ಮೈಸೂರು: ದಸರಾ ಸಂಭ್ರಮದಲ್ಲಿ ಆಕರ್ಷಣಿಯ ಲೇಸರ್ ಲೈಟ್ ಷೋ ಮೂರು ದಿನಗಳ ಕಾಲ ಎಲ್ಲರನ್ನೂ ಆಕರ್ಷಿಸಲಿದೆ. 


COMMERCIAL BREAK
SCROLL TO CONTINUE READING

ಟೌನ್ ಹಾಲ್ ಬಳಿಯ ದೊಡ್ಡ ಗಡಿಯಾರದ ಪಿಲ್ಲರ್ ಮೇಲೆ ವರ್ಣರಂಜಿತ ಲೇಸರ್ ಲೈಟ್ ಷೋ ಎಲ್ಲರನ್ನೂ ಆಕರ್ಷಿಸಲಿದೆ. ದೊಡ್ಡ ಗಡಿಯಾರದ ನಾಲ್ಕು ದಿಕ್ಕಿನಿಂದಲೂ ಪಿಲ್ಲರಗಳ ಮೇಲೆ ಲೇಸರ್ ಲೈಟ್ ನ ಚಿತ್ತಾರ ಡಿಜಿ ಮ್ಯೂಸಿಕ್ನಲ್ಲಿ ಕಲರ್ಫುಲ್ ಆಗಿ ಮೂಡಬರುತ್ತಿರುವ ಲೇಸರ್ ಲೈಟ್ ಷೋ ನೋಡಿ ಯುವಕರು ಕುಣಿದು ಕುಪ್ಪಳಿಸುತ್ತಿದ್ದಾರೆ.    


ಮೈಸೂರು ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಟ್ರೈಕಾ ಸಂಸ್ಥೆ ವತಿಯಿಂದ ಸಿಲ್ವರ್ ಜೂಬ್ಲಿ ಕ್ಲಾಕ್ ಟವರ್ ಮೇಲೆ ಮೂಡಿ ಬರುತ್ತಿರುವ ಲೇಸರ್ ಲೈಟ್ ಷೋ ಮೂರು ದಿನಗಳ ಕಾಲ ಸಂಜೆ 8 ರಿಂದ 10 ಗಂಟೆಯವರೆಗೆ ನಡೆಯಲಿದೆ. 


ವರ್ಣರಂಜಿತ ಲೈಟ್ ಷೋ ಕರ್ನಾಟಕ ಸರ್ಕಾರದ ಲಾಂಛನ, ಪ್ರವಾಸೋದ್ಯಮ ಇಲಾಖೆ ಲಾಂಛನ, ಭಾರತ ಮತ್ತು ಕರ್ನಾಟಕದ ಬಾವುಟಗಳು, ದಸರಾಗೆ ಸಂಭವಿಸಿದ ಶೋಗಳು, ರಂಗೋಲಿಗಳು, ಆನೆಗಳು, ಗಂಡಬೇರುಂಡ, ಮೈಸೂರು ಸಿಲ್ಕ್ ವಿನ್ಯಾಸಗಳು, ಮೈಸೂರು ಕರಕುಶಲ ವಸ್ತುಗಳು, ಮೈಸೂರು ಅರಮನೆ, ಜಂಬೂ ಸವಾರಿ, ಪಾರಂಪರಿಕ ಕಟ್ಟಡಗಳ ಪ್ರದರ್ಶನ, ಇತಿಹಾಸ ನೆನಪಿಸುವ ಚಿತ್ರಗಳನ್ನು ನೋಡಲು ರಂಗಾಚಾರ್ಲು ಮೆಮೋರಿಯಲ್ ಹಾಲ್ ಆವರಣದಲ್ಲಿ ಜನರು ಸಾಕ್ಷಿಯಾಗಿದ್ದರು.