ಬೆಂಗಳೂರು: ನ್ಯೂ ತರಗು ಪೇಟೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ನೇಪಾಳ ಮೂಲದ ಯುವಕ ರಮೇಶ್  ಕೊಲೆ ಪ್ರಕರಣ ಸಂಬಂಧ ವಿ.ವಿ.ಪುರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ತಮಿಳುನಾಡು ಮೂಲದ ಶ್ರೀನಿವಾಸ್ ಹಾಗೂ ಸತೀಶ್ ಬಂಧಿತರು.‌ ಈ ಇಬ್ಬರು ತರಗುಪೇಟೆಯಲ್ಲಿ ಮೂಟೆ ಹೋರುವ ಕೆಲಸ ಮಾಡುತ್ತಿದ್ದರು. ಮೃತ ರಮೇಶ್ ನೇಪಾಳ ಮೂಲದವನಾಗಿದ್ದು ಈತನ ಮಾವ ರತನ್ ತೋಟಗಳಿಗೆ ಗ್ರೀನ್ ಮೆಸ್ ಹಾಕುವ ವ್ಯವಹಾರ ಮಾಡಿಕೊಂಡಿದ್ದರು. ಈತನ ಬಳಿ ರಮೇಶ್ ಕೆಲಸ ಮಾಡಿಕೊಂಡಿದ್ದ. 


ಇದನ್ನೂ ಓದಿ- ನಕಲಿ ದಾಖಲಾತಿ ಸೃಷ್ಟಿಸಿ ಕೋಟ್ಯಾಂತರ ರೂಪಾಯಿ ಆಸ್ತಿ ಕಬಳಿಸಲು ಯತ್ನ ಆರೋಪ..!


ಮೆಟೀರಿಯಲ್ಸ್ ತರಲು ಇದೇ ತಿಂಗಳು 27ರಂದು ರಮೇಶ್ ಸ್ನೇಹಿತ ಇಂದ್ರೇಶ್ ನೊಂದಿಗೆ ಮಾರ್ಕೆಟ್ ಗೆ ಬಂದಿದ್ದ.‌ ಕೆಲಸ ಮುಗಿಸಿ ಮದ್ಯ ಸೇವನೆಗಾಗಿ ನ್ಯೂ ತರಗುಪೇಟೆಯಲ್ಲಿರುವ ಬಾರ್ ವೊಂದಕ್ಕೆ ಬಂದಿದ್ದರು.‌ ಇಬ್ಬರು ಒಟ್ಟುಗೂಡಿ ಡ್ರಿಂಕ್ಸ್ ಮಾಡುವಾಗ ಅದೇ ಬಾರ್ ನಲ್ಲಿದ್ದ ಆರೋಪಿಗಳು ಗಾಂಜಾ ಸೇವನೆ ಮಾಡುವುದನ್ನು ರಮೇಶ್ ಕಂಡು ಅವರ ಬಳಿ ಗಾಂಜಾ‌ವಿದೆ ಎಂದು ಭಾವಿಸಿ ಅವರನ್ನು ಹಿಂಬಲಿಸಿ 500 ರೂ. ಕೊಡುತ್ತೇವೆ ಮಾದಕವಸ್ತು ಕೊಡಿ ಎಂದು ಕೇಳಿದ್ದ.‌ ಗಾಂಜಾ ಇಲ್ಲ ಅಂದರೂ ಕೇಳದ ರಮೇಶ್, ಪದೇ‌ ಪದೇ ಪೀಡಿಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಆರೋಪಿಗಳು ಗಾಂಜಾ ನಶೆಯಲ್ಲಿ ಬಿಯರ್ ಬಾಟಲ್ ನಿಂದ ರಮೇಶ್ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾರೆ. 


ಇದನ್ನೂ ಓದಿ- ಸಿಲಿಕಾನ್ ಸಿಟಿಯಲ್ಲಿ ಕಾಮುಕರ ಅಟ್ಟಹಾಸ: ಯುವತಿ ಮೇಲೆ ನಾಲ್ವರಿಂದ ಗ್ಯಾಂಗ್ ರೇಪ್


ಈ ಬಗ್ಗೆ ರಮೇಶ್ ಜೊತೆಗಿದ್ದ ಇಂದ್ರೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಗಂಭೀರ ಗಾಯಗೊಂಡಿದ್ದ ರಮೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಸಹ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಸದ್ಯ ಕೊಲೆ‌ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.