ವಾರಣಾಸಿ: ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಾಲಯದ ಗರ್ಭಗುಡಿಗೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಇಂದಿನಿಂದ, ಎಲ್ಲಾ ಭಕ್ತರು ಗರ್ಭಗುಡಿಯ ಬಾಗಿಲಿನಿಂದ ಮಾತ್ರವೇ ಜಲಾಭಿಷೇಕ ಮಾಡಲು ಸಾಧ್ಯವಾಗುತ್ತದೆ. 


COMMERCIAL BREAK
SCROLL TO CONTINUE READING

ಶ್ರೀಕಾಶಿ ವಿಶ್ವನಾಥ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವಿಶಾಲ್ ಸಿಂಗ್ ಮಾತನಾಡಿ, ವಿಶ್ವನಾಥ ದೇವಾಲಯ ಆಡಳಿತವು ಇಲ್ಲಿನ ದೇವಾಲಯದ ಗರ್ಭಗುಡಿಗೆ ಭಕ್ತರ ಪ್ರವೇಶಕ್ಕೆ ಶಾಶ್ವತ ನಿಷೇಧ ಹೇರಿದೆ ಎಂದು ತಿಳಿಸಿದರು.


ಭಕ್ತರ ಭಾರಿ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು, ಸಾವನ್(ಶ್ರಾವಣ) ತಿಂಗಳಲ್ಲಿ ಈ ಬಾರಿ ಮಾಡಿದ ವ್ಯವಸ್ಥೆಯನ್ನು ಶಾಶ್ವತಗೊಳಿಸಲಾಗಿದೆ ಎಂದು ಅವರು ಹೇಳಿದರು.


"ಶ್ರಾವಣ ಮಾಸದಲ್ಲಿ ದೇವಾಲಯದ ಗರ್ಭಗೃಹದ ಬಾಗಿಲಿನಿಂದ ಜಲಾಭಿಷೇಕಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದು  ಉತ್ತಮ ಫಲಿತಾಂಶಗಳನ್ನು ನೀಡಿತು. ಎಲ್ಲಾ ಭಕ್ತರು ಯಾವುದೇ ತೊಂದರೆ ಇಲ್ಲದೆ ಸುಲಭವಾಗಿ ಜಲಾಭಿಷೇಕವನ್ನು ಮಾಡಿದರು. ಅದೇ ಸಮಯದಲ್ಲಿ ಆಡಳಿತಕ್ಕೂ ಜನಸಂದಣಿಯಿಂದ ಹೆಚ್ಚಿನ ತೊಂದರೆ ಆಗಲಿಲ್ಲ" ಎಂದು ವಿಶಾಲ್ ಸಿಂಗ್ ತಿಳಿಸಿದರು.


ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಬೈಜ್ನಾಥ್ ಧಾಮ್‌ನಲ್ಲೂ ಇದೇ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿಯೇ ಈ ತಾತ್ಕಾಲಿಕ ವ್ಯವಸ್ಥೆಯನ್ನು ಶಾಶ್ವತಗೊಳಿಸಬೇಕು ಎಂದು ದೇವಾಲಯ ಆಡಳಿತ ಈಗ ನಿರ್ಧರಿಸಿದೆ. ಈಗ ಭಕ್ತರಿಗೆ ಗರ್ಭಗುಡಿಗೆ ಪ್ರವೇಶಿಸಲು ಅವಕಾಶವಿರುವುದಿಲ್ಲ  ಎಂದು ವಿಶಾಲ್ ಸಿಂಗ್ ಹೇಳಿದ್ದಾರೆ.


"ದೇವಾಲಯದಲ್ಲಿ ಗರ್ಭಗುಡಿಯ ನಾಲ್ಕು ದ್ವಾರಗಳಿವೆ. ಭಕ್ತರು ಪ್ರವೇಶಿಸಲು ಮತ್ತು ಹೊರಗೆ ಹೋಗಲು ಕೇವಲ ಎರಡು ದ್ವಾರಗಳನ್ನು ಮಾತ್ರ ಬಳಸುತ್ತಾರೆ. ದೇವಾಲಯದಲ್ಲಿ ಜನಸಂದಣಿ ಒತ್ತಡ ಬಹಳವಾಗಿ ಹೆಚ್ಚಾಗುತ್ತದೆ. ನಾಲ್ಕು ದ್ವಾರಗಳ ಮೇಲೆ ಅರ್ಘವನ್ನು ಇರಿಸುವ ಮೂಲಕ ನೇರವಾಗಿ ಜಲಾಭಿಷೇಕಡ ವ್ಯವಸ್ಥೆ ಮಾಡುವುದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ. ಭಕ್ತರ ಅನುಕೂಲತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವಿಶಾಲ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.