ನವದೆಹಲಿ: ತಂಗಿಗೆ ಚಿನ್ನದ ಉಂಗುರ ಮತ್ತು ಟಿವಿ ಗಿಫ್ಟ್‌ ನೀಡಿದ ಪತಿಯನ್ನು ಪತ್ನಿಯೊಬ್ಬಳು ಹೊಡೆದು ಕೊಲ್ಲಿಸಿರುವ ಘಟನೆ ನಡೆದಿದೆ. ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.


COMMERCIAL BREAK
SCROLL TO CONTINUE READING

ತನ್ನ ಸಹೋದರಿಯ ಮದುವೆ ಸಂದರ್ಭದಲ್ಲಿ ಚಂದ್ರಪ್ರಕಾಶ್‌ ಮಿಶ್ರಾ ಎಂಬಾತ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಿದ್ದ. ಆತನ ತಂಗಿಗೆ ತನ್ನ ಗಂಡ ಬೆಲೆಬಾಳುವ ಗಿಫ್ಟ್‌ ನೀಡಿದ್ದಾನೆಂದು ಪತ್ನಿ ಅಸಮಾಧಾನಗೊಂಡಿದ್ದಳು.


ಇದನ್ನೂ ಓದಿ: OMG: ನೂಡಲ್ಸ್​ ಪಾಕೆಟ್​​ಗಳಲ್ಲಿ 6 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ, ವಜ್ರಗಳು ಪತ್ತೆ!  


ಗಂಡನ ನಡೆಯಿಂದ ಕೆರಳಿದ ಪತ್ನಿ ತಮ್ಮ ಕುಟುಂಬಸ್ಥರಿಗೆ ಹೇಳಿ ಹೊಡೆದು ಕೊಲೆ ಮಾಡಿಸಿದ್ದಾಳೆ. ತನ್ನ ಸೋದರರಿಗೆ ಕರೆ ಮಾಡಿದ ಚಂದ್ರಪ್ರಕಾಶ್ ಮಿಶ್ರಾನ ಪತ್ನಿ ಆತನಿಗೆ ಬುದ್ದಿ ಕಲಿಸಿ ಅಂತಾ ಸೂಚಿಸಿದ್ದಳು.


ಬಳಿಕ ಮನೆ ಬಳಿದ ಬಂದ ಆಕೆಯ ಸಹೋದರರು ದೊಣ್ಣೆಯಿಂದ ಚಂದ್ರಪ್ರಕಾಶ್‌ ಮಿಶ್ರಾನಿಗೆ ಮನಬಂದಂತೆ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದರು.


ಇದನ್ನೂ ಓದಿಬಿಸಿಗಾಳಿಯಿಂದಾಗಿ ತ್ರಿಪುರಾದಲ್ಲಿ ಏಪ್ರಿಲ್ 27 ರವರೆಗೆ ಶಾಲೆಗಳಿಗೆ ರಜೆ ಘೋಷಣೆ


ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಮತ್ತು ಆಕೆಯ ಕುಟುಂಬದ ಐವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಕೈಗೊಂಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.