ನವದೆಹಲಿ: ಜ್ಯೋತಿಷ್ಯದ ಪ್ರಕಾರ, ಶುಕ್ರ ಗ್ರಹದ ಶಾಂತಿಗಾಗಿ ಪರಿಹಾರಗಳನ್ನು ಶುಕ್ರವಾರ(Friday) ನೆರವೇರಿಸಲಾಗುತ್ತದೆ. ಶುಕ್ರ ಗ್ರಹವನ್ನು ಸೌಂದರ್ಯ, ಸಮೃದ್ಧಿ, ವೈಭವ, ಕಲೆ, ಸಂಗೀತ ಮತ್ತು ಕಾಮಗಳ ಅಂಶವೆಂದು ಪರಿಗಣಿಸಲಾಗಿದೆ. ಶುಕ್ರ ಗ್ರಹ ವೃಷಭ ಮತ್ತು ತುಲಾ ರಾಶಿಗಳ ಅಧಿಪತಿಯಾಗಿದ್ದಾನೆ. ಮೀನ ರಾಶಿಯಲ್ಲಿ ಅವನು ಉಚ್ಚ ಮತ್ತು ಕನ್ಯಾರಾಶಿಯಲ್ಲಿ ನೀಚ ಸ್ಥಿತಿಯಲ್ಲಿರುತ್ತಾನೆ. ಯಾರ ಜಾತಕದಲ್ಲಿ ಶುಕ್ರ ಪ್ರಬಲವಾಗಿರುತ್ತಾನೆಯೋ ಅವರ ವ್ಯಕ್ತಿತ್ವದಲ್ಲಿ ಶುಕ್ರನು ಆಕರ್ಷಕನಾಗಿರುತ್ತಾನೆ. ಶುಕ್ರನನ್ನು ಆರಾಧಿಸಲು ಶುಕ್ರವಾರ ಉತ್ತಮ ದಿನ. ಈ ದಿನ ಯಾವ ಯಾವ ಕೆಲಸಗಳನ್ನು ಮಾಡಿದರೆ ಶುಕ್ರನ ಕೃಪೆಗೆ ನಾವು ಪಾತ್ರರಾಗಬಹುದು ಎಂಬುದು ಇಲ್ಲಿದೆ.


COMMERCIAL BREAK
SCROLL TO CONTINUE READING

1. ಶುಕ್ರವಾರ ಉಪವಾಸ ವೃತ ಪ್ರಯೋಜನಕಾರಿಯಾಗಿದೆ ಎಂಬುದು ಧಾರ್ಮಿಕ ನಂಬಿಕೆ. ಅಂದು ಉಪವಾಸ ಮಾಡುವ ಮೂಲಕ ಸಂತೋಷಿಮಾತೆಯ ಕೃಪೆಗೆ ಪಾತ್ರರಾಗಬಹುದು.
2. ಲಕ್ಷ್ಮಿ ದೇವಿಯನ್ನು ಶುಕ್ರವಾರ ಪೂಜಿಸಬೇಕು. ತಾಯಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಎಂದಿಗೂ ಹಣದ ಕೊರತೆ ಇರುವುದಿಲ್ಲ. ಬೆಳಗ್ಗೆ ಸ್ನಾನ ಮಾಡಿದ ಬಳಿಕ, ದೇವರ ಕೋಣೆಯಲ್ಲಿ ತಾಯಿ ಲಕುಮಿಯ ಧ್ಯಾನ ಮಾಡಬೇಕು.
3. ಹಿಂದೂ ಧರ್ಮ ಶಾಸ್ತ್ರದಲ್ಲಿ ಮಂತ್ರೋಚ್ಚಾರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ದೇವಿ ಲಕ್ಷ್ಮಿಯ ಈ ಮಂತ್ರ ಪಠಣದಿಂದ ತಾಯಿಯನ್ನು ಪ್ರಸನ್ನಗೊಳಿಸಿ: ॐ ಶ್ರೀ ಶ್ರೀಯೇ ನಮ:
4. ಜಗಳ ಅಥವಾ ವ್ಯಾಜ್ಯ ಅಥವಾ ಅಶಾಂತಿ ಇರುವ ಮನೆಗಳಲ್ಲಿ ಲಕ್ಷ್ಮಿ ವಾಸಿಸುವುದಿಲ್ಲ. ಪ್ರೀತಿ ತುಂಬಿರುವ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ ಎಂಬುದನ್ನು ನೆನಪಿನಲ್ಲಿಡಿ.
5. ಅನ್ನ ಇದು ದೇವಿ ಲಕುಮಿಯ ಒಂದು ರೂಪ. ಹೀಗಾಗಿ ಅನ್ನ ಹಾಳಾಗದಂತೆ ಯಾವಾಗಲೂ ಜಾಗ್ರತೆವಹಿಸಿ. ಅನ್ನದ ಅವಮಾನ ಬೇಡ.