ಬೆಂಗಳೂರು: ಸಿಲಿಕ್ ಸಿಟಿ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಕೆಲಸವಿಲ್ಲದೆ ಖಾಲಿಯಿದ್ದ ಗಂಡನಿಗೆ ಬುದ್ಧಿ ಕಲಿಸಲು ಹೋಗಿ ಮಹಿಳೆಯೊಬ್ಬರು ಪೇಚಿಗೆ ಸಿಲುಕಿದ್ದಾರೆ. ತನ್ನ ಬಂಗಾರ ಕಳ್ಳತನವಾಗಿದೆ ಎಂದು ನಾಟಕವಾಡಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.


COMMERCIAL BREAK
SCROLL TO CONTINUE READING

ಹೌದು, ತನ್ನ ಚಿನ್ನವನ್ನು ಸ್ನೇಹಿತನಿಂದ ಕಳುವು ಮಾಡಿಸಿ ನಾಟಕವಾಡಿದ್ದ ಮಹಿಳೆ ಬಳಿಕ ತಾನೇ ಕಳ್ಳತನವಾಗಿದೆ ಎಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದಳು. ಆದರೆ ಪೊಲೀಸರ ತನಿಖೆ ವೇಳೆ ಮಹಿಳೆಯ ಅಸಲಿ ಕಹಾನಿ ಬಯಲಾಗಿದೆ. ಪ್ರಕರಣ ಸಂಬಂಧ ಮಹಿಳೆ, ಆಕೆಯ ಸ್ನೇಹಿತ ಧನರಾಜ್, ರಾಕೇಶ್ ಎಂಬುವರನ್ನು ಪೊಲೀಸರು ಬಂಧಿಸಲಾಗಿದೆ. ಅಷ್ಟಕ್ಕೂ ಈ  ಘಟನೆ ಏನು ಅಂತೀರಾ..?


ಬ್ಯಾಂಕ್‍ನಿಂದ 109 ಗ್ರಾಂ ಚಿನ್ನವನ್ನು ಬಿಡಿಸಿಕೊಂಡು ಗಾಡಿಯ ಡಿಕ್ಕಿಲ್ಲಿಟ್ಟಿದ್ದಳು. ಬಳಿಕ ಮಕ್ಕಳನ್ನು ಶಾಲೆಯಿಂದ ಟ್ಯೂಷನ್​ಗೆ ಬಿಟ್ಟು ಅತ್ತೆ ಮನೆಗೆ ತೆರಳಿದ್ದಳು. ನಂತರ ಮತ್ತದೇ ಟ್ಯೂಷನ್ ಬಳಿ ಬಂದಿದ್ದಳು. ಈ ವೇಳೆ ಸ್ಕೂಟರ್‍ನ ಫುಟ್‍ಮ್ಯಾಟ್ ಬಳಿ ಗಾಡಿ ಕಿ ಇಟ್ಟಿದ್ದಳು. ಇದಾದ ಬಳಿಕ ತನ್ನ ಸ್ನೇಹಿತ ಧನಂಜಯ್ ಎಂಬಾತನಿಗೆ ಕೆರೆ ಮಾಡಿದ್ದಳು. ತನ್ನ ಲೊಕೇಷನ್ ಆತನಿಗೆ ಕಳಿಸಿದ್ದ ಆಕೆ ಚಿನ್ನವನ್ನು ಕಳ್ಳತನ ಮಾಡಲು ಹೇಳಿದ್ದಳು. ಆಕೆ ಹೇಳಿದಂತೆ ತನ್ನ ಸ್ನೇಹಿತ ರಾಕೇಶ್ ಎಂಬಾತನ ಜೊತೆ ಸ್ಥಳಕ್ಕೆ ಬಂದಿದ್ದ ಧನಂಜಯ್ ಬೈಕ್ ಸಮೇತ ಚಿನ್ನ ತೆಗೆದುಕೊಂಡು ಹೊಗಿದ್ದ.


ಇದನ್ನೂ ಓದಿ: ಚಾಮರಾಜನಗರ:‌ 1.63 ಕೋಟಿ ಪ್ರಯಾಣಿಕರಲ್ಲಿ ಕೋಟಿ ಮಹಿಳೆಯರ 'ಶಕ್ತಿ' ಪ್ರಯಾಣ!!


ಬಳಿಕ ಮಲ್ಲೇಶ್ವರಂ ಪೊಲೀಸ್​ ಠಾಣೆಗೆ ತೆರಳಿದ್ದ ಮಹಿಳೆ ಯಾರೋ ತನ್ನ ಬೈಕ್​ ಸಮೇತ ಚಿನ್ನವನ್ನು ಕದ್ದುಕೊಂಡು ಹೋಗಿದ್ದಾರೆಂದು ದೂರು ನೀಡಿದ್ದಳು. ನಂತರ ಕಾರ್ಯಪ್ರವೃತರಾದ ಪೊಲೀಸರು ಸಿಸಿಟಿವಿ ಪರಿಶೀಲಿಸಿ ಧನಂಜಯ್ ಹಾಗೂ ರಾಕೇಶ್‍ನನ್ನು ಬಂಧಿಸಿದ್ದರು. ಬಳಿಕ ಅವರನ್ನು ವಿಚಾರಣೆ ನಡೆಸಿದಾಗ ಸತ್ಯವನ್ನು ಬಾಯ್ಬಿಟ್ಟಿದ್ದಾರೆ. ಇದರಿಂದ ಮಹಿಳೆಯ ನಾಟಕ ಬಟಾಬಯಲಾಗಿದೆ.


ಬಳಿಕ ಪೊಲೀಸರು ಆರೋಪಿಗಳ ಮೊಬೈಲ್ ಪರಿಶೀಲಿಸಿದಾಗ ಅವರು ದೂರು ನೀಡಿದ್ದ ಮಹಿಳೆ ಜೊತೆಗೆ ಚಾಟಿಂಗ್ ಮಾಡಿರುವುದು ಬಯಲಿಗೆ ಬಂದಿದೆ. ಸದ್ಯ ಸುಳ್ಳು ದೂರು ನೀಡಿದ ಮಹಿಳೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.  ಅವರಿಂದ 109 ಗ್ರಾಂ ಚಿನ್ನ ಮತ್ತು ಕೃತ್ಯಕ್ಕೆ ಬಳಸಿದ್ದ 2 ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ನನ್ನ ಗಂಡ ಕೆಲಸಕ್ಕೆ ಹೋಗಲ್ಲ.. ಮನೆಲ್ಲಿರುವ ಚಿನ್ನ ಕಳ್ಳತನ ಆದ್ರೆ ಪತಿ ಕೆಲಸಕ್ಕೆ ಹೋಗುತ್ತಾನೆಂದು ನಾನು ಈ ಪ್ಲ್ಯಾನ್​ ಮಾಡಿದ್ದೆ ಅಂತಾ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಇದೀಗ ಅವಳದ್ದೇ ಚಿನ್ನವಾಗಿರೋದ್ರಿಂದ ಕಾನೂನು ಸಲಹೆ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ಮಲ್ಲೆಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ: Raichur: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿ ಆತ್ಮಹತ್ಯೆ! ಸರಿಯಾಗಿ ಓದು ಎಂದಿದ್ದೇ ತಪ್ಪಾಯ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.