕೆಯ ಗಂಡ ನರೇಂದರ್ ಸಿಂಗ್ ಸಿಹಿ ತಿಂಡಿ ವ್ಯಾಪಾರ ಮಾಡಿಕೊಂಡಿದ್ದ. 10 ವರ್ಷಗಳ ಹಿಂದೆ ಚಂದಾರನ್ನು ಮದುವೆಯಾಗಿದ್ದ. ಇದಕ್ಕೆ ಸಾಕ್ಷಿಯೆಂಬತೆ ಇಬ್ಬರು ಮುದ್ದಾದ ಗಂಡು ಮಕ್ಕಳಿದ್ದಾರೆ. ಆದರೆ ಸುಂದರ ಸಂಸಾರ ನೋಡಿಕೊಂಡು ಹೋಗುವುದನ್ನು ಮರೆತ ನರೇಂದರ್ ಸಿಂಗ್ ಮತ್ತೊಬ್ಬ ಹೆಣ್ಣಿನ ಸಹವಾಸ ಮಾಡಿದ್ದ. ಈ ವಿಷಯ ಚಂದಾಗೆ ತಿಳಿದು ಮನೆಯಲ್ಲಿ ಗಲಾಟೆ ನಡೆದಿತ್ತು.
ಇದನ್ನೂ ಓದಿ : Crime News : ಹಿಂದೂ ಯುವಕನ ಬಲವಂತವಾಗಿ ಕತ್ನಾ: ಮಾಜಿ ಕಾರ್ಪೋರೇಟರ್ ಸೇರಿ ಮೂವರು ಅರೆಸ್ಟ್
ಹಲವು ಬಾರಿ ಚಂದಾ ಹಾಗೂ ಕುಟುಂಬಸ್ಥರು ನರೇಂದರ್ ಸಿಂಗ್ ಗೆ ಬುದ್ದಿವಾದ ಹೇಳಿದ್ರೂ. ಆದರೆ ಬುದ್ದಿ ಕಲಿಯದ ನರೇಂದರ್ 2 ತಿಂಗಳ ಹಿಂದೆ ಈತ ಯುವತಿಯೊಂದಿಗೆ ದೆಹಲಿಗೆ ಎಸ್ಕೇಪ್ ಆಗಿದ್ದ. ಹೀಗಾಗಿ ಚಂದಾ ಪುರೋಹಿತ್ ಗಂಡ ಕಾಣೆಯಾಗಿದ್ದಾನೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಫೊಲೀಸರು ನರೇಂದರ್ ನನ್ನ ಕರೆದುತಂದು ಬುದ್ದಿವಾದ ಹೇಳಿ ಗಂಡ ಹೆಂಡತಿಯನ್ನು ಒಂದುಗೂಡಿಸಿದ್ದರು. ಆದರೆ ಮತ್ತೆ ಕೆಲ ದಿನಗಳ ನಂತರ ನರೇಂದರ್ ಅಕ್ರಮ ಸಂಬಂಧ ಮುಂದುವರೆಸಿದ್ದ.
ಗಂಡ ಯಾರ ಮಾತನ್ನು ಕೇಳದೆ ಮತ್ತದೇ ಪ್ರವೃತ್ತಿ ಮುಂದುವರೆಸಿದ್ದರಿಂದ ಚಂದಾ ಸಾಕಷ್ಟು ಮನನೊಂದಿದ್ದರು. ಶನಿವಾರ ಇದೇ ವಿಷಯಕ್ಕೆ ಗಂಡ ಹೆಂಡತಿ ನಡುವೆ ಕಿರಿಕ್ ಶುರುವಾಗಿದೆ. ಕೊನೆಯದಾಗಿ ಚಂದಾ ಗಂಡನಿಗೆ ನೀನು ಅಕ್ರಮ ಸಂಬಂಧ ಬಿಟ್ಟು ನನ್ನೊಟ್ಟಿಗೆ ಸಂಸಾರ ನಡೆಸು ಎಂದು ಬೇಡಿಕೊಂಡಿದ್ದಾಳೆ. ಆದರೆ ನರೇಂದರ್ ಮತ್ತೆ ಅಕ್ರಮ ಸಂಬಂಧ ಮುಂದುವರೆಸುತ್ತೇನೆ ಎಂದು ಹೇಳಿದ್ದ ಎನ್ನಲಾಗಿದೆ. ಹೀಗಾಗಿ ಮನನೊಂದ ಚಂದಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇದನ್ನೂ ಓದಿ : Bangalore : ರಕ್ತಚಂದನ ದಿಮ್ಮಿಗಳನ್ನ ಸಾಗಿಸ್ತಿದ್ದ ಗ್ಯಾಂಗ್ ಅರೆಸ್ಟ್
ಸದ್ಯ ಚಂದಾ ಕುಟುಂಬಸ್ಥರು ನರೇಂದರ್, ಚಂದಾಳನ್ನು ಕೊಂದಿದ್ದಾನೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾರೆ. ಹೀಗಾಗಿ ರಾಮಮೂರ್ತಿನಗರ ಪೊಲೀಸರು ನರೇಂದರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹೆಂಡತಿ ಮಸಣದ ಪಾಲಾದ್ರೆ, ಗಂಡ ಜೈಲು ಪಾಲಾಗಿದ್ದಾನೆ. ಆದರೆ ಏನೂ ಅರಿಯದ ಇಬ್ಬರು ಮಕ್ಕಳು ಈಗ ತಾಯಿ ಇಲ್ಲದ ತಬ್ಬಲಿಗಳಾಗಿ ಶವದ ಮುಂದೆ ಕುಳಿತು ರೋಧಿಸುತ್ತಿರುವ ದೃಶ್ಯ ಮನಕಲಕುವಂತಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.