ಬರ್ತ್ಡೇ ಆಚರಿಸಲು ದುಬೈಗೆ ಕರೆದುಕೊಂಡು ಹೋಗಲಿಲ್ಲವೆಂದು ಗಂಡನನ್ನೇ ಕೊಂದ ಪತ್ನಿ!
Woman kills Husband: ಪದೇ ಪದೇ ಗಂಡನಿಂದ ನಿರಾಸೆ ಅನುಭವಿಸಿದ ರೇಣುಕಾಳಿಗೆ ಪತಿ ಮೇಲೆ ವಿಪರಿತ ಕೋಪ ಬಂದಿತ್ತು. ಹೀಗಾಗಿ ಇಬ್ಬರ ನಡುವೆ ಹಲವಾರು ಬಾರಿ ಜಗಳವೂ ನಡೆದಿತ್ತು ಎನ್ನಲಾಗಿದೆ.
ನವದೆಹಲಿ: ತನ್ನ ಬರ್ತ್ಡೇ ಆಚರಿಸಲು ದುಬೈಗೆ ಕರೆದುಕೊಂಡು ಹೋಗಲಿಲ್ಲವೆಂದು ಗಂಡನನ್ನೇ ಹೆಂಡತಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು, ನಿಖಿಲ್ ಖನ್ನಾ (36) ಕೊಲೆಯಾದ ವ್ಯಕ್ತಿ. 38 ವರ್ಷದ ರೇಣುಕಾ ಪತಿಯನ್ನೇ ಕೊಲೆ ಮಾಡಿರುವ ಆರೋಪಿ.
ಪುಣೆಯ ವನವಾಡಿಯಲ್ಲಿರುವ ಪೋಶ್ ರೆಸಿಡೆನ್ಶಿಯಲ್ ಸೊಸೈಟಿಯ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ನಿಖಿಲ್ ಖನ್ನಾರ ಮೂಗಿಗೆ ಬಲವಾಗಿ ಗುದ್ದಿದ ಪರಿಣಾಮ ಅವರು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆಂದು ವರದಿಯಾಗಿದೆ.
ಇದನ್ನೂ ಓದಿ: ಪರ್ತಕರ್ತೆ ಸೌಮ್ಯ ವಿಶ್ವನಾಥನ್ ಹತ್ಯೆ ಪ್ರಕರಣ: ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ
ಕಟ್ಟಡ ನಿರ್ಮಾಣ ಉದ್ಯಮಿಯಾಗಿದ್ದ ನಿಖಿಲ್ ಖನ್ನಾ ಮತ್ತು ರೇಣುಕಾ 6 ವರ್ಷದ ಹಿಂದೆ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ತನ್ನ ಹುಟ್ಟುಹಬ್ಬದ ಆಚರಣೆಗೆ ದುಬೈಗೆ ಕರೆದುಕೊಂಡು ಹೋಗುವಂತೆ ನಿಖಿಲ್‍ಗೆ ಪತ್ನಿ ಹೇಳಿದ್ದಾಳೆ. ಸಂಬಂಧಿಕರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಕರೆದರೂ ನಿಖಿಲ್ ಹೋಗಿರಲಿಲ್ಲವಂತೆ. ಇದಲ್ಲದೆ ಮದುವೆ ವಾರ್ಷಿಕೋತ್ಸವದ ವೇಳೆ ರೇಣುಕಾ ದುಬಾರಿ ಉಡುಗೊರೆಯನ್ನು ನಿರೀಕ್ಷಿಸಿದ್ದಳಂತೆ.
ಆದರೆ ರೇಣುಕಾಳ ಆಸೆಗಳಿಗೆ ನಿಖಿಲ್ ಸೊಪ್ಪು ಹಾಕಿರಲಿಲ್ಲವಂತೆ. ಪದೇ ಪದೇ ಗಂಡನಿಂದ ನಿರಾಸೆ ಅನುಭವಿಸಿದ ರೇಣುಕಾಳಿಗೆ ಪತಿ ಮೇಲೆ ವಿಪರಿತ ಕೋಪ ಬಂದಿತ್ತು. ಹೀಗಾಗಿ ಇಬ್ಬರ ನಡುವೆ ಹಲವಾರು ಬಾರಿ ಜಗಳವೂ ನಡೆದಿತ್ತು ಎನ್ನಲಾಗಿದೆ. ಶುಕ್ರವಾರ(ನ.24) ಇಬ್ಬರ ನಡುವಿನ ಜಗಳ ತಾರಕಕ್ಕೇರಿ ತಾಳ್ಮೆ ಕಳೆದುಕೊಂಡ ರೇಣುಕಾ ಪತಿಯ ಮೂಗಿಗೆ ಬಲವಾಗಿ ಗುದ್ದಿದ್ದಾಳೆ. ಪರಿಣಾಮ ಆತನ ಹಲ್ಲುಗಳು ಮುರಿದು, ಮೂಗಿನಲ್ಲಿ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: Viral Video: ಕಿಕ್ಕಿರಿದ ಮೆಟ್ರೋದಲ್ಲಿ ಈ ತಾತ ಮಾಡಿದ ಅವಾಂತರ ನೋಡಿ..!
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವನವಾಡಿ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ತನಿಖೆ ಕೈಗೊಳ್ಳಲಾಗಿದೆ. ಸದ್ಯ ರೇಣುಕಾರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302ರಡಿ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.