ನವದೆಹಲಿ: ಕ್ರಿಸ್ಮಸ್ ಹಬ್ಬದ ಆಚರಣೆಗೆ ಇಡೀ ವಿಶ್ವವೇ ಸನ್ನದ್ಧವಾಗುತ್ತಿದೆ. ಸಂತಾ ಕ್ಲಾಸ್, ಕ್ರಿಸ್ಮಸ್ ಟ್ರೀ, ಕೇಕ್ ಹಾಗೂ ಜಿಂಗಲ್ ಬೆಲ್ ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿವೆ. ಕ್ರಿಸ್ಮಸ್ ಹಬ್ಬ ಆಚರಣೆಯ ಒಂದು ದಿನ ಮೊದಲು ಅಂದರೆ ಡಿಸೆಂಬರ್ 24ರಂದು ಜನರು ಈಸ್ಟರ್ ಈವ್ ಆಚರಿಸುತ್ತಾರೆ. ನಂತರ, ಮಧ್ಯರಾತ್ರಿಯಿಂದಲೇ ಜನರು ಪರಸ್ಪರ ಮೇರಿ ಕ್ರಿಸ್ಮಸ್, ಹ್ಯಾಪಿ ಕ್ರಿಸ್ಮಸ್ ಸಂದೇಶಗಳನ್ನು ಕಳುಹಿಸಲು ಆರಂಭಿಸುತ್ತಾರೆ ಹಾಗೂ ಸ್ಟಿಕರ್ ಗಳ ಮೂಲಕವೂ ಶುಭಾಷಯಗಳನ್ನು ಕೋರುತ್ತಾರೆ.


COMMERCIAL BREAK
SCROLL TO CONTINUE READING

ಇಂದು ನಾವು ನಿಮಗೆ ವಾಟ್ಸ್ ಆಪ್ ಹಾಗೂ ಹೈಕ್ ಗಳ ಮೂಲಕ ಸ್ಟಿಕರ್ ಗಳನ್ನು ಹೇಗೆ ಡೌನ್ಲೋಡ್ ಮಾಡಬೇಕು ಹಾಗೂ ಹಂಚಿಕೊಳ್ಳಬೇಕು ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಿದ್ದೇವೆ. ಅಂಡ್ರಾಯಿಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೇಲೆ ಹೋಗಿ ಕ್ರಿಸ್ಮಸ್ ಸ್ಟಿಕ್ಕರ್ ಪ್ಯಾಕ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. “WAStickerApp”ನ ಸಹಾಯದ ಮೂಲಕ ಸ್ಟಿಕರ್ ಪ್ಯಾಕ್ ಡೌನ್ಲೋಡ್ ಮಾಡಿ ಸುಲಭವಾಗಿ ನಿಮ್ಮ ಬಂಧು, ಮಿತ್ರರಿಗೆ ನೀವು ಕ್ರಿಯೇಟಿವ್ ಸ್ಟೈಲ್ ನಲ್ಲಿ ಶುಭಾಷಯ ಕೊರಬಹುದು.


ವಾಟ್ಸ್ ಆಪ್ ನಲ್ಲಿ ಕ್ರಿಸ್ಮಸ್ ಸ್ಟಿಕರ್ ಕಳುಹಿಸಲು ಈ ಕೆಳಗೆ ಸೂಚಿಸಿರುವ ವಿಧಾನ ಅನುಸರಿಸಿ


STEP 1- ಮೊದಲು ನಿಮ್ಮ ಫೋನ್ ನಲ್ಲಿ ವಾಟ್ಸ್ ಆಪ್ ಓಪನ್ ಮಾಡಿ.
STEP 2- ಯಾವುದೇ ಒಂದು ಕಾಂಟಾಕ್ಟ್ ನಂಬರ್ ಅಥವಾ ಗ್ರೂಪ್ ಆಯ್ಕೆ ಮಾಡಿ.
STEP 3- ಬಳಿಕ ಮೆಸೇಜ್ ಬಾಕ್ಸ್ ಮೇಲೆ ಕ್ಲಿಕ್ಕಿಸಿ.
STEP 4- ಅಲ್ಲಿ ನೀಡಲಾಗಿರುವ ಇಮೇಜ್ ಗುಂಡಿಯನ್ನೊಮ್ಮೆ ಕ್ಲಿಕ್ಕಿಸಿ.
STEP 5- ಸ್ಕ್ರೀನ್ ಕೆಳಗಡೆ ಫ್ಲಾಶ್ ಆಗುತ್ತಿರುವ ಸ್ಟಿಕರ್ ಐಕಾನ್ ಅನ್ನು ಆಯ್ಕೆ ಮಾಡಿ.
STEP 6- ಬಳಿಕ ಪ್ಲಸ್ ಚಿನ್ಹೆಯನ್ನೊಮ್ಮೆ ಒತ್ತಿ ಸ್ಟಿಕರ್ ಡೌನ್ಲೋಡ್ ಮಾಡಿ.
STEP 7- ಆ ನಂತರ ನಿಮಗೆ ಗೂಗಲ್ ಪ್ಲೇ ಸ್ಟೋರ್ ಗೆ ರಿಡೈರೆಕ್ಟ್ ಮಾಡಲಾಗುವುದು.
STEP 8- ಅಲ್ಲಿನಿಂದಲೂ ಕೂಡ ನೀವು ಕ್ರಿಸ್ಮಸ್ ಥೀಮ್ ನ ಸ್ಟಿಕರ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.


ವಾಟ್ಸ್ ಆಪ್ ಅಷ್ಟೇ ಅಲ್ಲ ಹೈಕ್ ಮೇಲೂ ಕೂಡ ನೀವು ಸುಲಭವಾಗಿ ನಿಮ್ಮ ಬಂಧು ಮಿತ್ರರಿಗೆ ಕ್ರಿಯೇಟಿವ್ ಸ್ಟೈಲ್ ನಲ್ಲಿ ವಿಶ್ ಮಾಡಬಹುದು. ಇಲ್ಲಿ ಇದನ್ನು 'ಹೈಕ್ ಸ್ಟಿಕರ್ ಚ್ಯಾಟ್' ಹೆಸರಿನಿಂದ ಗುರುತಿಸಲಾಗುತ್ತದೆ. ಇದನ್ನು ಓಪನ್ ಮಾಡುತ್ತಲೇ ನಿಮಗೆ ಸ್ಟಿಕರ್ ಐಕಾನ್ ಸಿಗಲಿದೆ. ನೀವು ಅಲ್ಲಿಂದ ಇದನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.