ಹಾಸನ : ಹೊಯ್ಸಳರು ಆಳಿದ ನಾಡು, ಶಿಲ್ಪಕಲೆಗಳ ತವರೂರು, ಕನ್ನಡ ಮೊದಲ ಶಾಸನ ನೀಡಿದ ನೆಲೆವಿಡು ಈ ನಮ್ಮ ಹಾಸನ. ಈ ನೆಲದ ಐತಿಹಾಸಿಕ ಕುರುಹುಗಳ ಸಾಕ್ಷಿಗಳನ್ನು ಸಂರಕ್ಷಿಸಿ, ಇತಿಹಾಸದ ಪುಟ ತೆರೆಯುವ ಕೆಲಸವನ್ನು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಜಿಲ್ಲೆಯಲ್ಲಿ ಮಾಡುತ್ತಿದೆ.


COMMERCIAL BREAK
SCROLL TO CONTINUE READING

ಈ ಹಿಂದೆ ಮಹಾರಾಜ ಪಾರ್ಕ್ನ ಎಲ್ಲೋ ಒಂದು ಮೂಲೆಯಲ್ಲಿದ್ದ ಪ್ರಾಚೀನ ವಸ್ತುಗಳ ಸಂಗ್ರಹಾಲಯದಲ್ಲಿ ಜಿಲ್ಲೆಯ ನಾನಾ ಭಾಗಗಳಲ್ಲಿ ದೊರೆದ ಐತಿಹಾಸಿ ಶಿಲ್ಪಗಳು, ಮೂರ್ತಿ, ಶಾಸನ, ತಾಳೆಗರಿ, ಮರದ ಕಿತ್ತನೆಯನ್ನು ಸ್ಥಳಾವಕಾಶವಿಲ್ಲದೆ ಹೇಗೇಗೋ ಇಡಲಾಗಿತ್ತು. ಸೂಕ್ತ ರಕ್ಷಣೆ ಇಲ್ಲದೆ ಮಳೆಯಲ್ಲಿ ನೆನೆದು, ಬಿಸಿಲಿನಲ್ಲಿ ಒಣಗಿ ಹಾನಿಯಾಗುತ್ತಿದ್ದವು. 


ಆದರೀಗ ನಗರದ ಮಹಾವೀರ ವೃತ್ತದ ಸಮೀಪ, ಗ್ರಂಥಾಲಯ ಪಕ್ಕದಲ್ಲಿ ಬೃಹತ್ ಕಟ್ಟಡ ನಿರ್ಮಿಸಿ ವ್ಯವಸ್ಥಿತವಾಗಿ, ಪ್ರವಾಸಿಗರ ಕಣ್ಮನ ಸೆಳೆಯುವಂತೆ ಮಾಹಿತಿ ಪೂರ್ವಕವಾಗಿ ಜೋಡಿಸಲಾಗಿದೆ. ಮಾ.13 ರಂದು ಈ ಕಟ್ಟಡದ ಉದ್ಘಾಟನೆ ನೆರವೇರಿದ್ದು, ಇದೀಗ ಸಾರ್ವಜನಿಕರು, ಪ್ರವಾಸಿಗರು, ವಿದ್ಯಾರ್ಥಿಗಳ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಮಕ್ಕಳಿಗೆ ಕೇವಲ 5ರೂ. ದೊಡ್ಡವರಿಗೆ 10ರೂ. ಪ್ರವೇಶ ಶುಲ್ಕವನ್ನು ನಿಗದಿ ಪಡಿಸಲಾಗಿದೆ.


ಇದನ್ನೂ ಓದಿ: ಕೆಎಸ್ಆರ್ಟಿಸಿಯ ಡ್ರೈವರ್ ಪುತ್ರನಿಗೆ ಯುಪಿಎಸ್ ಸಿ ಪರೀಕ್ಷೆಯಲ್ಲಿ 589 ರ್ಯಾಂಕ್..!


ನಗರದಲ್ಲಿರುವ ಈ ಸರ್ಕಾರಿ ವಸ್ತು ಸಂಗ್ರಹಾಲಯದಲ್ಲಿ ಜಿಲ್ಲೆ ಸೇರಿ ಹೊರ ಜಿಲ್ಲೆಗಳಲ್ಲಿ ದೊರಕಿರುವ ಹಲವು ಶಿಲಾ ಶಾಸನಗಳು, ವಿಗ್ರಹಗಳು, ವೀರಗಲ್ಲು, ಮೂರ್ತಿಗಳು ಸೇರಿ ರಾಜ ಮಹಾರಾಜರು ಬಳಸುತ್ತಿದ್ದ ಕತ್ತಿ-ಗುರಾಣಿ, ಬಂದೂರು ಇನ್ನಿತರೆ ವಸ್ತುಗಳನ್ನ ಸಂಗ್ರಹಿಸಿ ಸುರಕ್ಷಿತವಾಗಿ ಪ್ರದರ್ಶನಕ್ಕೆ ಇಡಲಾಗಿದೆ. ಪುರಾತನ ಕಾಲದಲ್ಲಿ ಹಾಸನದಲ್ಲಿ ಹಲವು ರಾಜ ವಂಶಸ್ಥರು, ಪಾಳೇಗಾರರು ಆಳ್ವಿಕೆ ನಡೆಸಿ ತಮ್ಮದೆಯಾದ ಐತಿಹಾಸಿ ಕೊಡುಗೆಗಳನ್ನು ನೀಡಿದ್ದು, ಅವುಗಳ ರಕ್ಷಣೆಗೆ ಪುರಾತತ್ವ ಇಲಾಖೆ ಮುಂದಾಗಿದ್ದು, ಅಪರೂಪದ ವಸ್ತುಗಳು ನಶಿಸಿ ಹೋಗದಂತೆ ಒಂದೆಡೆ ಶೇಖರಿಸಿ ಇತಿಹಾಸ ಅಧ್ಯಯನಕ್ಕೆ ಅನುಕೂಲವಾಗುವಂತೆ, ಗತಕಾಲದ ವೈಭವ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಲು ಅವಕಾಶ ನೀಡಲಾಗಿದೆ. ವಿಶ್ವವಿಖ್ಯಾತ ಬೇಲೂರು, ಹಳೇಬೀಡು, ಶ್ರವಣಬೆಳಗೊಳಕ್ಕೆ ಭೇಟಿ ಶಿಲ್ಪಕಲೆ, ವಾಸ್ತುಶಿಲ್ಪವನ್ನು ವೀಕ್ಷಣೆ ಮಾಡುವ ಪ್ರವಾಸಿಗರು ನಗರದಲ್ಲಿರುವ ವಸ್ತು ಸಂಗ್ರಹಾಲಯಕ್ಕೂ ಒಮ್ಮೆ ಭೇಟಿ ನೀಡಿ, ಅಪರೂಪದ ವಸ್ತುಗಳನ್ನು ನೋಡುವುದರೊಂದಿಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.


ಹೊರಗೆ, ಒಳಗೆ ಶಿಲ್ಪಗಳ ಆಗರ: 


ವಸ್ತು ಸಂಗ್ರಹಾಲಯದಲ್ಲಿ ಶಿಲಾಯುಗದಿಂದ ಹಿಡಿದು ಹೊಯ್ಸಳರ ಕಾಲದವರೆಗಿನ ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡುವುದರ ಜೊತೆಗೆ ಪೂರಕ ಮಾಹಿತಿಯನ್ನು ಒದಗಿಸಲಾಗಿದೆ. ಅಷ್ಟೇ ಅಲ್ಲದೆ, ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವಾಲಗಳ ಚಿತ್ರ, ಪ್ರವಾಸಿತಾಣಗಳ ಬಗ್ಗೆ ಮಾಹಿತಿ, ಅಪರೂಪದ ವಸ್ತುಗಳನ್ನು ಒಳಾಂಗಣದಲ್ಲಿ ವೀಕ್ಷಣೆ ಮಾಡಬಹುದಾಗಿದೆ. 
ಹೊರಾಗಣದಲ್ಲಿ ಒಂದು ಸಾಲಿನಲ್ಲಿ ಶೈವ ಪಂಥದ ಶಿಲ್ಪ, ವಿಗ್ರಹ, ಶಾಸನಗಳು, ಮತ್ತೊಂದು ಸಾಲಿನಲ್ಲಿ ವೈಷ್ಣವ ಪಂಥಕ್ಕೆ ಸೇರಿದ ಶಿಲ್ಪಗಳು, ಇನ್ನೊಂದು ಸಾಲಿನಲ್ಲಿ ಜೈನ ಧರ್ಮದ ಐತಿಹಾಸಿಕ ಕುರುಹುಗಳು, ನಾಲ್ಕನೇ ಸಾಲಿನಲ್ಲಿ ಗ್ರಾಮೀಣ ಪರಂಪರೆಯನ್ನು ಪ್ರತಿಬಿಂಬಿಸುವ ವೀರಗಲ್ಲು, ಮೀರ ಸತಿಗಲ್ಲುಗಳನ್ನು ಕಾಣಬಹುದಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಒಟ್ಟು 480ಕ್ಕೂ ಹೆಚ್ಚು ವಿವಿಧ ಪ್ರಕಾರದ ಮೂರ್ತಿಗಳು ಇಲ್ಲಿವೆ, ಇದರಲ್ಲಿ 460ಕ್ಕೂ ವಸ್ತುಗಳು ಹಾಸನ ಜಿಲ್ಲೆಗೆ ಸಂಬಂಧಿಸಿದ್ದಾಗಿದ್ದು, ಉಳಿದವು ನೆರೆ ಜಿಲ್ಲೆಗೆ ಸಂಬಂಧಿಸಿದ್ದಾಗಿವೆ. ಇದರ ಸದುಪಯೋಗವನ್ನು ಸಾರ್ವಜನಿಕರು, ಪ್ರವಾಸಿಗರು, ವಿದ್ಯಾರ್ಥಿಗಳು ಒಳಸಿಕೊಳ್ಳಬೇಕು ಎಂಬುದು ಇಲಾಖೆ ಆಶಯವಾಗಿದೆ. 


ಇದನ್ನೂ ಓದಿ: ಮಳೆಗೆ ಕಬ್ಬನ್‌ ಪಾರ್ಕ್‌ನಲ್ಲಿ ಅವಾಂತರ ಬುಡ ಸಮೇತ ಕಿತ್ತು ಬಿದ್ದ ಅಪರೂಪದ ಮರಗಳು
 
4.5 ಕೋಟಿರೂ.ಗೆ ಪ್ರಸ್ತಾವನೆ :


ಈಗಾಗಲೇ 2 ಕೋಟಿಗೂ ಅಧಿಕ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿ, ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಇನ್ನಷ್ಟು ಹೈಟೆಕ್ ಸ್ಪರ್ಶ ನೀಡಲು 4.5ಕೋಟಿ ರೂ. ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಈ ಅನುದಾನ ದೊರಕಿದೆ ಗೋಡೆಗಳ ಮೇಲೆ ಇತಿಹಾಸ ಸಾರುವ ಚಿತ್ರಗಳು, ಜಿಲ್ಲೆಯ ಪ್ರವಾಸಿತಾಣಗಳ ಛಾಯಚಿತ್ರ ಪ್ರದರ್ಶನ, ಆಡಿಟೋರಿಯಂ ನಿರ್ಮಾಣವಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ