ಬೆಂಗಳೂರು : ಜವರಾಯ ಯಾರ ಪಾಲಿಗೆ ಯಾವ ರೀತಿ ವಕ್ಕರಿಸುತ್ತಾನೋ ಗೊತ್ತಿಲ್ಲ. ಜವರಾಯನ ಅಟ್ಟಹಾಸಕ್ಕೆ 15 ದಿನದ ಹಸುಗೂಸು ಅನಾಥವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ದೇವರ ಜೀವನಹಳ್ಳಿಯಲ್ಲಿ ನಡೆದಿದ್ದು, ಬಾವಿಯ ಜಾಲರ ಸರಿ ನೀರಿಗೆ ಬಿದ್ದು‌ ದುರಂತ ನಡೆದಿದೆ. ಘಟನೆಯಲ್ಲಿ ಶಿವು ಮೃತಪಟ್ಟಿದ್ದು, ಶಿವು ಸಾವಿನಿಂದ 15 ದಿನದ ಹಸುಗೂಸು ಅನಾಥವಾಗಿದೆ. ಇತ್ತ ಗಂಡನನ್ನ ಕಳೆದುಕೊಂಡ ಪತ್ನಿ ಆಕ್ರಂದನ ಮುಗಿಲು ಮುಟ್ಟಿತ್ತು. ಶಿವು ಮನೆಯ ಪಕ್ಕದಲ್ಲಿಯೇ ಇದ್ದ ಬಾವಿ ಜಾಲರ ಸರಿ ಮಾಡಲು ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ವೆಲ್ಡಿಂಗ್ ಕೆಲಸಕ್ಕೆ ಇಳಿದಿದ್ದ‌. ಈ ವೇಳೆ ಆಯತಪ್ಪಿ ಶಿವು ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.


COMMERCIAL BREAK
SCROLL TO CONTINUE READING

ವಿಪರ್ಯಾಸವೆಂದರೆ 10 ವರ್ಷಗಳ ಹಿಂದೆಯೂ ಒಬ್ಬ ವ್ಯಕ್ತಿ ಇದೇ ಬಾವಿಗೆ ಬಿದ್ದು ಸಾವನ್ನಪ್ಪಿದ್ದ. ಇನ್ನೂ ಶಾಸಕರ ಕಡೆಯಿಂದ ಬಾವಿಯ ದುರಸ್ಥಿ ಕೆಲಸ ನಡೆಯುತ್ತಿತ್ತು ಎಂದು ಶಿವು ಕುಟುಂಬಸ್ಥರು ಆರೋಪಿಸಿ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


ಇದನ್ನೂ ಓದಿ : ಕುಕ್ಕರ್ ಬಾಂಬ್ ಸ್ಫೋಟ : ಶಾರೀಕ್‌ಗೆ ಬೆಂಗಳೂರಿನ ವಿಕ್ಟೋರಿಯಾದಲ್ಲಿ ಚಿಕಿತ್ಸೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.