ಶನಿದೇವನನ್ನು ಒಲಿಸಲು ಇಲ್ಲಿವೆ 7 ಮಹಾ ಉಪಾಯಗಳು
ಶನಿದೋಷದಿಂದ ಪಾರಾಗಲು ಮತ್ತು ಎಲ್ಲ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸಲು ಮಾಡಲಾಗುವ ಕೆಲ ಉಪಾಯಗಳನ್ನು ತಿಳಿದುಕೊಳ್ಳೋಣ ಬನ್ನಿ
ನವದೆಹಲಿ: ಇಂದಿನ ಕಾಲದಲ್ಲಿ ಯಾವುದೇ ಓರ್ವ ವ್ಯಕ್ತಿ ಗ್ರಹವೊಂದಕ್ಕೆ ಹೆದರುತ್ತಾನೆ ಎಂದರೆ ಅದು ಶನಿದೇವ (SHANIDEV). ಸೂರ್ಯ ಪುತ್ರ ಶನಿದೆವನ ಹೆಸರು ಸ್ಮರಣೆಗೆ ಬರುತ್ತಲೇ ಎಲ್ಲ ರೀತಿಯ ಅನಿಷ್ಟಗಳ ಶಂಕೆಯ ಕಾರಣ ಮನಸ್ಸು ಭಯಭೀತಗೊಳ್ಳುತ್ತದೆ. ಆದರೆ, ನಿಧಾನಗತಿಯಲ್ಲಿ ಸಾಗುವ ಶನಿದೇವ ಅತ್ಯಂತ ದಾರ್ಶನಿಕ ಹಾಗೂ ಆಧ್ಯಾತ್ಮಿಕ ಪ್ರವುತ್ತಿಯ ದೇವನಾಗಿದ್ದಾನೆ. ಶನಿದೇವ ವ್ಯಕ್ತಿಗಳನ್ನು ಅಗ್ನಿಪರೀಕ್ಷೆಗೆ ಒಳಪಡಿಸಿ ಶುದ್ಧ ಚಿನ್ನದ ಹಾಗೆ ಹೊಳೆಯುವಂತೆ ಮಾಡುತ್ತಾನೆ.
ಕುಂಡಲಿಯಲ್ಲಿ ಶನಿದೇವ ಶುಭ ಸ್ಥಾನದಲ್ಲಿದ್ದರೆ ಆ ವ್ಯಕ್ತಿ ಅಪಾರ ಸಂಪತ್ತು ಹಾಗೂ ಮಾನ-ಸನ್ಮಾನಕ್ಕೆ ಪಾತ್ರನಾಗುತ್ತಾನೆ. ಒಂದು ವೇಳೆ ಶನಿ ಅಶುಭ ಸ್ಥಾನದಲ್ಲಿದ್ದರೆ. ವ್ಯಕ್ತಿಗೆ ಭಾರಿ ನಷ್ಟ ಉಂಟಾಗುವ ಸಾಧ್ಯತೆ ಇರುತ್ತದೆ. ಶನಿ ಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಮನೆ ನಿರ್ಮಿಸುತ್ತಾನೆ ಮತ್ತು ಅಶುಭ ಸ್ಥಾನದಲ್ಲಿದ್ದರೆ ವ್ಯಕ್ತಿಯ ಮನೆಯನ್ನೂ ಸಹ ಮಾರಾಟ ಮಾಡಿಸುತ್ತಾನೆ ಎನ್ನಲಾಗುತ್ತದೆ. ಹಾಗಾದರೆ ಬನ್ನಿ ಶನಿದೇವನನ್ನು ಒಲಿಸಲು ಯಾವ ಉಪಾಯಗಳನ್ನು ಮಾಡಬೇಕು ಎಂಬುದನ್ನು ತಿಳಿಯೋಣ.
1. ತಂದೆ-ತಾಯಿಯನ್ನು ಗೌರವಿಸಿ
ಶನಿಯ ಅನುಗ್ರಹಕ್ಕೆ ಪಾತ್ರರಾಗಲು ಮೊದಲು ನೀವು ನಿಮ್ಮ ಹೆತ್ತವರನ್ನು ಗೌರವಿಸಬೇಕು. ಅವರ ಸೇವೆ ಮಾಡಬೇಕು. ಅವರು ದೂರದಲ್ಲಿದ್ದರೆ, ನೀವು ಅವರ ಭಾವಚಿತ್ರಕ್ಕೆ ನಮಸ್ಕರಿಸಿ. ಪ್ರತಿದಿನ ಕರೆ ಮಾಡಿ ಆಶೀರ್ವಾದ ಪಡೆಯಿರಿ. ಶನಿಯ ಈ ಪರಿಹಾರವು ನಿಮಗೆ ಅದ್ಭುತ ಪ್ರಯೋಜನಗಳನ್ನು ನೀಡಲಿದೆ.
2.ನೀಲಮಣಿ ಧರಿಸಿ
ಒಂದು ವೇಳೆ ನಿಮ್ಮ ಜೀವನದಲ್ಲಿ ಶನಿಯ ಸಾಡೆಸಾತಿ ನಡೆಯುತ್ತಿದ್ದು ಮತ್ತು ಶನಿ ನೀಡುತ್ತಿರುವ ತೊಂದರೆಗಳಿಂದ ನೀವು ಚಿಂತಿತರಾಗಿದ್ದಾರೆ ಜ್ಯೋತಿಷಿಯೊಬ್ಬರ ಸಲಹೆ ಪಡೆದು ನೀವು ನೀಲಮಣಿ ಅಥವಾ ನೀಲಿ ರತ್ನವನ್ನು ಧರಿಸಬೇಕು. ನೀವು ಅದನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ಶಮಿ ವೃಕ್ಷದ ಬೇರುಗಳನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಮತ್ತು ಅದನ್ನು ನಿಮ್ಮ ಭುಜಕ್ಕೆ ಕಟ್ಟಿಕೊಳ್ಳಿ.
3. ಶನಿದೋಷ ನಿವಾರಣೆಗೆ ನಿತ್ಯ ಈ ಮಂತ್ರ ಪಠಿಸಿ
ಶನಿದೋಷದಿಂದ ಮುಕ್ತರಾಗಲು ನಿತ್ಯ ಓಂ ಪ್ರಾಂ ಪ್ರಿಂ ಪ್ರೌಂ ಸಃ ಶನಿಶ್ವರಾಯ್ ನಮಃ ಮಂತ್ರವನ್ನು ಪಠಿಸಿ.
4. ಈ ವಸ್ತುಗಳಿಗೆ ಹೆಚ್ಚಿನ ಮಹತ್ವವಿದೆ
ಶನಿಯ ಕೃಪೆಗೆ ಪಾತ್ರರಾಗಲು ಲೋಹ, ಕಪ್ಪು ಎಳ್ಳು, ಉದ್ದಿನಬೆಳೆ, ಕಸ್ತೂರಿ, ಕಪ್ಪು ವಸ್ತ್ರ, ಕಪ್ಪು ಪಾದರಕ್ಷೆಗಳು, ಚಹಾಪುಡಿ ಇತ್ಯಾದಿಗಳ ದಾನ ಮಾಡಿ.
5.ಶನಿವಾರ ಈ ನಿಯಮ ಪಾಲಿಸಿ
ಆಳದ ಮರಕ್ಕೆ ಏಳುಬಾರಿ ಪ್ರದಕ್ಷಿಣೆಯನ್ನು ಹಾಕಿ ಕಚ್ಚಾ ಸೂತ್ರ ಸುತ್ತಿ. ಈ ವೇಳೆ ಶನಿ ಮಂತ್ರ ಪಠಿಸಿ. ಬಳಿಕ ದೀಪದಾನ ಮಾಡಿ. ಉಪ್ಪು-ಮಸಾಲೆ ರಹಿತ ಒಪ್ಪತ್ತು ಊಟ ಮಾಡಿ.
6. ಈ ಉಪಾಯದಿಂದ ಶನಿದೇವ ಪ್ರಸನ್ನನಾಗುತ್ತಾನೆ
ಕಪ್ಪು ನಾಯಿಗೆ ಎಣ್ಣೆ ಹಚ್ಚಿದ ರೊಟ್ಟಿ ಹಾಗೂ ಸಿಹಿ ತಿನಿಸಿ. ಒಂದು ವೇಳೆ ಇದು ಸಾಧ್ಯವಾಗದೆ ಹೋದಲ್ಲಿ ಕಪ್ಪು ನಾಯಿಗೆ ಬಿಸ್ಕಿಟ್ ತಿನ್ನಿಸಿ. ಕಪ್ಪು ಹಸುವಿನ ಸೇವೆ ಮಾಡಿ
7. ಶನಿ ದೋಷ ನಿವಾರಣೆಗೆ ಹನುಮನನ್ನು ಆರಾಧಿಸಿ
ಶನಿಗೆ ಸಂಬಂಧಿಸಿದ ದೋಷ ನಿವಾರಣೆಯಾಗಬೇಕಾದರೆ ಆಂಜನೇಯ ಸ್ವಾಮಿಯ ಆರಾಧನೆ ಮಾಡಿ. ಸಾಡೆಸಾತಿ ನಡೆಯುತ್ತಿದ್ದೆ. ಮಂಗಳವಾರ ಹಾಗೂ ಶನಿವಾರ ಸುಂದರಕಾಂಡ ಪಠಿಸಿ, ಹನುಮನಿಗೆ ಕೇಸರಿ ಬಣ್ಣದ ವಸ್ತ್ರ ಅರ್ಪಿಸಿ.