ಮೈಸೂರು ದಸರಾ: ಇಂದಿನಿಂದ `ಯುವ ಸಂಭ್ರಮ`
ದಸರಾ ಮಹೋತ್ಸವದ ಅಂಗವಾಗಿ ಇಂದು ಮಾನಸ ಗಂಗೋತ್ರಿಯ ರಂಗಮಂದಿರದಲ್ಲಿ ಯುವ ಸಂಭ್ರಮ ಆರಂಭವಾಗಲಿದೆ.
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಇಂದು ಮಾನಸ ಗಂಗೋತ್ರಿಯ ರಂಗಮಂದಿರದಲ್ಲಿ 'ಯುವ ಸಂಭ್ರಮ' ಆರಂಭವಾಗಲಿದೆ. ಇದುವರೆಗೆ 8 ದಿನ ನಡೆಯುತ್ತಿದ್ದ ಈ ಕಾರ್ಯಕ್ರಮವನ್ನು ಈ ವರ್ಷ 10 ದಿನಗಳವರೆಗೆ ವಿಸ್ತರಿಸಲಾಗಿದೆ.
ಮಾನಸ ಗಂಗೋತ್ರಿಯ ಬಯಲು ರಂಗ ಮಂದಿರದಲ್ಲಿ ಯುವ ಸಂಭ್ರಮವು ಸೆ. 17 ರಿಂದ ಸೆ.26 ವರೆಗೆ ಪ್ರತಿದಿನ ಸಂಜೆ 5.30 ರಿಂದ ರಾತ್ರಿ 10 ಗಂಟೆಯವರೆಗೆ ಜರುಗಲಿದೆ.
'ಯುವ ಸಂಭ್ರಮ' ಕಾರ್ಯಕ್ರಮವನ್ನು ನಟ ಗಣೇಶ್ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ.ರವಿ, ಮೇಯರ್ ಪುಷ್ಪಲತಾ ಜಗನ್ನಾಥ್ ಅವರು ಭಾಗವಹಿಸಲಿದ್ದಾರೆ.