ನವದೆಹಲಿ: ಸಾಮಾನ್ಯವಾಗಿ ಮಲಗಲು ರಾತ್ರಿ ಹಾಗೂ ಇತರೆ ಕೆಲಸಕ್ಕಾಗಿ ದಿನದ ಅವಧಿ ನಿಶ್ಚಿತವಾದಂತೆ. ನಮ್ಮ ಪ್ರತಿಯೊಂದು ಕೆಲಸ ಕಾರ್ಯಗಳಿಗೂ ಕೂಡ ಸಮಯ ಮತ್ತು ದಿನ ನಿಗದಿಯಾಗಿರುತ್ತದೆ. ಮನೆಗಾಗಿ ಯಾವುದೇ ಒಂದು ವಸ್ತು ಖರೀದಿಸುವುದಾದರೂ ಕೂಡ ಜೋತಿಷ್ಯ ಶಾಸ್ತ್ರದ ಪ್ರಕಾರ ವಸ್ತುಗಳ ಖರೀದಿಗೆ ಶುಭ ಹಾಗೂ ಅಶುಭ ಗಳಿಗೆ ಇರುತ್ತವೆ.


COMMERCIAL BREAK
SCROLL TO CONTINUE READING

ವಾರದ ಏಳು ದಿನಗಳು ವಿವಿಧ ಗ್ರಹಗಳು ಹಾಗೂ ವಿವಿಧ ದೇವರ ಜೊತೆಗೆ ಸಂಬಂಧ ಹೊಂದಿವೆ. ಸಾಮಾನ್ಯವಾಗಿ ಶನಿವಾರದ ದಿನ ಲೋಹ ಹಾಗೂ ಎಣ್ಣೆ ಖರೀದಿಸಬಾರದು ಎಂದು ಹೇಳಲಾಗುತ್ತದೆ. ಹಾಗಾದರೆ ವಾರದ ಏಳು ದಿನಗಳಲ್ಲಿ ಯಾವ ದಿನ ಯಾವ ವಸ್ತುಗಳನ್ನು ಖರೀದಿಸುವುದು ಅತ್ಯಂತ ಶುಭಕರ ಹಾಗೂ ಯಾವ ವಸ್ತು ಖರೀದಿಸುವುದು ಅಶುಭಕರ ಎಂಬುದನ್ನು ತಿಳಿಯೋಣ.


ಸೋಮವಾರ: ಸೋಮವಾರದ ದಿನ ದೇವಾಧಿದೇವ ಶಿವ ಹಾಗೂ ಚಂದ್ರನಿಗೆ ಸಮರ್ಪಿತವಾಗಿರುತ್ತದೆ. ಈ ದಿನ ಬಿಳಿ ಬಣ್ಣದ ವಸ್ತುಗಳ ಖರೀದಿ ಶುಭಕರ ಎಂದು ಹೇಳಲಾಗುತ್ತದೆ. ಉದಾಹರಣೆಗಾಗಿ- ಅಕ್ಕಿ , ಮಿಠಾಯಿ, ಹಾಲು ಹಾಗೂ ಹಾಲಿನಿಂದ ತಯಾರಾದ ಪದಾರ್ಥಗಳು ಇತ್ಯಾದಿ. ಆದರೆ, ಈ ದಿನ ಸ್ಟೇಷನರಿ, ಧಾನ್ಯ, ಎಲೆಕ್ಟ್ರಾನಿಕ್ ವಸ್ತುಗಳು ಇತ್ಯಾದಿ ಖರೀದಿ ಮಾಡಬಾರದು ಎಂದು ಹೇಳಲಾಗುತ್ತದೆ.


ಮಂಗಳವಾರ: ಮಂಗಳವಾರ ಮಂಗಳ ದೇವ ಹಾಗೂ ಶ್ರೀಆಂಜನೇಯನಿಗೆ ಸಮರ್ಪಿತವಾಗಿದೆ. ಮಂಗಳವಾರ ಭೂಮಿ ಖರೀದಿ-ಮಾರಾಟಕ್ಕೆ ಸಂಬಂಧಿಸಿದಂತೆ ಶುಭಕರ ಎಂದು ಹೇಳಲಾಗುತ್ತದೆ. ಆಸ್ತಿ-ಪಾಸ್ತಿಗೆ ಸಂಬಂಧಿಸಿದ ಕೆಲಸಗಳು ಈ ದಿನ ಶುಭಕರ ಎಂದು ಹೇಳಲಾಗುತ್ತದೆ. ಆದರೆ ಈ ದಿನ ಹಾಲಿನಿಂದ ತಯಾರಿಸಲಾಗಿರುವ ವಸ್ತುಗಳ ಖರೀದಿ ಶುಭಕರ ಎಂದು ಹೇಳಲಾಗುವುದಿಲ್ಲ. ಈ ದಿನ ಒಂದು ವೇಳೆ ನೀವು ನಿಮ್ಮ ಮನೆ ನಿರ್ಮಾಣಕ್ಕೆ ಕಟ್ಟಿಗೆಗಳನ್ನು ಖರೀದಿಸಲು ಬಯಸುತ್ತಿದ್ದರೆ ನಿಂತು ಹೋಗಿ. ಏಕೆಂದರೆ ಮಂಗಳವಾರ ಕಟ್ಟಿಗೆ, ಚರ್ಮ ಹಾಗೂ ಲೋಹದಿಂದ ತಯಾರಿಸಲಾಗಿರುವ ಸಾಮಾನುಗಳ ಖರೀದಿ ಮಾಡಬಾರದು. ಪೀಠೋಪಕರಣಗಳ ಖರೀದಿ ಕೂಡ ಈ ದಿನ ಶುಭಕರವಲ್ಲ.


ಬುಧವಾರ: ಬುಧವಾರ ರಿದ್ಧಿ-ಸಿದ್ಧಿ ಪ್ರದಾಯಕ ಶ್ರೀಗಣೇಶನ ದಿನವಾಗಿದೆ ಹಾಗೂ ಬುಧ ದೇವನಿಗೆ ಸಮರ್ಪಿತವಾಗಿದೆ. ಈ ದಿನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ವಸ್ತುಗಳು ಅಂದರೆ ಸ್ಟೇಷನರಿ, ಹಸಿರು ತರಕಾರಿ, ಹೆಸರುಬೇಳೆ, ಮನೆಯ ಅಲಂಕಾರಕ್ಕೆ ಸಂಬಂಧಿಸಿದ ವಸ್ತುಗಳು, ಆಟಕ್ಕೆ ಸಂಬಂಧಿಸಿದ ವಸ್ತುಗಳ ಖರೀದಿ ಶುಭಕರ ಎಂದು ಹೇಳಲಾಗುತ್ತದೆ. ಆದರೆ, ಈ ದಿನ ಪಾತ್ರೆಗಳು, ಔಷಧಿ, ಅಕ್ಕಿ, ಸೀಮೆಎಣ್ಣೆ ಇತ್ಯಾದಿಗಳ ಖರೀದಿಯಿಂದ ದೂರವಿರಿ.


ಗುರುವಾರ:ಗುರುವಾರದ ದಿನ ಬೃಹಸ್ಪತಿ ದೇವನಿಗೆ ಸಂಬಧಿಸಿದ ದಿನವಾಗಿದೆ. ಈ ದಿನ ಹೊಸ ಆಸ್ತಿ ಖರೀದಿ ಹಾಗೂ ವಿದ್ಯುತ್ ಉಪಕರಣಗಳಾದ ಟಿವಿ, ಫ್ರಿಜ್, ಎಸಿ, ಕೂಲರ್, ಕಂಪ್ಯೂಟರ್, ಮೊಬೈಲ್ ಇತ್ಯಾದಿಗಳನ್ನು ಖರೀದಿಸಲು ಶುಭದಿನವಾಗಿರುತ್ತದೆ. ಈ ದಿನ ಕಣ್ಣಿಗೆ ಸಂಬಂಧಿಸಿದ ವಸ್ತುಗಳು ಅಂದರೆ ಕನ್ನಡಕ, ಗಾಗಲ್ ಇತ್ಯಾದಿಗಳನ್ನು ಖರೀದಿಸಬಾರದು. ಈ ದಿನ ಪೂಜಾ ಸಾಮಗ್ರಿ, ಹರಿತವಾದ ವಸ್ತುಗಳನ್ನು ಖರೀದಿಸಿ ಮನೆಗೆ ತರಬಾರದು.


ಶುಕ್ರವಾರ: ಈ ದಿನ ದೇವಿ ಜಗದಂಬಾಗೆ ಸಮರ್ಪಿತವಾಗಿದೆ. ಹಾಗೂ ಅಷ್ಟೇ ಶುಕ್ರದೇವನಿಗೆ ಸಮರ್ಪಿತವಾಗಿದೆ. ಈ ದಿನ ಸುಗಂಧ ದ್ರವ್ಯ, ಶೃಂಗಾರಕ್ಕೆ ಸಂಬಂಧಿಸಿದ ವಸ್ತುಗಳು, ಅಲಂಕಾರಿಕ ವಸ್ತುಗಳು, ಕಾಸ್ಮೆಟಿಕ್ ಇತ್ಯಾದಿಗಳ ಖರೀದಿ ಶುಭಕರ ಎಂದು ಹೆಲಾಗುತದೆ. ಈ ದಿನ ಪೂಜಾ ಪಾಠ, ವಾಹನ ಇತ್ಯಾದಿಗಳ ಖರೀದಿಯಿಂದ ದೂರವಿರಿ. ಆಸ್ತಿ ಮಾರಾಟ ಹಾಗೂ ಖರೀದಿಯಿಂದಲೂ ಕೂಡ ದೂರವಿರಿ.


ಶನಿವಾರ: ಈ ದಿನ ಉಪ್ಪು, ಎಣ್ಣೆ, ಕರಿ ಎಳ್ಳು, ಲೋಹ, ಕಟ್ಟಿಗೆ, ಪೊರಕೆ, ಮಸಾಲೆ, ಚರ್ಮದಿಂದ ತಯಾರಿಸಿದ ಪರ್ಸ್. ಲೋಹದ ಅಲಮೇರಾ, ಚಾಕು, ಕತ್ತರಿಗಳಂತಹ ಹರಿತ ವಸ್ತು ಇತ್ಯಾದಿಗಳನ್ನು ಖರೀದಿಸಬಾರದು. ಶನಿವಾರದ ದಿನ ಈ ವಸ್ತುಗಳನ್ನು ಖರೀದಿಸಿದರೆ ರೋಗ, ಸಾಲ ಹಾಗೂ ದಾರಿದ್ರ್ಯದಲ್ಲಿ ಏರಿಕೆಯಗುತ್ತದೆ. ಆದರೆ, ಈ ದಿನ ತೋಟಗಾರಿಕೆಗೆ ಸಂಬಂಧಿದ ವಸ್ತುಗಳು ಅಂದರೆ ಹೂದಾನಿ ಇತ್ಯಾದಿಗಳ ಖರೀದಿ ಶುಭಕರ ಎಂದು ಹೇಳಲಾಗುತ್ತದೆ. 


ಭಾನುವಾರ: ಭಾನುವಾರ ಸೂರ್ಯದೇವನಿಗೆ ಸಂಬಂಧಿಸಿದ ವಾರ. ಈ ದಿನ ಸೂರ್ಯನ ಪ್ರಾರ್ಥನೆಯಿಂದ ಕಣ್ಣಿನ ದೃಷ್ಟಿ ಹಾಗೂ ಆತ್ಮಬಲ ಹೆಚ್ಚಾಗುತ್ತದೆ. ಭಾನುವಾರದ ದಿನ ದೃಷ್ಟಿಗೆ ಸಂಬಂದಿಸಿದ ವಸ್ತುಗಳ ಖರೀದಿ ಅಂದರೆ, ಕನ್ನಡಕ ತಿಯಾದಿಗಳ ಖರೀದಿ ಶುಭಕರ ಎಂದು ಹೇಳಲಾಗುತ್ತದೆ. ಈ ದಿನ ಕೆಂಪು ಬಣ್ಣದ ವಸ್ತುಗಳು , ಗೋಧಿ, ಪೀಠೋಪಕರಣ, ವಾಹನ ಇತ್ಯಾದಿಗಳ ಖರೀದಿ ಶುಭಕರ ಎಂದು ಹೇಳಲಾಗುತ್ತದೆ.