ಹಾಸನ: ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು ಮದ್ಯಾಹ್ನ 1.30 ಕ್ಕೆ ಮೈಸೂರಿನಿಂದ ಹೆಲಿಕಾಪ್ಟರ್ ಮೂಲಕ ಶ್ರವಣಬೆಳಗೊಳಕ್ಕೆ ಪ್ರಧಾನಿ ಮೋದಿ ಆಗಮಿಸಲಿರುವ  ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಶ್ರವಣಬೆಳಗೊಳ ಮಠದಿಂದ ಸಕಲ ಸಿದ್ದತೆ ಕೈಗೊಳ್ಳಲಾಗಿದೆ. ಪ್ರಧಾನಿ ಮೋದಿ, ವಿಂದ್ಯಗಿರಿ ಬೆಟ್ಟದ ಹಿಂಭಾಗದ ಹೆಲಿಪ್ಯಾಡ್ ಗೆ ಆಗಮಿಸಲಿದ್ದಾರೆ. ವಿಂದ್ಯಗಿರಿ ಬೆಟ್ಟದಲ್ಲಿ ನೂತನವಾಗಿ ನಿರ್ಮಿಸಿರುವ ಮೆಟ್ಟಿಲು  ಉದ್ಘಾಟನೆ ಮಾಡಲಿರುವ ಮೋದಿ, ನಂತರ 200 ಬೆಡ್ ಗಳುಳ್ಳ ಬಾಹುಬಲಿ ಜನರಲ್ ಆಸ್ಪತ್ರೆಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ. 


ಶ್ರವಣಬೆಳಗೊಳದಲ್ಲಿ ಪ್ರಧಾನಿ ನರೇಂದ್ರಮೋದಿ ಕಾರ್ಯಕ್ರಮದ ವಿವರ ಇಂತಿದೆ...


  • ಮಧ್ಯಾಹ್ನ 1:35ಕ್ಕೆ ಚಾವುಂಡರಾಯ ವೇದಿಕೆಗೆ ಪ್ರಧಾನಿ ಆಗಮನ.

  • ಮಧ್ಯಾಹ್ನ 1:35 ರಿಂದ 1:38ರವರೆಗೆ ಎಲ್ಲಾ ಜೈನಮುನಿಗಳ ದರ್ಶನ.

  • ಮಧ್ಯಾಹ್ನ 1:39 ರಿಂದ 1:42ರವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಸ್ವಾಗತ ಭಾಷಣ.

  • ಮಧ್ಯಾಹ್ನ 1:42ಕ್ಕೆ ಪೀಠಾಧ್ಯಕ್ಷ ಚಾರುಕೀರ್ತಿ ಸ್ವಾಮೀಜಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಸನ್ಮಾನ.

  • ಮಧ್ಯಾಹ್ನ 1:44 ರಿಂದ ಸ್ವಾಮೀಜಿ ಆಶೀರ್ವಚನ.

  • ಮಧ್ಯಾಹ್ನ 1:47 ರಿಂದ 1:52ರವರೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭಾಷಣ.

  • ಮಧ್ಯಾಹ್ನ 1:57ಗಂಟೆಗೆ ನೂತನವಾಗಿ ನಿರ್ಮಾಣವಾಗಿರುವ ಮೆಟ್ಟಿಲು ಮತ್ತು ಬಾಹುಬಲಿ ಜನರಲ್ ಆಸ್ಪತ್ರೆ ಉದ್ಘಾಟನೆಯನ್ನು ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಧ್ವನಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

  • ಮಧ್ಯಾಹ್ನ 2:00 ರಿಂದ 2:20ರವರೆಗೆ ಪ್ರಧಾನಿ ಭಾಷಣ.

  • ಮಧ್ಯಾಹ್ನ 2:30ಕ್ಕೆ ವಿಂದ್ಯಗಿರಿ ಬೆಟ್ಟದ  ಹಿಂಭಾಗದ ಹೆಲಿಪ್ಯಾಡ್ ನಿಂದ ಹೆಲಿಕ್ಯಾಪ್ಟರ್ ಮೂಲಕ ಮೈಸೂರಿಗೆ ಪ್ರಧಾನಿ ಮೋದಿ ಪ್ರಯಾಣ.