ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ: ಹೆಂಡತಿ ಪೊಲೀಸ್ ವಶಕ್ಕೆ
ಮರ್ಮಾಂಗ ಕತ್ತರಿಸಿ ವ್ಯಕ್ತಿಯೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಚಂದ್ರಶೇಖರ್ ಕೊಲೆಯಾದ ವ್ಯಕ್ತಿ. ಮೃತ ಚಂದ್ರಶೇಖರ್ ಯಲಹಂಕದ ಕೊಂಡಪ್ಪ ಲೇಔಟ್ನಲ್ಲಿ ವಾಸವಾಗಿದ್ದರು. ಮನೆಯ ಟೆರಸ್‌ನಲ್ಲಿ ಹತ್ಯೆ ನಡೆದಿದ್ದು, ಮೊದಲು ತಲೆಗೆ ಹೊಡೆದು ಮರ್ಮಾಂಗ ಕತ್ತರಿಸಲಾಗಿದೆ.
ಬೆಂಗಳೂರು : ಮರ್ಮಾಂಗ ಕತ್ತರಿಸಿ ವ್ಯಕ್ತಿಯೋರ್ವನನ್ನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಚಂದ್ರಶೇಖರ್ ಕೊಲೆಯಾದ ವ್ಯಕ್ತಿ. ಮೃತ ಚಂದ್ರಶೇಖರ್ ಯಲಹಂಕದ ಕೊಂಡಪ್ಪ ಲೇಔಟ್ನಲ್ಲಿ ವಾಸವಾಗಿದ್ದರು. ಮನೆಯ ಟೆರಸ್‌ನಲ್ಲಿ ಹತ್ಯೆ ನಡೆದಿದ್ದು, ಮೊದಲು ತಲೆಗೆ ಹೊಡೆದು ಮರ್ಮಾಂಗ ಕತ್ತರಿಸಲಾಗಿದೆ.
ಆಂಧ್ರ ಮೂಲದ ಚಂದ್ರಶೇಖರ್ ಕಳೆದ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಬಂದು ವಾಸವಾಗಿದ್ದರು. ಸದ್ಯ ಚಂದ್ರಶೇಖರ್ ಪತ್ನಿ ಶ್ವೇತಾ ಗೆಳೆಯನ ಜೊತೆ ಸೇರಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಂದ್ರಶೇಖರ್ ಬಾಮೈದ ಭಾಸ್ಕರ್, ಶ್ವೇತಾಳನ್ನು ಪ್ರೀತಿಸುತ್ತಿದ್ದ. ಹೀಗಾಗಿ ಆತನೆ ಕೊಲೆ ಮಾಡಿದ್ದಾನೆ ಎಂಬ ಅನುಮಾನ ಶುರುವಾಗಿದೆ.
ಇದನ್ನೂ ಓದಿ: ಸದ್ಗುರು ವಿರುದ್ಧ ಹೇಳಿಕೆ : ಕಾಂಗ್ರೆಸ್ ಮಾಜಿ ಎಂಎಲ್‌ಸಿ ವಿರುದ್ಧ ಲೀಗಲ್ ನೋಟಿಸ್
ಈ ಹಿಂದೆ ಲೊಕೇಶ್ ಎಂಬಾತ ಸಹ ಶ್ವೇತಾಳಿಗೆ ಪ್ರೀತಿಸುವಂತೆ ಪೀಡಿಸುತ್ತಿದ್ದ. ಮದುವೆಯಾದರು ಸಹ ಪ್ರೀತಿಸುವಂತೆ ಶ್ವೇತಾ ಹಿಂದೆ ಬಿದ್ದಿದ್ದ. ಪ್ರೀತಿ ನಿರಾಕರಿಸಿದ್ದಕ್ಕೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ. ಈ ಹಿನ್ನೆಲೆ ಹಿಂದೂಪುರ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಲಾಗಿತ್ತು ಎಂಬ ಅಂಶವು ಗೊತ್ತಾಗಿದೆ. ಇನ್ನೂ ದೂರು ದಾಖಲಾದ ವೇಳೆ ಪೊಲೀಸ್ ಠಾಣೆ ಬಳಿಯೇ ಶ್ವೇತಾ ಚಪ್ಪಲಿಯಲ್ಲಿ ಲೋಕೇಶ್ನಿಗೆ ಬಾರಿಸಿದ್ದಳಂತೆ.
ಹೀಗಾಗಿ ಲೋಕೇಶ್ ಕಾಟ ತಾಳಲಾರದೇ ಶ್ವೇತಾ ಹಾಗೂ ಚಂದ್ರಶೇಖರ್‌ನನ್ನು ಬೆಂಗಳೂರಿಗೆ ಕಳುಹಿಸಲಾಗಿತ್ತು. ಆದರೆ ಹಿಂದೂಪುರದಿಂದ ಬೆಂಗಳೂರಿಗೆ ಬಂದು ಲೋಕೇಶ್ ಈ ಕೊಲೆ ಮಾಡಿದ್ದಾನೆ ಎಂದು ಭಾಸ್ಕರ್ ಆರೋಪಿಸುತ್ತಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಪೊಲೀಸರು ಹಂತಕನ ಬಂಧನಕ್ಕೆ ಬಲೆ ಬೀಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ