ನವದೆಹಲಿ: ಆತ ಕೂಲಿ ಕೆಲಸ ಮಾಡುತ್ತಿದ್ದ.. ಸಾಲ ಮಾಡಿ ಪತ್ನಿಗೆ ನರ್ಸಿಂಗ್ ಓದಿಸಿದ್ದ… ಆದರೆ ಆಕೆ ಪ್ರಿಯಕರನ ಜೊತೆಗೆ ಓಡಿ ಹೋಗಿ ಮದುವೆಯಾಗಿದ್ದಾಳೆ. ಈ ಘಟನೆ ನಡೆದಿರುವುದು ಜಾರ್ಖಂಡ್​ನಲ್ಲಿ. ಈ ಸುದ್ದಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಪತ್ನಿ ಓಡಿ ಹೋಗಿದ್ದಕ್ಕೆ ಇದೀಗ ಪತಿ ಕಣ್ಣೀರಿಟ್ಟು ಗೋಳಾಡುತ್ತಿದ್ದಾನೆ.


COMMERCIAL BREAK
SCROLL TO CONTINUE READING

ಈ ಘಟನೆ ಬಗ್ಗೆ ಮಾತನಾಡಿರುವ ಪತಿ ಟಿಂಕು ಕುಮಾರ್, ತನ್ನ ಪತ್ನಿ ಸೆ.19ರಂದು ಮನೆಗೆ ಹೋಗುವ ನೆಪದಲ್ಲಿ ಕಾಲೇಜು ಬಿಟ್ಟರೂ ಮನೆಗೆ ಬಂದಿಲ್ಲ. ಈ ಬಗ್ಗೆ ಆತ ಗೊಡ್ಡಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಶಾಕಿಂಗ್ ವಿಚಾರ ತಿಳಿದುಬಂದಿತ್ತು. ಟಿಂಕು ಕುಮಾರ್ ಪತ್ನಿ ಪ್ರಿಯಾ ಕುಮಾರಿ ಬುಧೋನಾ ಗೊಡ್ಡಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಯುವಕ ದಿಲ್ಖುಷ್ ರಾವತ್ ಎಂಬಾತನ ಜೊತೆ ಓಡಿ ಹೋಗಿದ್ದಳು. ದೆಹಲಿಗೆ ಹೋಗಿ ದೇವಸ್ಥಾನವೊಂದರಲ್ಲಿ ಮದುವೆಯಾಗಿರುವ ಫೋಟೊಗಳನ್ನು ಕಳುಹಿಸಿದ್ದಾಳೆ.  


ಇದನ್ನೂ ಓದಿ: ಸಿಕ್ಕಿಂ ಪ್ರವಾಹದಲ್ಲಿ 23 ಯೋಧರು ನಾಪತ್ತೆ ! ಮುಂದುವರೆದ ಶೋಧ ಕಾರ್ಯ


ಕೂಲಿ ಮಾಡುತ್ತಿದ್ದ ನಾನು ಸಾಲ ಮಾಡಿ ನರ್ಸಿಂಗ್ ಕಾಲೇಜಿಗೆ ಕಳುಹಿಸಿ ಓದಿಸಿದರೂ ಪತ್ನಿ ತನಗೆ ಮೋಸ ಮಾಡಿ ಓಡಿ ಹೋಗಿದ್ದಾಳೆ ಅಂತಾ ಟಿಂಕು ಕುಮಾರ್ ಅಳಲು ತೋಡಿಕೊಂಡಿದ್ದಾನೆ. ಅಂದಹಾಗೆ 2020ರ ನವೆಂಬರ್‍ನಲ್ಲಿ ಟಿಂಕು ಕುಮಾರ್ ಪ್ರಿಯಾ ಕುಮಾರಿಯನ್ನು ಸಾಂಪ್ರದಾಯಿಕವಾಗಿ ವಿವಾಹವಾಗಿದ್ದ.


ಟಿಂಕು ಕೂಲಿ ಕೆಲಸ ಮಾಡುತ್ತಿದ್ದ. ಆತ 2.5 ಲಕ್ಷ ರೂ. ಸಾಲ ಪಡೆದು ಪತ್ನಿಯನ್ನು ಶಕುಂತಲಾ ನರ್ಸಿಂಗ್ ಕಾಲೇಜಿಗೆ ಸೇರಿಸಿ ಓದಿಸಿದ್ದ. ಗೊಡ್ಡಾದಲ್ಲಿ ಅಂತಿಮ ವರ್ಷದ ನರ್ಸಿಂಗ್ ಓದುತ್ತಿರುವ ಆಕೆಗೆ ಅಂತಿಮ ಹಂತದ ಪರೀಕ್ಷೆ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಆದರೆ ಇದೀಗ ಪ್ರಿಯಾ ಕುಮಾರಿ ನಿರುದ್ಯೋಗಿ ಯುವಕನ ಜೊತೆಗೆ ಹೋಗಿ ಮತ್ತೊಂದು ಮದುವೆಯಾಗಿದ್ದಾಳೆ. ಹೇಗಾದರೂ ಮಾಡಿ ನನಗೆ ನನ್ನ ಪತ್ನಿಯನ್ನು ಮರಳಿ ಕೊಡಿಸಿ, ನ್ಯಾಯ ದೊರಕಿಸಿಕೊಡಿ ಅಂತಾ ಪೊಲೀಸರಲ್ಲಿ ಟಿಂಕು ಕುಮಾರ್ ಮನವಿ ಮಾಡಿಕೊಂಡಿದ್ದಾನೆ.


ಇದನ್ನೂ ಓದಿ: Earthquake in Delhi: ಮತ್ತೆ ನಡುಗಿದ ರಾಷ್ಟ್ರ ರಾಜಧಾನಿ: ದೆಹಲಿಯಲ್ಲಿ 6.2 ತೀವ್ರತೆಯ ಪ್ರಬಲ ಭೂಕಂಪನ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.