Shravana Month 2020: ವಿವಿಧ ಬಗೆಯ ಶಿವಲಿಂಗಗಳು ಮತ್ತು ಅವುಗಳ ಪೂಜೆಯಿಂದ ಪ್ರಾಪ್ತಿಯಾಗುವ ಫಲ
ದೇವಾದಿದೇವ ಶಿವ ಒಮ್ಮೆ ಒಲಿದರೆ ಕುಬೇರನ ಖಜಾನೆಯ ಮಳೆಯೇ ತನ್ನ ಭಕ್ತರ ಸುರಿಯುತ್ತಾನೆ. ಕ್ರೋಧಿತನಾದರೆ ತ್ರಿನೇತ್ರಧಾರಿ ಇಡೀ ಬ್ರಹ್ಮಾಂಡವನ್ನೇ ಸುಟ್ಟು ಬೂದಿ ಮಾಡುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ.
ನವದೆಹಲಿ: ದೇವಾಧಿದೇವ ಶಿವನ ನೆಚ್ಚಿನ ಮಾಸ ಶ್ರಾವಣ ಆರಂಭಗೊಂಡಿದೆ. ಶ್ರಾವಣ ಮಾಸದಲ್ಲಿ ತನ್ನ ಭಕ್ತರ ಮೇಲೆ ವಿಶೇಷ ಕೃಪೆ ತೋರುತ್ತಾನೆ ಎನ್ನಲಾಗುತ್ತದೆ. ಶಿವನಿಗೆ ತ್ರಿಪುರಾರಿ ಎಂದೂ ಕೂಡ ಕರೆಯಲಾಗುತ್ತದೆ ಹಾಗೂ ಆತ ಸಮಸ್ತ ಸಂಸಾರದ ನಿಯಂತ್ರಕನಾಗಿದ್ದಾನೆ. ಶಿವ, ಭಗವತಿ ಅನ್ನಪೂರ್ಣೆಯ ಪತಿಯಾಗಿದ್ದರೆ, ಶ್ರೀ ಗಣೇಶ ಹಾಗೂ ಶ್ರೀ ಕಾರ್ತಿಕೇಯ್ ರ ತಂದೆಯಾಗಿದ್ದಾನೆ. ಶಿವನ ಕುಟುಂಬ ಏಕೈಕ ಕುಟುಂಬವಾಗಿದ್ದು, ರಿದ್ಧಿ-ಸಿದ್ಧಿ ಸಮೇತ ಪೂಜಿಸಲ್ಪಡುತ್ತದೆ. ದೇವಾದಿದೇವ ಶಿವ ಒಮ್ಮೆ ಒಲಿದರೆ ಕುಬೇರನ ಖಜಾನೆಯ ಮಳೆಯೇ ತನ್ನ ಭಕ್ತರ ಸುರಿಯುತ್ತಾನೆ. ಕ್ರೋಧಿತನಾದರೆ ತ್ರಿನೇತ್ರಧಾರಿ ಇಡೀ ಬ್ರಹ್ಮಾಂಡವನ್ನೇ ಸುಟ್ಟು ಬೂದಿ ಮಾಡುತ್ತಾನೆ ಎಂದು ಶಾಸ್ತ್ರಗಳು ಹೇಳುತ್ತವೆ.
ಶಿವನ ಕೃಪಾಕಟಾಕ್ಷಕ್ಕೆ ಪಾತ್ರರಾಗಲು ಶಿವನ ಭಕ್ತಾದಿಗಳು ಶ್ರಾವಣ ಮಾಸದಲ್ಲಿ ಶಿವಲಿಂಗಕ್ಕೆ ವಿಶೇಷ ರೂಪದಲ್ಲಿ ಅಭಿಷೇಕ ಮಾಡಿ ಪೂಜೆ ಸಲ್ಲಿಸುತ್ತಾರೆ. ಶಿವಲಿಂಗವನ್ನು ಶಿವನ ನಿರಾಕಾರ ಸ್ವರೂಪ ಎಂದು ಪರಿಗಣಿಸಲಾಗುತ್ತದೆ. ದೇಶಾದ್ಯಂತ ಇರುವ ವಿಭಿನ್ನ ಶಿವ ಮಂದಿರಗಳಲ್ಲಿ ಶಿವನ ಪೂಜೆಗಾಗಿ ಶ್ರಾವಣ ಮಾಸದಲ್ಲಿ ಭಕ್ತಾದಿಗಳ ದಂಡೆ ಹರಿದು ಬರುತ್ತದೆ. ದ್ವಾದಶ ಜ್ಯೋತಿರ್ಲಿಂಗವೇ ಆಗಿರಲಿ ಅಥವಾ ಯಾವುದೇ ಒಂದು ನಗರ ವಿಶೇಷ ಶಿವಮಂದಿರವೇ ಆಗಲಿ, ಪ್ರತಿಯೊಂದು ಶಿವಲಿಂಗ ತನ್ನದೇ ಆದ ಐತಿಹ್ಯ ಹೊಂದಿದೆ. ಹಾಗಾದರೆ ಬನ್ನಿ ಇಂದು ಯಾವ ವಿಶೇಷ ರೀತಿಯ ಶಿವಲಿಂಗದ ಪೂಜೆಯಿಂದ ಯಾವ ಫಲ ಲಭಿಸುತ್ತದೆ ಎಂಬುದನ್ನು ಅರಿಯೋಣ.
ಪಾದರಸದಿಂದ ತಯಾರಾದ ಶಿವಲಿಂಗ (ಪಾರದ್ ಶಿವಲಿಂಗ) - ಶಿವ ಶಂಕರನ ಪೂಜೆಗಾಗಿ ಬಳಸಲಾಗುವ ಬಿಭಿನ್ನ ಪ್ರಕಾರದ ಶಿವಲಿಂಗಗಳಲ್ಲಿ ಎಲ್ಲಕ್ಕಿಂತ ಹೆಚ್ಚು ಬಳಸಲಾಗುವ ಶಿವಲಿಂಗ ಎಂದರೆ ಅದು ಪಾದರಸದಿಂದ ತಯಾರಿಸಲಾದ ಶಿವಲಿಂಗ. ಇದಕ್ಕೆ ಪಾರದ್ ಶಿವಲಿಂಗ ಎಂದೂ ಕೂಡ ಕರೆಯಲಾಗುತ್ತದೆ. ಈ ರೀತಿಯ ಶಿವಲಿಂಗದ ಪೂಜೆಯಿಂದ ದೇವಾಧಿದೇವ ಶಿವ ಶೀಘ್ರವೇ ಪ್ರಸನ್ನನಾಗಿ ತನ್ನ ಭಕ್ತಾದಿಗಳ ಇಷ್ಟಾರ್ಥ ಪೂರ್ಣಗೊಲಿಸುತ್ತಾನೆ ಎನ್ನಲಾಗುತ್ತದೆ. ಪಾರದ್ ಶಿವಲಿಂಗದ ಪೂಜೆ ಸರ್ವಕಾಮಪ್ರದಾಯಕ, ಮೋಕ್ಷಪ್ರದಾಯಕ ಹಾಗೂ ಪಾಪನಾಶಕ ಎನ್ನಲಾಗುತ್ತದೆ.
ಚಿನ್ನದ ಶಿವಲಿಂಗ- ಚಿನ್ನದಿಂದ ತಯಾರಿಸಲಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸುವುದರಿಂದ ಶಿವ ಸಾಧಕರ ಸಮೃದ್ಧಿಯಾಗುತ್ತದೆ ಎನ್ನಲಾಗುತ್ತದೆ.
ಬೆಳ್ಳಿಯ ಶಿವಲಿಂಗ- ಬೆಳ್ಳಿಯಿಂದ ತಯಾರಿಸಲಾಗಿರುವ ಶಿವಲಿಂಗದ ಪೂಜೆಯಿಂದ ಭಕ್ತಾದಿಗಳ ಧನ ಭಂಡಾರದಲ್ಲಿ ವೃದ್ಧಿಯಾಗುತ್ತದೆ ಎನ್ನಲಾಗಿದೆ.
ಹಿತ್ತಾಳೆಯ ಶಿವಲಿಂಗ- ಹಿತ್ತಾಳೆಯಿಂದ ತಯಾರಿಸಲಾಗಿರುವ ಶಿವಲಿಂಗಕ್ಕೆ ಅಭಿಷೇಕ ಮತ್ತು ಪೂಜೆ ಸಲ್ಲಿಸುವುದರಿಂದ ಶಿವ ಸಾಧಕರ ದಾರಿದ್ರ್ಯ ದೂರವಾಗುತ್ತದೆ ಎನ್ನಲಾಗಿದೆ.
ಲೋಹದ ಶಿವಲಿಂಗ- ಲೋಹದಿಂದ ತಯಾರಿಸಲಾದ ಶಿವಲಿಂಗವನ್ನು ಪೂಜಿಸಿದರೆ ಸಿದ್ಧಿ ಪ್ರಾಪ್ತಿಯಾಗುತ್ತದೆ.
ಮುತ್ತಿನ ಶಿವಲಿಂಗ- ಮುತ್ತಿನಿಂದ ತಯಾರಿಸಲಾಗಿರುವ ಶಿವಲಿಂಗವನ್ನು ಪೂಜಿಸಿದರೆ, ಪೂಜೆ ಸಲ್ಲಿಸುವವರಿಗೆ ಸ್ತ್ರೀಸುಖ ಪ್ರಾಪ್ತಿಯಾಗುತ್ತದೆ. ಈ ಸಾಧಕರ ಪತ್ನಿಯ ಸೌಭಾಗ್ಯದಲ್ಲಿ ವೃದ್ಧಿ ಕೂಡ ಆಗುತ್ತದೆ.
ಪುಷ್ಪ ಶಿವಲಿಂಗ- ಒಂದು ವೇಳೆ ನಿಮಗೆ ಪಿತ್ರಾರ್ಜಿತ ಸಂಪತ್ತಿ ಅಥವಾ ಜಮೀನು ಅಥವಾ ಮನೆಯ ಬಗ್ಗೆ ಆಸಕ್ತಿ ಇದ್ದರೆ ಶ್ರಾವಣ ಮಾಸದಲ್ಲಿ ಹೂವಿನಿಂದ ತಯಾರಿಸಲಾಗಿರುವ ಶಿವಲಿಂಗವನ್ನು ಅವಶ್ಯಕವಾಗಿ ಪೂಜಿಸಿ. ಪುಷ್ಪದಿಂದ ತಯಾರಿಸಲಾಗಿರುವ ಶಿವಲಿಂಗದ ಪೂಜೆಯಿಂದ ಭೂ-ಸಂಪತ್ತಿಯ ಆಶೀರ್ವಾದ ಲಭಿಸುತ್ತದೆ.
ಸ್ಫಟಿಕದ ಶಿವಲಿಂಗ- ಸ್ಫಟಿಕದಿಂದ ತಯಾರಿಸಲಾಗಿರುವ ಶಿವಲಿಂಡದ ಪೂಜೆಯಿಂದ ಶಿವ ಸಾಧಕರ ದೀರ್ಘಕಾಲದ ಮನೋಕಾಮನೆ ಪೂರ್ಣಗೊಳ್ಳುತ್ತದೆ.
ಕಲ್ಲು ಸಕ್ಕರೆಯಿಂದ ತಯಾರಿಸಲಾದ ಶಿವಲಿಂಗ- ಕೊರೊನಾ ಸಾಂಕ್ರಾಮಿಕ ಹರಡಿರುವ ಇಂದಿನ ಕಾಲದಲ್ಲಿ ಒಂದು ವೇಳೆ ಯಾರಾದರೂ ಕಾಯಿಲೆ ಅಥವಾ ಶರೀರ ಪೀಡೆಯಿಂದ ಬಳಲುತ್ತಿದ್ದರೆ, ಅವರು ಕಲ್ಲುಸಕ್ಕರೆಯಿಂದ ತಯಾರಿಸಲಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಬೇಕು. ಯಾವುದೇ ರೀತಿಯ ಕಾಯಿಲೆಯಿಂದ ಮುಕ್ತರಾಗಲು ಶ್ರಾವಣ ಮಾಸದಲ್ಲಿ ಕಲ್ಲುಸಕ್ಕರೆಯಿಂದ ತಯಾರಿಸಲಾಗಿರುವ ಶಿವಲಿಂಗಕ್ಕೆ ಪೂಜೆ ಸಲ್ಲಿಸಬೇಕು.
ಕರ್ಪೂರದ ಶಿವಲಿಂಗ- ಕರ್ಪೂರದಿಂದ ತಯಾರಿಸಲಾಗಿರುವ ಶಿವಲಿಂಗಕ್ಕೆ ವಿಧಿ-ವಿಧಾನಗಳಿಂದ ಪೂಜೆ ಸಲ್ಲಿಸಿ, ಅಭಿಷೇಕ ಮಾಡಿದರೆ ಶಿವ ಸಾಧಕಾರಿಗೆ ಭಕ್ತಿ ಹಾಗೂ ಮುಕ್ತಿಯ ಆಶೀರ್ವಾದ ಲಭಿಸುತ್ತದೆ.