ಪುಣೆ: ಚಳಿಗಾಲದಲ್ಲಿ ಸ್ವೆಟರ್ ಧರಿಸುವ ಗಣಪತಿ, 30 ವರ್ಷಗಳ ಹಳೆಯ ಸಂಪ್ರದಾಯ
ಕಳೆದ 30 ವರ್ಷಗಳಿಂದ ಶೀತ ವಾತಾವರಣದಲ್ಲಿ ಸರಸ್ಬಾಗ್ನ ಗಣೇಶ ಸ್ವೆಟರ್ ಧರಿಸುವುದು ಸಾಂಪ್ರದಾಯವಾಗಿದೆ.
ನವದೆಹಲಿ: ಪುಣೆನಲ್ಲಿ ಭಕ್ತರು ಸರಸ್ಬಾಗ್ ಗಣಪತಿಗೆ ಉಣ್ಣೆ ಟೋಪಿ ಮತ್ತು ಸ್ವೆಟರ್ ಧರಿಸುತ್ತಾರೆ. ಚಳಿಗಾಲದಲ್ಲಿ ಎಲ್ಲರೂ ಸ್ವೆಟರ್ ಧರಿಸುತ್ತಾರೆ. ಆದರೆ ಪುಣೆಯಲ್ಲಿ ಭಕ್ತರು ತಮ್ಮ ನೆಚ್ಚಿನ ಗಣಪತಿ ಬಪ್ಪನಿಗೂ ಸ್ವೆಟರ್ ಧರಿಸುತ್ತಾರೆ. ಚಳಿಗಾಲದಲ್ಲಿ ಸರಸ್ಬಾಗ್ನ ಗಣೇಶ ಸ್ವೆಟರ್ ಧರಿಸುವುದು ಕಳೆದ 30 ವರ್ಷಗಳಿಂದ ಸಂಪ್ರದಾಯವಾಗಿದೆ.
ಸರಸ್ಬಾಗ್ ಗಣಪತಿ ಸಂಸ್ಥಾನದ ಉದ್ಯೋಗಿ ಶಶಿಕಾಂತ್ ಧರ್ಮಾಧಿಕಾರಿ (ವಯಸ್ಸು 55), ಕಳೆದ 30 ವರ್ಷಗಳಿಂದ ಗಣೇಶ್ ಮೂರ್ತಿಗೆ ಸ್ವೆಟರ್ ಮತ್ತು ಉಣ್ಣೆ ಟೋಪಿ ಧರಿಸುತ್ತಾರೆ. ಸರ್ಕಾರಿ ಕೆಲಸದಿಂದ ನಿವೃತ್ತಿ ಹೊಂದಿರುವ ಶಶಿಕಾಂತ್ ಧರ್ಮಾಧಿಕಾರಿ ಸರಸ್ಬಾಗ್ ಗಣಪತಿ ದೇವಸ್ಥಾನದಲ್ಲಿ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂಪಾದ ವಾತಾವರಣದಲ್ಲಿ ಸರಸ್ಬಾಗ್ ಗಣಪತಿಗೆ ರಾತ್ರಿಯಲ್ಲಿ ಸ್ವೆಟರ್ ಮತ್ತು ಉಣ್ಣೆ ಟೋಪಿಯಲ್ಲಿ ಧರಿಸುತ್ತಾರೆ ಮತ್ತು ಬೆಳಿಗ್ಗೆ ಅದನ್ನು ತೆಗೆಯಲಾಗುತ್ತದೆ.
250 ವರ್ಷ ಪುರಾತನವಾದ ಪುಣೆಯ ಸರಸ್ಬಾಗ್ ಗಣಪತಿ ದೇವಸ್ಥಾನವನ್ನು ನಾನಾ ಸಾಹೇಬ್ ಪೇಶ್ವಾ ಸ್ಥಾಪಿಸಿದರು. ಈ ದೇವಸ್ಥಾನದಲ್ಲಿ ಸ್ವೆಟರ್ ಟೋಪಿ ಧರಿಸಿದ ಗಣಪತಿಯನ್ನು ನೋಡಲು ಬರುವ ಭಕ್ತರ ಸಂಖ್ಯೆ ಪ್ರತಿದಿನವೂ ಹೆಚ್ಚುತ್ತಿದೆ.
1979 ರಿಂದ ನಾನು ಸರಸ್ಬಾಗ್ ಗಣಪತಿಗೆ ಸ್ವೆಟರ್ ಧರಿಸುತ್ತೇನೆ. ಈ ಸಂಪ್ರದಾಯ ಮೊದಲೇ ಪ್ರಾರಂಭಿಸಲಾಗಿತ್ತು. ಏಳು ದಿನವೂ ಆ ವಾರಕ್ಕೆ ತಕ್ಕಂತ ಬಣ್ಣದ ಸ್ವೆಟರ್ ಧರಿಸಲಾಗುವುದು. ಪ್ರತಿ ವರ್ಷ ಶೀತದ ಸಮಯದಲ್ಲಿ ಅಂದರೆ ಎರಡು ತಿಂಗಳು ಗಣಪತಿಗೆ ಸ್ವೆಟರ್ ಧರಿಸಲಾಗುವುದು ಎಂದು ಭಕ್ತ ಶಶಿಕಾಂತ್ ಧರ್ಮಾಧಿಕಾರಿ ಹೇಳಿದ್ದಾರೆ.