MAHA SHIVARATRI 2020: ಮಹಾ ಶಿವರಾತ್ರಿಯ ದಿನ ಶಿವ ಭಕ್ತರು ಬಮ್-ಬಮ್ ಭೋಲೆ ಹೇಳಿ ಜೈಕಾರ ಹಾಕುತ್ತಾರೆ. ಈ ದಿನ ಶಿವಾಲಯಕ್ಕೆ ಭಕ್ತಾದಿಗಳ ದಂಡೆ ಹರಿದು ಬರುತ್ತದೆ. ಈ ದಿನ ಭಕ್ತರು ಶಿವಲಿಂಗಕ್ಕೆ ಅಭಿಷೇಕ ಕೂಡ ನೆರವೇರಿಸುತ್ತಾರೆ.


COMMERCIAL BREAK
SCROLL TO CONTINUE READING

ಆದರೆ ಶಿವರಾತ್ರಿಯ ದಿನ ಶಿವನ ವಿಗ್ರಹದ ಬಳಿಕ ಶಿವಲಿಂಗದ ಪೂಜೆ ಏತಕ್ಕಾಗಿ ಮಾಡಲಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?


ಶಿವಲಿಂಗವನ್ನು ಮಹಾದೇವನ ರೂಪವೆಂದೆ ಪರಿಗಣಿಸಲಾಗುತ್ತದೆ. ಇದೆ ಕಾರಣದಿಂದ ಶಿವಲಿಂಗದ ಪೂಜೆ-ಅರ್ಚನೆ ನೆರವೇರಿಸಲಾಗುತ್ತದೆ. ಶಿವರಾತ್ರಿಯ ಪಾವನ ದಿನದಂದು ಶಿವಲಿಂಗಕ್ಕೆ ಅಭಿಷೇಕ ಮಾಡಲಾಗುತ್ತದೆ.


ಶಿವಲಿಂಗದ ಉತ್ಪತ್ತಿ
ಶಿವಲಿಂಗ ಭಗವಾನ್ ಶಿವನ ಪ್ರತೀಕವಾಗಿದೆ. ಶಿವನ ಅರ್ಥ ಕಲ್ಯಾಣ ಎಂದು ಹೇಳಲಾಗಿದ್ದರೆ, ಶಿವಲಿಂಗದ ಅರ್ಥ ಸೃಷ್ಟಿಕರ್ತ ಎಂದು ಹೇಳಲಾಗುತ್ತದೆ. ಶಿವರಾತ್ರಿಯ ದಿನ ಶಿವನನ್ನು ಸೃಷ್ಟಿಕರ್ತನ ರೂಪದಲ್ಲಿ ಪೂಜಿಸಲಾಗುತ್ತದೆ.


ಸಂಸ್ಕೃತದಲ್ಲಿ ಲಿಂಗದ ಅರ್ಥ ಪ್ರತೀಕ. ಹೀಗಾಗಿ ಮಹಾದೇವ ಶಿವನನ್ನು ಅನಂತಕಾಲದ ಪ್ರತೀಕ ಎಂದು ಹೇಳಲಾಗುತ್ತದೆ. ಮಾನ್ಯತೆಗಳ ಅನುಸಾರ ಲಿಂಗದ ಅರ್ಥ ವಿಶಾಲ ಬ್ರಹ್ಮಾಂಡ. ಹೀಗಾಗಿ ಲಿಂಗವನ್ನು ಬ್ರಹ್ಮಾಂಡದ ಪ್ರತೀಕವಾಗಿ ಪೂಜಿಸಲಾಗುತ್ತದೆ.


ಲಿಂಗ ಮಹಾಪುರಾಣ ಏನು ಹೇಳುತ್ತದೆ
ಲಿಂಗ ಮಹಾಪುರಾನದ ಪ್ರಕಾರ ಒಮ್ಮೆ ಬ್ರಹ್ಮ ಹಾಗೂ ವಿಷ್ಣುಗಳ ಮಧ್ಯೆ ಯಾರು ಶ್ರೇಷ್ಠ ಎಂಬ ಕುರಿತು ವಿವಾದ ಉಂಟಾಗುತ್ತದೆ. ಇಬ್ಬರು ಕೂಡ ತಮ್ಮ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಲು ಪರಸ್ಪರರನ್ನು ದೂಷಿಸಲು ಆರಂಭಿಸುತ್ತಾರೆ. ಈ ಇಬ್ಬರ ವಿವಾದ ತನ್ನ ಅಂತಿಮ ಘಟ್ಟಕ್ಕೆ ತಲುಪಿದಾಗ, ಅಗ್ನಿ ಜ್ವಾಲೆಯಿಂದ ಆವೃತ್ತಗೊಂಡ ಒಂದು ವಿಶಾಲ ಲಿಂಗ  ಉತ್ಪತ್ತಿಯಾಗಿ ಇಬ್ಬರ ಮಧ್ಯೆ ಸ್ಥಾಪಿತಗೊಳ್ಳುತ್ತದೆ.


ಆಗ ಈ ಇಬ್ಬರೂ ಕೂಡ ಲಿಂಗದ ರಹಸ್ಯದ ಕುರಿತು ಅರಿಯಲು ಮುಂದಾಗುತ್ತಾರೆ. ಈ ವೇಳೆ ಬ್ರಹ್ಮ ದೇವ ಲಿಂಗದ ಮೇಲ್ಭಾಗದ ಕಡೆಗೆ ಚಲಿಸಲು ಪ್ರಾರಂಭಿಸುತ್ತಾರೆ ಮತ್ತು ವಿಷ್ಣು ದೇವ ಲಿಂಗದ ಕೆಳಭಾಗದ ಕಡೆಗೆ ಚಲಿಸಲು ಪ್ರಾರಂಭಿಸುತ್ತಾರೆ. ಸಾವಿರಾರು ವರ್ಷಗಳ ಬಳಿಕವೂ ಕೂಡ ಈ ಉಭಯರು ಕುರಿತಾದ ರಹಸ್ಯ ಪತ್ತೆಹಚ್ಚುವಲ್ಲಿ ವಿಫಲರಾಗುತ್ತಾರೆ ಹಾಗೂ ತಮ್ಮ ತಮ್ಮ ಸೋಲನ್ನು ಒಪ್ಪಿಕೊಳ್ಳುತ್ತಾರೆ. ಅವರು ಪುನಃ ತಾವು ಲಿಂಗವನ್ನು ನೋಡಿದ ಸ್ಥಾನಕ್ಕೆ ಬಂದು ತಲುಪುತ್ತಾರೆ.


ಲಿಂಗದ ಬಳಿ ಈ ಉಭಯರು ತಲುಪಿದ ಬಳಿಕ ಅವರಿಗೆ ಲಿಂಗದ ಒಳಗಿನಿಂದ 'ಓಂ' ಸ್ವರ ಕೇಳಿಬರಲು ಆರಂಭಿಸುತ್ತದೆ. ಬಳಿಕ ಈ ಇಬ್ಬರು ಲಿಂಗವನ್ನು ಆರಾಧಿಸುತ್ತಾರೆ. ಇದರಿಂದ ಮಹಾದೇವ ಪ್ರಸನ್ನರಾಗಿ ಲಿಂಗದಿಂದ ಪ್ರಕಟಗೊಳ್ಳುತ್ತಾರೆ ಮತ್ತು ಬ್ರಹ್ಮ ಹಾಗೂ ವಿಷ್ಣು ದೇವರಿಗೆ ಸದ್ಭುದ್ಧಿಯ ವರದಾನ ನೀಡುತ್ತಾರೆ. ಅಂದಿನಿಂದ ಲಿಂಗ ರೂಪದಲ್ಲಿಯೇ ಶಿವನ ಆರಾಧನೆ ಮಾಡಲಾಗುತ್ತದೆ.


ಮಹಾಶಿವರಾತ್ರಿ 2020
ಈ ಬಾರಿ ಶುಕ್ರವಾರ ಅಂದರೆ ಫೆಬ್ರವರಿ 21, 2020ಕ್ಕೆ ಮಹಾಶಿವರಾತ್ರಿ ಆಚರಿಸಲಾಗುತ್ತಿದೆ. ಹಾಗೆ ನೋಡಿದರೆ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಮಾಸದಲ್ಲಿ ಮಹಾಶಿವರಾತ್ರಿ ಬರುತ್ತದೆ. ಆದರೆ, ಫಾಲ್ಗುಣಿ ಮಾಸದ ಕೃಷ್ಣ ಚತುರ್ದಶಿಯಂದು ಬರುವ ಶಿವರಾತ್ರಿಯನ್ನು ಮಹಾಶಿವರಾತ್ರಿ ರೂಪದಲ್ಲಿ ಪೂಜೆ ನೆರವೇರಿಸಲಾಗುತ್ತದೆ. ಇದೆ ದಿನದಂದು ಶಿವ-ಪಾರ್ವತಿಯ ವಿವಾಹ ಕೂಡ ನೆರವೇರಿಸಲಾಗಿತ್ತು. ಹೀಗಾಗಿ ಈ ಇಬ್ಬರನ್ನು ಶಿವರಾತ್ರಿಯ ದಿನ ಒಟ್ಟಿಗೆ ಪೂಜಿಸಲಾಗುತ್ತದೆ.