ನಟ ದರ್ಶನ್ನನ್ನ ಆದರ್ಶವಾಗಿ ತೆಗೆಕೊಂಡು ಮತ್ತೊಬ್ಬಳ ಜೊತೆ ಸಂಗ..! ಪತಿ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ
Crime news : ಗಂಡ, ಮುದ್ದಾದ ಹೆಂಡತಿ, ಚಿನ್ನದಂತ ಮಗು.. ಸಖ ಸಂಸಾರಕ್ಕೆ ಇದಕ್ಕಿಂತ ಇನ್ನೇನ್ ಬೇಕು ಹೇಳಿ.. ಆದ್ರೆ ಆ ಅವಿವೇಕಿ ಪತಿಗೆ ಇದೆಲ್ಲವೂ ಕಡಿಮೆ ಅನ್ನಿಸಿಬಿಟ್ಟಿತ್ತು.. ದರ್ಶನ್ ಜೀವನವನ್ನೇ ಆದರ್ಶವಾಗಿ ತೆಗೆದುಕೊಂಡಿದ್ದ ಆತ ಪತ್ನಿ ಬಿಟ್ಟು ಮತ್ತೊಬ್ಬಳ ಸಂಗ ಮಾಡಿದ್ದ.. ಆಕೆಯನ್ನೇ ವರಿಸೋದಾಗಿ ಜಗಳ ತೆಗಿತಿದ್ದ. ಡಿವೋರ್ಸ್ ಕೊಡುವಂತೆ ಪೀಡಿಸ್ತಿದ್ದ.. ಇದೇ ಗಲಾಟೆ ಸುಂದರಿಯ ಸಾವಿನೊಂದಿಗೆ ಅಂತ್ಯವಾಗಿದೆ.. ತಾಯಿಯ ಕಣ್ಣೆದುರೆ ಮಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾಳೆ.
ಬೆಂಗಳೂರು : ಮುದ್ದಾದ ಮುಖ, ನಾವಿಲೇ ನಾಚುವಂತಹ ಸೌಂದರ್ಯ.. ಅರ್ಥಾತ್ ದಂತದ ಗೊಂಬೆ.. ಸುಖ ಸಂಸಾರದ ಕನಸು ಕಟ್ಟು ಮದುವೆಯಾಗಿದ್ದ ಈ ಚೆಲುವೆ ಗಂಡನಿಂದಲೇ ಸಾವಿನ ಮನೆ ಸೇರಿದ್ದಾಳೆ.. ಈ ಸುಂದರಿಯ ಅಂತ್ಯ ಹೇಗಾಯ್ತು ಅನ್ನೋದನ್ನ ನೋಡಿದ್ರೆ ನೀವೆ ಬೆಚ್ಚಿ ಬೀಳ್ತೀರಾ.. ಬಂಗಾರದಂತಹ ಸೌಂದರ್ಯವತಿಯ ದೇಹ ಕೊನೆಗೆ ಆಗಿದ್ದು ಕರಕಲ ರೀತಿ...
ಹೌದು.. ಈ ಫೋಟೊದಲ್ಲಿ ಕಾಣ್ತಿರೊ ಆಸಾಮಿ ಹೆಸರು ಶ್ರೀಹರಿ.. 37 ವರ್ಷ.. ಶಿರಸಿ ಮೂಲದವನು.. ಇನ್ನೂ ಈ ಚೆಲುವೆಯ ಹೆಸರು ಅನುಷಾ ಬಸವನಗುಡಿಯವಳು.. ಅನುಷಾ ತಾಯಿಯ ಸಂಬಂಧಿಯಾದ ಶ್ರೀಹರಿಯನ್ನೇ ಕೊಟ್ಟು 5 ವರ್ಷದ ಹಿಂದೆ ಮದುವೆ ಮಾಡಿಸಿದ್ರು.. ಹುಳಿಮಾವುವಿನ ಅಕ್ಷಯನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ಫ್ಲಾಟ್ ಖರೀದಿಸಿ ವಾಸವಿದ್ರು..
ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಬಳಿಕ ಪವಿತ್ರಾಗೌಡ ಕರೆ ಮಾಡಿದ್ದು ಯಾರಿಗೆ?
ದಂಪತಿಗೆ 2 ವರ್ಷದ ಮಗು ಕೂಡ ಇದೆ.. ಈ ಮಗು ನೋಡಿಕೊಳ್ಳಲೆಂದೇ ಅನುಷಾ ತಾಯಿ ರೇಣುಕಾ ಹಾಗೂ ತಂದೆ ಇದೇ ಮನೆಯಲ್ಲಿದ್ರು.. ಆದ್ರೆ ಸೆಪ್ಟೆಂಬರ್ 5 ರ ಗುರುವಾರ ಸಂಜೆ 7 ಗಂಟೆಯ ಸಮಯ.. ಗಂಡ ರೂಂ ನಲ್ಲಿದ್ರೆ ತಾಯಿ ಮಗು ನೋಡಿಕೊಂಡು ಹಾಲ್ ನಲ್ಲಿದ್ಳು.. ಬಾತ್ ರೂಂ ಗೆ ಹೋಗಿದ್ದ ಅನುಷಾ ಕಿರುಚಾಡಲು ಪ್ರಾರಂಭಿಸಿದ್ಳು.. ತಾಯಿ ಹೋಗಿ ಬಾಗಿಲು ಒಡೆದು ನೋಡಿದ್ರೆ ಧಗ ಧಗ ಅಂತಾ ಹೊತ್ತಿ ಉರಿತಿದ್ಳು..
ಇತ್ತ ಘಟನೆಗೆ ಶ್ರೀಹರಿಯ ಅನೈತಿಕ ಸಂಬಂಧವೇ ಕಾರಣ ಅನ್ನೋ ಆರೋಪ ಕೇಳಿ ಬಂದಿದೆ.. ಖಾಸಗಿ ಐಟಿ ಕಂಪನಿಯೊಂದರಲ್ಲಿ ಟೀಂ ಮ್ಯಾನೆಜರ್ ಆಗಿದ್ದ ಶ್ರೀಹರಿಗೆ ಸಾಕಷ್ಟು ಯುವತಿಯರ ಜೊತೆಗೆ ಅನೈತಿಕ ಸಂಬಂಧ ಇತ್ತಂತೆ.. ಕಾಲ್ ಗರ್ಲ್ ಜೊತೆಗೆ ಹೋಗ್ತಿದ್ದನಂತೆ.. ಕಂಪನಿಯಲ್ಲೇ ಯುವತಿ ಜೊತೆಗೆ ಅನುಚಿತವಾಗಿ ವರ್ತಿಸಿ ಕೆಲಸ ಕಳೆದುಕೊಂಡಿದ್ದ.. ಇದೆಲ್ಲದರ ಜೊತೆಗೆ ಒಂದು ಯುವತಿಯನ್ನ ನಾನು ಮದುವೆ ಆಗ್ತೀನಿ ನೀನು ಡಿವೋರ್ಸ್ ಕೊಡು ಎಂದು ಪಟ್ಟು ಹಿಡಿದಿದ್ದನಂತೆ..
ಅಶ್ಲೀಲ ವಿಡಿಯೋ ತೋರಿಸಿ ಈ ರೀತಿಯೇ ನಾನು ಸೆಕ್ಸ್ ಮಾಡಬೇಕು ಸಹಕರಿಸು ಅಂತಿದ್ದನಂತೆ ಒಪ್ಪದಿದ್ದಕ್ಕೆ ಬೇರೆಯವಳ ಬಳಿ ಹೋಗ್ತೀನಿ ಎಂದು ಹಿಂಸಿಸ್ತಿದ್ದ.. ಏನೇ ಆದ್ರು ಸರಿ ಮಗು ಭವಿಷ್ಯಕ್ಕಾಗಿ ಡಿವೋರ್ಸ್ ನೀಡಲು ನಿರಾಕರಿಸ್ತಿದ್ದ ಅನುಷಾ ಜೊತೆಗೆ ಆಗಾಗ ಜಗಳ ಮಾಡ್ತಿದ್ದನಂತೆ.. ಇದರಿಂದಾಗಿ ಮನನೊಂದು ಬಾತ್ ರೂಂ ಗೆ ಹೋಗಿ ಗಂಡನಿಗೆ ವಿಡಿಯೋ ಕಾಲ್ ಮಾಡಿದ್ದಾಳೆ...
ಈಗಲಾದರು ಬದಲಾಗು ಇಲ್ಲದಿದ್ರೆ ನಾನು ಪೆಟ್ರೋಲ್ ಸುರಿದುಕೊಂಡು ಸಾಯ್ತೀನಿ ಎಂದಿದ್ದಾಳೆ... ಈ ವೇಳೆ ಸಾಯಿ ಅಂತಾ ಗಂಡ ಹೇಳಿದ್ದು.. ವಿಡಿಯೊ ಕಾಲ್ ನಲ್ಲಿರುವಾಗಲೇ ಪೆಟ್ರೋಲ್ ಸುರಿದುಕೊಂಡಿದ್ದಳು.. ಬಳಿಕ ಚಿಕಿತ್ಸೆ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಿದ್ದ ಅನುಷಾ ಸೆಪ್ಟೆಂಬರ್ 7 ರಂದು ರಾತ್ರಿ 1 ಗಂಟೆಗೆ ಸಾವನ್ನಪ್ಪಿದ್ದಾಳೆ...
ಇದನ್ನೂ ಓದಿ:ʼನನಗೆ ಪವಿತ್ರಾ ಜೊತೆ ಅಂತಹ ಸಂಬಂಧ..ʼ ಅಸಲಿ ಮ್ಯಾಟರ್ ಬಿಚ್ಚಿಟ್ಟ ನಟ ದರ್ಶನ್..!
ಇತ್ತ ತಾಯಿ ಬಳಿಯೂ ಅನುಷಾ ಅಳಲು ತೋಡಿಕೊಂಡಿದ್ದಳಂತೆ.. ಅಲ್ಲದೇ ಗಂಡನ ಜೊತೆಗೆ ಗಲಾಟೆ ಮಾಡಿಕೊಂಡು 15 ದಿನದ ಹಿಂದೆ ಕೈಕೊಯ್ದುಕೊಂಡಿದ್ದಳಂತೆ.. ಡಿವೋರ್ಸ್ ಗೆ ನಿರಾಕರಿಸಿದ ಅನುಷಾಗೆ ನಟ ದರ್ಶನ್ ಇಬ್ಬರ ಜೊತೆಗೆ ಇಲ್ವಾ ನಾನು ಮಾಡಿಕೊಂಡ್ರೆ ಏನು ಅಂತಾ ವಾದಕ್ಕೆ ಇಳಿತಿದ್ದ ಅಂತಾ ತಾಯಿ ಅರುಣಾ ಅರೋಪಿಸ್ತಿದ್ದಾಳೆ.. ಅಲ್ಲದೇ ಹೆತ್ತ ಮಗು ಸುಟ್ಟು ಹೋಗ್ತಿದ್ದನ್ನ ಕಣ್ಣಾರೆ ಕಂಡ ತಾಯಿಯ ನೋವು ನಿಜಕ್ಕೂ ಹೇಳ ತೀರದ್ದು.. ವಿಕ್ಟೋರಿಯಾ ಆಸ್ಪತ್ರೆ ಮುಂಭಾಗ ಜಮಾಯಿಸಿದ್ದ ಕುಟುಂಬಸ್ಥರು ಕಣ್ಣೀರು ಹಾಕ್ತಿದ್ರು.
ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.. ಆರೋಪಿ ಶ್ರೀಹರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ... ಅದೇನೇ ಹೇಳಿ ಮುದ್ದಿನಂತ ಮಡದಿ ಇದ್ರೂ ಪರಸ್ತ್ರೀ ಸಂಗ ಮಾಡಿದ್ದ ಈತನಿಗೆ ತಕ್ಕ ಶಾಸ್ತಿಯಾಗಲೇಬೇಕು ಅಂತಾ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.