ನವದೆಹಲಿ: ಪ್ರತಿವರ್ಷ ಕಾರ್ತಿಕ ಮಾಸ ಕೃಷ್ಣ ಪಕ್ಷದ ತ್ರಯೋದಶಿಯಂದು ಧನತ್ರಯೋದಶಿ (Dhanteras) ಪರ್ವವನ್ನು ಆಚರಿಸಲಾಗುತ್ತದೆ. ಈ ದಿನ ಧನ್ವಂತರಿ ಜಯಂತಿಯನ್ನೂ ಕೂಡ ಆಚರಿಸಲಾಗುತ್ತದೆ. ಧನ್ವಂತರಿ ಜಯಂತಿ ಅರ್ಥಾತ್ ಧನತ್ರಯೋದಶಿಯ ದಿನ ಮನೆಯಲ್ಲಿ ಯಾವುದೇ ಧಾತುವಿನ ವಸ್ತುವಿನ ಖರೀದಿಯ ಪರಂಪರೆ ರೂಢಿಯಲ್ಲಿದೆ. ಇಂದಿನ ದಿನ ಮನೆಯಲ್ಲಿ ಚಿನ್ನ-ಬೆಳ್ಳಿಯಿಂದ (Gold-Silver) ತಯಾರಿಸಲಾಗಿರುವ ವಸ್ತುಗಳನ್ನು ಖರೀದಿಸಿ ಮನೆಗೆ ತಂದರೆ, ಮನೆಯಲ್ಲಿ ಧನ-ವೈಭವ ಹಾಗೂ ಸುಖ ಸಮೃದ್ಧಿ ಹೆಚ್ಚಾಗುತ್ತದೆ ಎಂಬ ಮಾನ್ಯತೆ ಇದೆ. ಆದರೆ, ಒಂದು ವೇಳೆ ನಿಮಗೆ ಚಿನ್ನ-ಬೆಳ್ಳಿ ಅಥವಾ ಇತರೆ ಯಾವುದೇ ಧಾತುವಿನ ಬೆಲೆಬಾಳುವ ವಸ್ತು ಖರೀದಿ ಸಾಧ್ಯವಿಲ್ಲ ಎಂದಾದಲ್ಲಿ ಹೆದರುವ ಅವಶ್ಯಕತೆ ಇಲ್ಲ. ಏಕೆಂದರೆ ಇಂದು ನಾವು ನಿಮಗೆ ಕೆಲ ವಸ್ತುಗಳ ಕುರಿತು ಹೇಳಲಿದ್ದು, ಈ ವಸ್ತುಗಳನ್ನು ಕೂಡ ಖರೀದಿಸಿ ನೀವು ಚಿನ್ನ-ಬೆಳ್ಳಿ ಖರೀದಿಯಿಂದ ಸಿಗುವ ಭಾಗ್ಯ ಮತ್ತು ಲಾಭವನ್ನು ಪಡೆಯಬಹುದಾಗಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ: Diwali 2020: ಆರ್ಥಿಕ ಸಮಸ್ಯೆ, ಸಾಲದಿಂದ ಮುಕ್ತಿ ಪಡೆಯಲು ದೀಪಾವಳಿಯಂದು ಈ 4 ಉಪಾಯಗಳನ್ನು ಮಾಡಿ


ಹಿತ್ತಾಳೆ: ಧನತ್ರಯೋದಶಿಯ ದಿನ ಹಿತ್ತಾಳೆಯಿಂದ ತಯಾರಿಸಿದ ವಸ್ತುವನ್ನು ಖರೀದಿಸಿ ಮನೆಗೆ ತನ್ನಿ. ಇದು ಚಿನ್ನ-ಬೆಳ್ಳಿ ವಸ್ತು ಖರೀದಿಯಷ್ಟೇ ಶುಭಾಕರವಾಗಿದೆ. ಏಕೆಂದರೆ, ಚಿನ್ನ-ಬೆಳ್ಳಿಯ ಬಳಿಕ ಹಿತ್ತಾಳೆ ಅತ್ಯಂತ ಶುಭಕರ ಧಾತು ಎಂದು ಪರಿಗಣಿಸಲಾಗುತ್ತದೆ. ಧನತ್ರಯೋದಶಿಯ ದಿನ ಹಿತ್ತಾಳೆಯ ವಸ್ತು ಖರೀದಿಸಿ ದೇವಿ ಲಕ್ಷ್ಮಿಗೆ ಪೂಜೆ ಸಲ್ಲಿಸಿ ಲಕ್ಷ್ಮಿ ಕೃಪಾ ಕಟಾಕ್ಷಕ್ಕೆ ಪಾತ್ರರಾಗಿ.


ಕೊತಂಬರಿ/ ಕೊತಂಬರಿ ಬೀಜ: ಧನತ್ರಯೋದಶಿಯ ದಿನ ಕೊತಂಬರಿ ಸೊಪ್ಪು/ಬೀಜ ಖರೀದಿಸುವುದು ಕೂಡ ಶುಭಕರ ಎಂದು ಹೇಳಲಾಗಿದೆ. ಧನಿಯಾ ಮನೆಯಲ್ಲಿ ಧನವೃದ್ಧಿಗೆ ಕಾರಣ ಎಂಬ ಮಾನ್ಯತೆ ಇದೆ. ಧನತ್ರಯೋದಶಿಯ ದಿನ ಧನಿಯಾ ತಂದು ದೇವಿ ಲಕ್ಷ್ಮಿಗೆ ಅರ್ಪಿಸಿ, ಪೂಜೆ ಸಲ್ಲಿಸಿ. ಬಳಿಕ ಅದನ್ನು ಕೆಲ ದಿನಗಳ ಕಾಲ ಹೂವಿನ ದಾನಿಯಲ್ಲಿ ಬಿತ್ತನೆ ಮಾಡಿ. ಒಂದು ವೇಳೆ ಅದರಿಂದ ಧನಿಯಾ ಸೊಪ್ಪು ಬೆಳೆದರೆ, ಇಡೀ ವರ್ಷ ಮನೆಯಲ್ಲಿ ಸುಖ-ಸಮೃದ್ಧಿ ವೃದ್ಧಿಯಾಗುತ್ತದೆ.


ಪೊರಕೆ: ಪೊರಕೆಯನ್ನು ದೇವಿ ಲಕ್ಷ್ಮಿಯ ರೂಪ ಎಂದು ಪರಿಗಣಿಸಲಾಗುತ್ತದೆ. ಧನತ್ರಯೋದಶಿಯ ದಿನ ಮನೆಯಲ್ಲಿ ಪೊರಕೆ ಮನೆಗೆ ತಂದರೆ, ಮನೆಯಲ್ಲಿ ದೇವಿ ಲಕ್ಷ್ಮಿಯ ಪ್ರವೇಶವಾಗುತ್ತದೆ ಎಂಬ ನಂಬಿಕೆ ಇದೆ. ಪೊರಕೆಯಿಂದ ಮನೆಯ ಕೊಳೆಯನ್ನು ಸ್ವಚ್ಛಗೊಳಿಸಲಾಗುತ್ತದೆ. ಅರ್ಥಾತ್ ಇದರಿಂದ ಮನೆಯ ಎಲ್ಲ ನಕಾರಾತ್ಮಕ ಶಕ್ತಿ ದೂರಗೋಳಿಸಲಾಗುತ್ತದೆ. ಇದು ಕೂಡ ಚಿನ್ನ-ಬೆಳ್ಳಿಯಷ್ಟೇ ಮಹತ್ವ ಪಡೆದುಕೊಂಡಿದೆ.


ಇದನ್ನು ಓದಿ- ಧನತ್ರಯೋದಶಿಯ ದಿನ ಅಗ್ಗದ ಬೆಲೆಯಲ್ಲಿ Gold ಖರೀದಿಸಬೇಕೆ? ಇಲ್ಲಿದೆ ಉಪಾಯ


ಅಕ್ಷತೆ: ಧನತ್ರಯೋದಶಿಯ ದಿನ ಮನೆಗೆ ಅಕ್ಷತೆ ಅರ್ಥಾತ್ ಧಾನ್ಯ ಅಥವಾ ಅಕ್ಕಿಯನ್ನು ಮನೆಗೆ ತನ್ನಿ. ಶಾಸ್ತ್ರಗಳ ಪ್ರಕಾರ, ವಿವಿಧ ಧಾನ್ಯಗಳಲ್ಲಿ ಅನ್ನವನ್ನು ತುಂಬಾ ಶುಭ ಎಂದು ಹೇಳಲಾಗುತ್ತದೆ. ಅಕ್ಷತ್ ಪದದ ಅರ್ಥ ಧನ-ಸಂಪತ್ತಿನಲ್ಲಿ ಅಂತಂತ್ ವೃದ್ಧಿ. ಶಾಸ್ತ್ರಗಳ ಪ್ರಕಾರ ಧನತ್ರಯೋದಶಿಯ ದಿನ ಮನೆಗೆ ಅಕ್ಕಿ ಖರೀದಿಸಿ ತರುವುದರಿಂದ ಮನೆಯ ಧನ, ವೈಭವ ಹಾಗೂ ಐಶ್ವರ್ಯದಲ್ಲಿ ಅನಂತ ವೃದ್ಧಿಯಾಗುತ್ತದೆ. ಅಂದಿನ ದಿನ ಅಕ್ಕಿ ಖರೀದಿಸಿ ಮನೆಗೆ ತರುವುದು ಚಿನ್ನ-ಬೆಳ್ಳಿ ಖರೀದಿಸಿ ಮನೆಗೆ ತರುವಷ್ಟೇ ಶುಭಕರ ಎಂದು ಪರಿಗಣಿಸಲಾಗಿದೆ.


ಜೋಳ: ಜೋಳ ಚಿನ್ನಕ್ಕೆ ಸಮಾನ ಎಂದು ಪೌರಾಣಿಕ ಕಥೆಗಳಲ್ಲಿ ಉಲ್ಲೇಖವಿದೆ. ಧನತ್ರಯೋದಶಿಯ ದಿನ ಮನೆಗೆ ಜೋಳ ಖರೀದಿಸಿ ತರುವುದು ಚಿನ್ನ ಖರೀದಿಸಿ ಮನೆಗೆ ತರುವಷ್ಟೇ ಶುಭಕರ ಎಂದು ಪರಿಗಣಿಸಲಾಗಿದೆ. ಇದು ಕೂಡ ಚಿನ್ನ-ಬೆಳ್ಳಿ ಖರೀದಿಯಷ್ಟೇ ಉತ್ತಮ ಫಲಗಳನ್ನು ನೀಡುತ್ತದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.