ನೆಲ್ಸನ್ ಮಂಡೇಲಾ 20ನೇ ಶತಮಾನದ ಕಂಡ ಮಹಾನ್ ನಾಯಕ. ದಕ್ಷಿಣ ಆಫ್ರಿಕಾದಲ್ಲಿನ ವರ್ಣಬೇದ ನೀತಿಯ  ವಿರುದ್ದ ಚಳುವಳಿಯನ್ನು ಕೈಗೊಂಡ ಇವರನ್ನು ಆಫ್ರಿಕಾದ ಗಾಂಧಿ ಎಂದೇ ಕರೆಯುತ್ತಾರೆ. ಇಂತಹ ಮಹಾನ್ ನಾಯಕನಿಗೆ ಈಗ ಶತಮಾನದ ಸಂಭ್ರಮ.


COMMERCIAL BREAK
SCROLL TO CONTINUE READING

ದಕ್ಷಿಣ ಆಫ್ರಿಕಾದ ಟೆಂಬೂ ರಾಯಲ್ ಕುಟುಂಬದಲ್ಲಿ ಜುಲೈ 18, 1918 ರಂದು ಜನಿಸಿದ  ಮಂಡೇಲಾ. ಮೂಲತಃ ಕಾನೂನು ಪದವಿಧರ. 1943 ರಲ್ಲಿ ಎ ಎನ್ ಸಿ ಪಕ್ಷವನ್ನು ಸೇರಿದ ಅವರು ಮುಂದೆ 1944ರಲ್ಲಿ  ಯೂತ್ ಲೀಗ್ ನ್ನು ಸ್ಥಾಪಿಸಿದರು.ಆಫ್ರಿಕಾದಲ್ಲಿ ನಾಷನಲ್ ಪಾರ್ಟಿ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಹೆಚ್ಚಾಗಿ ಕೇವಲ ಬಿಳಿಯರಿಗೆ ಅನೂಕೂಲತೆಯನ್ನು ನೀಡಿತು. ಇದರಿಂದ ಮಂಡೇಲಾ ಈ ವ್ಯವಸ್ಥೆಯನ್ನು ಕಿತ್ತೊಗೆಯಲು ಎಎನ್ಸಿ  ಪಕ್ಷದ ಮೂಲಕ ಶ್ರಮಿಸಿದರು. ಮುಂದೆ ಅವರು ಎಎನ್ಸಿಯ ಟ್ರಾನ್ಸಾವಲ್ ಶಾಖೆಯ ಅಧ್ಯಕ್ಷರಾಗಿ ಮುಂದೆ ಸರ್ಕಾರದ  ಕಾನೂನುಗಳನ್ನು ಉಲ್ಲಂಘಿಸಿದರು.ಇದರಿಂದಾಗಿ ಅವರು ಹಲವು ಬಾರಿ ಬಂಧನಕ್ಕೆ ಕೂಡ ಒಳಗಾಗಬೇಕಾಯಿತು.


ಮಾರ್ಕ್ಸವಾದಿ ವಿಚಾರಗಳಿಂದ ಪ್ರಭಾವಿತರಾದ ಮಂಡೇಲಾ ಮುಂದೆ ರಹಸ್ಯವಾಗಿ ನಿಷೇದಕ್ಕೆ ಒಳಗಾಗಿದ್ದ ದಕ್ಷಿಣ ಆಫ್ರಿಕಾದ ಕಮುನಿಸ್ಟ್ ಪಕ್ಷವನ್ನು ಸೇರಿದರು. ಪ್ರಾರಂಭದಲ್ಲಿ ಅವರು ಅಹಿಂಸಾ ಮಾರ್ಗಕ್ಕೆ ಕಟಿಬದ್ದರಾಗಿದ್ದರೂ ಕೂಡ ಮುಂದೆ ಕಮುನಿಸ್ಟ್ ಪಕ್ಷಕ್ಕೆ ಸೇರಿದ್ದರಿಂದಾಗಿ ಶಸ್ತ್ರಸಜ್ಜಿತ ಸಂಘಟನೆ ಉಮ್ಕಾಂತೋ ವೀ ಸಿಜ್ವೆ ಎನ್ನುವ ಸಂಘಟನೆಯನ್ನು 1961ರಲ್ಲಿ ಹುಟ್ಟುಹಾಕಿ ಸರ್ಕಾರದ ವಿರುದ್ದ ಚಳುವಳಿಯನ್ನು ತೀವ್ರಗೊಳಿಸಿದರು.


ಇದರ ಪರಿಣಾಮವಾಗಿ ಅವರನ್ನು ರಿವೊನಿಯಾ ಪ್ರಕರಣದಲ್ಲಿ ಬಂಧಿಸಲಾಯಿತು. ಸುಮಾರು ಮಂಡೇಲಾ 27 ವರ್ಷಗಳ ಕಾಲ ಜೈಲು ವಾಸವನ್ನು ಅನುಭವಿಸಬೇಕಾಯಿತು. ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಂಡೇಲಾ ಬಿಡುಗಡೆ ತೀವ್ರ ಒತ್ತಡ ಹೆಚ್ಚಿದ್ದರ ಪರಿಣಾಮವಾಗಿ ಅಧ್ಯಕ್ಷ  ಎಫ್ ಡಬ್ಲ್ಯೂ ಕ್ಲರ್ಕ್  1990 ರಲ್ಲಿ ಮಂಡೇಲಾರನ್ನು ಬಿಡುಗಡೆಗೊಳಿಸಿದರು. ಮುಂದೆ 1994 ರಲ್ಲಿನ ಸಾರ್ವತ್ರಿಕ ಚುನಾವಣೆಯಲ್ಲಿ ಭರ್ಜರಿ ವಿಜಯಸಾಧಿಸುವುದರ ಮೂಲಕ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಅವರು ಎರಡನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರೆಯಲು ನಿರಾಕರಿಸಿದರು. ಇಂತಹ ಮಂಡೇಲಾ ಮುಂದೆ ತಮ್ಮ 95 ವಯಸ್ಸಿನಲ್ಲಿ  ಡಿಸೆಂಬರ್ 5 2013 ರಂದು ನಿಧನರಾದರು.


ಇಡೀ ಜಗತ್ತಿನಾದ್ಯಂತ ಮಂಡೇಲಾರನ್ನು ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಹರಿಕಾರ ಎಂದು ಕರೆಯಲಾಗುತ್ತದೆ. ಇವರ ಕಾರ್ಯವನ್ನು ಮೆಚ್ಚಿ  ನೊಬೆಲ್ ಶಾಂತಿ ಪುರಸ್ಕಾರ ಸಹಿತ ಸುಮಾರು 250 ಪ್ರಶಸ್ತಿಗಳು ಇವರಿಗೆ ದೊರತಿವೆ.ಇವರ ಆತ್ಮಕತೆಲಾಂಗ್ ವಾಕ್ ಟು ದಿ ಫ್ರೀಡಂ ಮಂಡೇಲಾರ ಹೋರಾಟದ ಹೆಜ್ಜೆ ಗುರುತುಗಳನ್ನು ದಾಖಲಿಸಿದೆ.