ವಿವೇಚನೆಯುಳ್ಳ, ಸೂಕ್ಷ್ಮತೆಯನ್ನೊಳಗೊಂಡ ನವೀನ ಭಾರತ
ಭಾರತದ ಶಕ್ತಿಯು ಜಾಗೃತವಾಗಿದೆ ಮತ್ತು ಈ ದೇಶದ ಪ್ರತಿಷ್ಠೆಯು ಎಲ್ಲೆಡೆ ಹಬ್ಬಿದೆ. ಭಾರತವು ಆರ್ಥಿಕತೆಯಲ್ಲಿ ಮುಂಚೂಣಿಯಲ್ಲಿರುವ ದೇಶಗಳಲ್ಲಿ ಒಂದಾಗುವುದರ ಜೊತೆಗೆ, ಎಲ್ಲರನ್ನೂ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಬಲಪಡಿಸಬಲ್ಲ ರಾಷ್ಟ್ರವಾಗಿದೆ.
ಇನ್ನೂ ಸುಧಾರಿಸಬೇಕಾದದ್ದು ಮತ್ತು ಮಾಡಬೇಕಾದದ್ದು ಬಹಳಷ್ಟಿದೆ. ಆದರೆ ನಾವು ಸರಿಯಾದ ದಿಕ್ಕಿನಲ್ಲೇ ಸಾಗುತ್ತಿದ್ದೇವೆ. ಈ ದೇಶದ ಮುಂಬರುವ ಪೀಳಿಗೆಗಳಿಗೆ ಭವಿಷ್ಯವು ಬಹಳ ಉಜ್ವಲವಾಗಿದೆ ಎಂಬುದು ನಮ್ಮ ಬಲವಾದ ನಂಬಿಕೆ.
ಭಾರತದ ದನಿಯು ಸದಾ ನ್ಯಾಯಪರವಾಗಿ ಹಾಗೂ ವಿವೇಕದಿಂದ ಕೂಡಿದೆ. ನಾವು ವಿವೇಚನೆಯುಳ್ಳವರು, ಅದರಿಂದ ನಮ್ಮ ಮೇಲೆ ಯಾರೂ ಕೂಡ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ. ನಾವು ಪ್ರಪಂಚದ ಎಲ್ಲಾ ರೀತಿಯ ಜನಗಳನ್ನು ಗೌರವಿಸುತ್ತೇವೆ ಹಾಗೂ ಅವರ ನೋವಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತೇವೆ. ಇದನ್ನು ಜಗತ್ತು ಇದೀಗ ಗಮನಿಸಲು ಆರಂಭಿಸಿದೆ. ವಿಶ್ವಶಾಂತಿಗಾಗಿ ಭಾರತವು ವಹಿಸಬಹುದಾದ ಪಾತ್ರದತ್ತ ಜಗತ್ತು ಈಗ ಎಚ್ಚೆತ್ತುಕೊಂಡು ನೋಡುತ್ತಿದೆ.
ನಾವು ವೈವಿಧ್ಯತೆಯನ್ನು ಆಲಂಗಿಸಿದ್ದೇವೆ. ಭಾರತವು ಅನೇಕ ಸಂಸ್ಕೃತಿಗಳ ಹಾಗೂ ಅನೇಕ ಪದ್ಧತಿಗಳ ಮೇಳೈಕೆಯಾಗಿದೆ. ಎಲ್ಲಾ ಪದ್ಧತಿಗಳನ್ನೂ, ಎಲ್ಲಾ ಧರ್ಮಗಳನ್ನೂ ನಾವು ಸನ್ಮಾನಿಸುತ್ತೇವೆ. ಎಲ್ಲಾ ಧರ್ಮಗಳೂ ಭಾರತದಲ್ಲಿ ಒಂದು ಸ್ಥಾನವನ್ನು ಕಂಡುಕೊಂಡಿವೆ ಮತ್ತು ಎಲ್ಲರನ್ನೂ ಗೌರವಿಸಲಾಗುತ್ತದೆ.
ದೇಶದ ಒಂದು ಭಾಗದಲ್ಲಿ ಕಮ್ಯುನಿಸ್ಟ್ ಸರ್ಕಾರವಿದೆ, ಕೆಲವು ಭಾಗಗಳಲ್ಲಿ ಬಹು-ಪಕ್ಷಗಳ ಪ್ರಜಾತಂತ್ರವಿದೆ. ಈ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಜಗತ್ತಿನ ಯಾವ ಭಾಗದಲ್ಲೂ ಕಾಣಲು ಸಾಧ್ಯವಿಲ್ಲ. ಬಹುತೇಕ ರಾಷ್ಟ್ರಗಳ ಪ್ರಜಾತಂತ್ರಗಳು, ಎರಡು ಅಥವಾ ಮೂರು ದೊಡ್ಡ ಪಕ್ಷಗಳನ್ನು ಹೊಂದಿವೆ, ಅಷ್ಟೇ.
ಭಾರತದಲ್ಲಿ ಯುವಕರ ಸಂಖ್ಯೆ ಹೆಚ್ಚಿದೆ. ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಇತಿಹಾಸದ ನವೀನ ಪುಟವು ತೆರೆದಂತಿದೆ, ನಾವು ನಮ್ಮ ಬೇರುಗಳತ್ತ ತೆರಳುತ್ತಿದ್ದೇವೆ, ನಮ್ಮ ಸಂಸ್ಕೃತಿಯ ನಾಗರಿಕತೆಯ ವೈಭವವನ್ನು ಗುರುತಿಸುತ್ತಿದ್ದೇವೆ. ಇದರಿಂದ ನಮ್ಮ ಯುವಕರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತಿದೆ. ಇಂದಿನ ಯುವಕರು ನಮ್ಮ ಇತಿಹಾಸದಲ್ಲಿ, ತತ್ವಶಾಸ್ತ್ರದಲ್ಲಿ ಮತ್ತು ಆಧ್ಯಾತ್ಮಿಕತೆಯಲ್ಲಿ ಬಹಳ ಆಸಕ್ತಿಯನ್ನು ವಹಿಸುತ್ತಿದ್ದಾರೆ. ಇದೇ ನಮ್ಮ ದೇಶದ ಬಲವಾಗಿದೆ.
ಕೆಲವು ವರ್ಷಗಳ ಹಿಂದೆ ಅಮೆರಿಕದ ಒಂದು ಸಂದರ್ಶನದಲ್ಲಿ, "ಭಾರತವು ಪ್ರಜಾಪ್ರಭುತ್ವ ದೇಶವಾಗಿರದೆ ಸರ್ವಾಧಿಕಾರದ ದೇಶವಾಗಿದ್ದಿದ್ದರೆ, ಆರ್ಥಿಕವಾಗಿ ಬೇಗನೆ ಪ್ರಗತಿ ಸಾಧಿಸಬಹುದಿತ್ತೇನೋ" ಎಂದು ನಮ್ಮನ್ನು ಕೇಳಿದರು. ಆದರೆ ಪ್ರಜಾಪ್ರಭುತ್ವವೇ ನಮ್ಮ ದೇಶಕ್ಕೆ ಶ್ರೇಯ ಎಂಬುದು ನಮಗೆ ಖಚಿತವಾಗಿ ತಿಳಿದಿದೆ. ಸ್ವಲ್ಪ ನಿಧಾನವಾದರೂ ಕೂಡ ಅದರಿಂದಲೇ ನಮಗೆ ಒಳಿತು. ಇಲ್ಲಿ ಪ್ರತೀ ವ್ಯಕ್ತಿಯ ಅಭಿಪ್ರಾಯಕ್ಕೂ ಬೆಲೆಯಿದೆ. ನಮಗೆ ಅನೇಕ, ಪ್ರಬಲವಾದ ಹಾಗೂ ವಿವೇಚನೆಯುಳ್ಳ ದನಿಗಳು ಬೇಕು.
ಒಂದು ಕುಟುಂಬವು ಯಾವಾಗ ಸಾಮರಸ್ಯದಿಂದಿರಲು ಸಾಧ್ಯ? ಮುಂದಿರುವ ಮಾರ್ಗದ ತಿಳಿವಳಿಕೆ ಕುಟುಂಬದ ಪ್ರತಿಯೊಂದು ಸದಸ್ಯರಿಗೂ ಇದ್ದಾಗ ಮಾತ್ರ. ಯಾವಾಗ ವಿರೋಧಿಸಬೇಕೋ ಆಗ ವಿರೋಧಿಸುವ ಸ್ವಾತಂತ್ರ್ಯವೂ ಅವರಿಗಿದೆ ಹಾಗೂ ಸಹಕಾರ ಬೇಕಾದಾಗ ಅವರು ಸಹಕಾರವನ್ನೂ ಕೂಡ ನೀಡುತ್ತಾರೆ. ಒಟ್ಟಾರೆ ಎಲ್ಲರೂ ಅಭಿವೃದ್ಧಿಯ ಬಗ್ಗೆ ಆಲೋಚಿಸುತ್ತಾರೆ ಮತ್ತು ಶಾಂತಿಯುತವಾದ, ಸಂತೋಷಮಯವಾದ ಕುಟುಂಬವಾಗಿ ಮುನ್ನಡೆಯುತ್ತಾರೆ. ನಮ್ಮ ದೇಶದ ವಿಷಯವೂ ಹೀಗೆಯೇ.
ಪ್ರತಿಪಕ್ಷದ ದನಿಯು ಕೂಡ ದೇಶದ ಪ್ರಗತಿಗೆ ಬಹಳ ಮುಖ್ಯ. ಯಾವುದೇ ಪ್ರಜಾಪ್ರಭುತ್ವಕ್ಕೆ ಇದು ಅತ್ಯವಶ್ಯಕ. ದೇಶದ ಅಭಿವೃದ್ಧಿಗಾಗಿ ಎಲ್ಲರೂ ತಮ್ಮ ಪಾತ್ರವನ್ನು ಮಾಡಬೇಕು. ವಿರೋಧ ಪಕ್ಷವು ಆಡಳಿತ ಪಕ್ಷದ ನ್ಯೂನತೆಗಳನ್ನು ಖಂಡಿತವಾಗಿಯೂ ಎತ್ತಿ ತೋರಿಸಬೇಕು. ಆದರೆ ವಿರೋಧಿಸಬೇಕೆಂಬ ಏಕೈಕ ಕಾರಣಕ್ಕಾಗಿ ಮಾತ್ರ ವಿರೋಧಿಸಬಾರದು, ಅಭಿವೃದ್ಧಿಗೋಸ್ಕರ ವಿರೋಧಿಸಬೇಕು. ಎಲ್ಲರೂ ಒಂದಾಗಿ ಸೇರಿ ಸಂಭ್ರಮಿಸುವ ಕೆಲವು ಸಂದರ್ಭಗಳಿರುತ್ತವೆ, ಆಗ ಪಕ್ಷ ಬೇಧ ಮರೆತು ಸಂಭ್ರಮಿಸಬೇಕು. ಸಮಾಜದ ವಿವಿಧ ವರ್ಗಗಳ ನಡುವಿನ ಸಹಕಾರದಿಂದಾಗಿ ದೇಶವು ಶೀಘ್ರವಾಗಿ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯ.
ಎಲ್ಲರೂ ಮತದಾರರ ಪಟ್ಟಿಯಲ್ಲಿ ತಮ್ಮನ್ನು ನೊಂದಾಯಿಸಿಕೊಳ್ಳಬೇಕು. ನೊಂದಾಯಿಸಿಕೊಂಡಿರುವವರು ಹೋಗಿ ತಮ್ಮ ಮತವನ್ನು ಚಲಾಯಿಸಲೇಬೇಕು. ಅದು ಒಂದು ಪವಿತ್ರವಾದ ಕಾರ್ಯ ಹಾಗೂ ನಿಮ್ಮ ಕರ್ತವ್ಯ. ಮತ ಚಲಾಯಿಸುತ್ತಲಿರುವಾಗ ನಿಮ್ಮ ಜಾತಿ, ಸಮುದಾಯ ಮತ್ತು ಧರ್ಮವನ್ನು ನೋಡಬೇಡಿ. ಒಳ್ಳೆಯವರಾದ, ಸಮಾಜಕ್ಕೆ ಸೇವೆಯನ್ನು ಮಾಡಬಲ್ಲಂತವರಿಗೆ ಮಾತ್ರ ನಿಮ್ಮ ಮತವನ್ನು ಚಲಾಯಿಸಿ.
ಅಭ್ಯರ್ಥಿಗಳು ನಿಮ್ಮ ಬಳಿ ಬಂದು ಮತವನ್ನು ಯಾಚಿಸಿದಾಗ ದೇವರಂತೆ ವರ್ತಿಸಿ. "ಸರಿ, ಪರಿಗಣಿಸುತ್ತೇನೆ" ಎನ್ನಿ. ಅವರು ಹಣ ನೀಡಿಲು ಬರಬಹುದು, ಆದರೆ ಕೆಲವು ನೋಟುಗಳಿಗಾಗಿ ನಿಮ್ಮ ಮತವನ್ನು ಮಾರಿಕೊಳ್ಳಬೇಡಿ. ಅದು ನಿಮ್ಮ ಆತ್ಮವನ್ನೇ ಮಾರಿಕೊಂಡಂತೆ. ಮತಕ್ಕಾಗಿ ಹಣ ಬೇಡ, ಇದೇ ನಿಮ್ಮ ನಿಯಮವಾಗಿರಬೇಕು.
ನಮ್ಮ ಜನರು ಬಹಳ ವಿವೇಚನೆಯುಳ್ಳವರು. ಗ್ರಾಮೀಣ ಪ್ರದೇಶಗಳಲ್ಲೂ ಸಹ, ಜನರು ವಿವೇಚನೆ ಮತ್ತು ಬುದ್ಧಿವುಳ್ಳವರಾಗಿದ್ದಾರೆ.ಭಾರತವು ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ. ಅದು ಬಹಳ ಕಂಪನಶೀಲವಾಗಿದೆ ಹಾಗೂ ಬಲಿಷ್ಟವಾಗಿದೆ. ಅದನ್ನು ಎತ್ತಿ ಹಿಡಿಯುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.