Love Case: ಮಗಳನ್ನು ಪ್ರೀತಿಸುತ್ತಿದ್ದ ಯುವಕನಿಗೆ ಕೊತಕೊತ ಕುದಿಯುವ ಬಿಸಿನೀರು ಎರಚಿ ಯುವತಿ ತಂದೆ ವಿಕೃತಿ ಮೆರೆದಿದ್ದಾನೆ. ಕೊಡಗು ಜಿಲ್ಲೆ ಮಡಿಕೇರಿ ಸಮೀಪದ ಮದೆನಾಡಿನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಬಿಸಿ ನೀರು ಎಚರಿದ ಪರಿಣಾಮ ಸುಟ್ಟ ಗಾಯಗಳಾಗಿ ಗಣಪತಿ ಬೀದಿ ನಿವಾಸಿ ಸುಹೇಲ್ ಎಂಬಾತ ಆಸ್ಪತ್ರೆಗೆ ದಾಖಲಾಗಿದ್ದಾನೆ.ಸುಹೇಲ್‌ಗೆ ಮದೆನಾಡಿನ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಇಬ್ಬರು ಕೈ-ಕೈ ಹಿಡಿದು ಊರೆಲ್ಲಾ ಓಡಾಡಿದ್ದರಂತೆ. ಇವರಿಬ್ಬರ ಪ್ರೀತಿ ವಿಚಾರ ಯುವತಿಯ ಮನೆಯವರಿಗೆ ತಿಳಿದಿತ್ತು. ಹೀಗಾಗಿ ಇವರಿಬ್ಬರ ಪ್ರೀತಿಗೆ ಪೋಷಕರು ನಿರಾಕರಿಸಿದ್ದರು. ಇತ್ತ ಯುವತಿ ಸುಹೇಲ್‌ಗೆ ಫೋನ್‌ ಮಾಡಿ ಮನೆಯಲ್ಲಿ ಹಿಂಸೆಯಾಗುತ್ತಿದೆ, ಮನೆಗೆ ಬಂದು ನನ್ನನ್ನು ಕರೆದುಕೊಂಡು ಹೋಗು ಎಂದಿದ್ದಳಂತೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಚಾಮರಾಜನಗರ, ತುಮಕೂರು ಸೇರಿ ಹಲವೆಡೆ ವರುಣಾರ್ಭಟ


ಪ್ರೀತಿಸಿದವಳು ಈ ಪರಿ ಹಿಂಸೆ ಪಡುತ್ತಿರುವ ವಿಷಯ ತಿಳಿದ ಸುಹೇಲ್‌ ಗಟ್ಟಿ ಮನಸ್ಸು ಮಾಡಿ, ಆಕೆಯ ಮನೆಗೆ ಹೋಗಿದ್ದಾನೆ. ಸುಹೇಲ್‌ ಮನೆಯೊಳಗೆ ಕಾಲಿಡುತ್ತಿದ್ದಂತೆ ಸಿಟ್ಟಾದ ಯುವತಿ ತಂದೆ ಏಕಾಏಕಿ ಕೊತ ಕೊತ ಅಂತಾ ಕುದಿಯುತ್ತಿದ್ದ ನೀರನ್ನು ಆತನ ಮೈಮೇಲೆ ಎರಚಿದ್ದಾರೆ. ಬಿಸಿ ನೀರು ಎರಚಿದ್ದರಿಂದ ಸುಹೇಲ್‌ನ ಮುಖ ಹಾಗೂ ಕುತ್ತಿಗೆಯ ಭಾಗವೆಲ್ಲ ಸುಟ್ಟು ಹೋಗಿದೆ.


ಸದ್ಯ ಸುಹೇಲ್‌ಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್‌ ಸುಹೇಲ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸುಟ್ಟುಗಾಯಗಳಿಗೆ ಚಿಕಿತ್ಸೆ ಮುಂದುವರಿದಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


ಇದನ್ನೂ ಓದಿ: ರೇವ್ ಪಾರ್ಟಿ ಮೇಲೆ ಸಿಸಿಬಿ ಅಧಿಕಾರಿಗಳ ರೇಡ್ ಪ್ರಕರಣ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews