ಕಲ್ಪನಾ ಚಾವ್ಲಾಗೆ ಕೇವಲ 40 ವರ್ಷ ವಯಸ್ಸು ಬಾಹ್ಯಾಕಾಶದಲ್ಲಿ ಇನ್ನು ಮಿನುಗಬೇಕಾಗಿದ್ದ ತಾರೆ, ಆದರೆ 15 ವರ್ಷಗಳ ಹಿಂದೆ ಬಾಹ್ಯಾಕಾಶದ ದುರಂತದಲ್ಲಿ ಅವಳು ತನ್ನ ಸಣ್ಣ ವಯಸ್ಸಿನಲ್ಲೇ ಗಗನಯಾನದ ಕೊನೆಯಾನವನ್ನು ಮುಗಿಸಿದ್ದಳು.  


COMMERCIAL BREAK
SCROLL TO CONTINUE READING

ಹೌದು ಫೆಬ್ರುವರಿ ,1, 2003ರಂದು ಏಳು ಗಗನಯಾತ್ರಿಗಳನ್ನು ಹೊತ್ತಿದ್ದ ಬಾಹ್ಯಾಕಾಶ ನೌಕೆಯು ಟೆಕ್ಸಾಸ್ ಮತ್ತು ಲೂಸಿಯಾನ ಪ್ರದೇಶದಲ್ಲಿ ಭೀಕರ ದುರಂತಕ್ಕೆ ಸಾಕ್ಷಿಯಾಗಿತ್ತು, ಇದರಲ್ಲಿ ಇದ್ದ ಏಳು ಯಾತ್ರಿಗಳಲ್ಲಿ ಮೊದಲ ಭಾರತೀಯ ಮಹಿಳಾ ಗಗನಯಾತ್ರಿಯಾದ  ಕಲ್ಪನಾ ಚಾವ್ಲಾ ಕೂಡ ಒಬ್ಬಳು.


ಭಾರತಕ್ಕೆ ಕಲ್ಪನಾ ಚಾವ್ಲಾಳ ಕೊನೆಯ ಸಂದೇಶ 



ಮಾರ್ಚ್ 17 ರಂದು ಹರಿಯಾಣದ ಕರ್ನಾಲ್ ನಲ್ಲಿ ಜನಿಸಿದ ಕಲ್ಪನಾ ಚಾವ್ಲಾ. 1988 ರಲ್ಲಿ ನಾಸಾ ಅಮೆಸ್ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ನಂತರ ಅಲ್ಲಿ ಅವರು ಲಂಬ/ಸಣ್ಣ ಟೇಕ್ಆಫ್ ಮತ್ತು ಲ್ಯಾಂಡಿಂಗ್ ಪರಿಕಲ್ಪನೆಗಳ ಕುರಿತು ಕಂಪ್ಯುಟೇಶನಲ್ ಫ್ಲೂಯಿಡ್ ಡೈನಾಮಿಕ್ಸ್ ಕುರಿತಾಗಿ ಸಂಶೋಧನೆ ಕೈಗೊಂಡರು. 1995ರಲ್ಲಿ ನಾಸಾ ಕಾರ್ಪೋರೇಶನ್ ಅಸ್ಟ್ರೋನಾಟ್ ನಲ್ಲಿ ವಿಜ್ನಾನಿಯಾಗಿ ಅವರು ಬಾಹ್ಯಾಕಾಶ ಮತ್ತು ಅದರ ಚಲನೆಯಲ್ಲಿನ ಸಮಸ್ಯೆಗಳನ್ನು ಗುರುತಿಸುವ ವಿಚಾರವಾಗಿ ಸಂಶೋಧನೆ ಕೈಗೊಂಡರು. ಇವರು ಮೊದಲು ಮಿಷನ್ ಸ್ಪೆಶಲಿಸ್ಟ್ ಮತ್ತು ಪ್ರಾಥಮಿಕ ರೋಬಾಟ್ ಆರ್ಮ್ ಆಪರೇಟರ್ ಆಗಿ 1997 ರಲ್ಲಿ ಮೊದಲ ಬಾರಿಗೆ ಸ್ಪೇಸ್ ಷಟಲ್ ಕೊಲಂಬಿಯಾದಲ್ಲಿ ಕಾರ್ಯಾರಂಭ ಮಾಡಿದರು. 


ಕಲ್ಪನಾ ಚಾವ್ಲಾ ತೀರಿಕೊಂಡಾಗ ಸಮಯದಲ್ಲಿ ಕೇವಲ 40 ವರ್ಷ ವಯಸ್ಸಿನವರಾಗಿದ್ದರು. ಉತಾಹ್ ರಾಷ್ಟ್ರೀಯ ಉದ್ಯಾನವನದಲ್ಲಿ ಅವಳ ಇಚ್ಛೆಯಂತೆ ಅಂತಿಮ ಸಂಸ್ಕಾರ ಮಾಡಲಾಯಿತು.ಅವಳ ಈ 15 ನೇ ವರ್ಷದ ಸ್ಮರಣೆಯ ಸಂಧರ್ಭದಲ್ಲಿ ಕಲ್ಪನಾ ಚಾವ್ಲಾ ರವರ ಸಾಧನೆಯನ್ನು ದೇಶವು ಹೆಮ್ಮೆಯಿಂದ ಸ್ಮರಿಸುತ್ತದೆ.