ದೇಗುಲ ದರ್ಶನ ಸರಣಿ: ನಂಬಿದವರ ಆಸೆಗಳನ್ನು ಈಡೇರಿಸುವ ಧಾರವಾಡದ ನುಗ್ಗಿಕೇರಿ ಹನುಮಂತ..!
ಈ ದೇವರನ್ನು ನುಗ್ಗಿಕೇರಿ ಗ್ರಾಮದಲ್ಲಿನ ನುಗ್ಗಿಕೇರಿ ದೇಸಾಯಿ ಕುಟುಂಬದ ಹಿರಿಯ ಸದಸ್ಯರು ಪೂಜಿಸುತ್ತಿದ್ದಾರೆಂದು ನಂಬಲಾಗಿದೆ. ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಶ್ರೀ ವ್ಯಾಸತೀರ್ಥರು ಇಲ್ಲಿನ ಬಲಭೀಮ ದೇವರ ಪ್ರತಿಷ್ಟಾಪನೆಯನ್ನು ಮಾಡಿದ್ದಾರೆಂದು ನಂಬಲಾಗಿದೆ.
ಧಾರವಾಡ ಹತ್ತಿರವಿರುವ ನುಗ್ಗಿಕೇರಿ ಗ್ರಾಮದಲ್ಲಿನ ಹನುಮಾನ್ ದೇಗುಲಕ್ಕೆ ಶತಮಾನಗಳ ಇತಿಹಾಸವಿದೆ. ಪ್ರತಿ ಶನಿವಾರ ಮತ್ತು ಮಂಗಳವಾರದಂದು ಭಕ್ತರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.ಹಾಗಾಗಿ ಇಂದು ನಮ್ಮ ದೇಗುಲ ದರ್ಶನ ಸರಣಿಯಲ್ಲಿ ನುಗ್ಗಿಕೇರಿ ಹನುಮಾನ್ ದೇವಾಲಯಕ್ಕೆ ಸಂಬಂಧಿಸಿದ ಪುರಾಣ ಕಥೆಗಳ ಬಗ್ಗೆ ತಿಳಿಯೋಣ ಬನ್ನಿ.
ನುಗ್ಗಿಕೇರಿ ಹನುಮಾನ್ ದೇವಾಲಯದ ಇತಿಹಾಸ:
ಈ ದೇವರನ್ನು ನುಗ್ಗಿಕೇರಿ ಗ್ರಾಮದಲ್ಲಿನ ನುಗ್ಗಿಕೇರಿ ದೇಸಾಯಿ ಕುಟುಂಬದ ಹಿರಿಯ ಸದಸ್ಯರು ಪೂಜಿಸುತ್ತಿದ್ದಾರೆಂದು ನಂಬಲಾಗಿದೆ. ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿದ್ದ ಶ್ರೀ ವ್ಯಾಸತೀರ್ಥರು ಇಲ್ಲಿನ ಬಲಭೀಮ ದೇವರ ಪ್ರತಿಷ್ಟಾಪನೆಯನ್ನು ಮಾಡಿದ್ದಾರೆಂದು ನಂಬಲಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ
ದೇವಾಲಯಕ್ಕೆ ಸಂಬಂಧಿಸಿದ ಪುರಾಣ:
ಈ ದೇವಾಲಯವು ಶತಮಾನಗಳ ಪೌರಾಣಿಕ ಇತಿಹಾಸವನ್ನು ಹೊಂದಿದೆ. ಪ್ರಾಚೀನ ಕಾಲದಲ್ಲಿ, ಜನಮೇಜಯನ ತಂದೆ, ಪರೀಕ್ಷಿತ ಮಹಾರಾಜ, ಬೇಟೆಗೆಂದು ಕಾಡಿಗೆ ಹೋಗಿದ್ದಾಗ ತೀವ್ರ ಹಸಿವಿನಿಂದ ಬಳಲುತ್ತಾನೆ. ಅಲೆದಾಡುತ್ತ, ಧ್ಯಾನದಲ್ಲಿ ಮುಗ್ದನಾಗಿ ತಪಸ್ಸು ಮಾಡುತ್ತಿರುವ ಒಬ್ಬ ಮುನಿಯನ್ನು ಕಂಡು, ಅವನ ಬಳಿ ಹೋಗಿ ಮಾತಾಡಲು ಪ್ರಯತ್ನಿಸುತ್ತಾನೆ. ಆದರೆ ಧ್ಯಾನದಲ್ಲಿ ತಲ್ಲೀನನಾಗಿದ್ದ ಮುನಿ ಯಾವುದೇ ಪ್ರತಿಕ್ರಿಯೆ ನೀಡದೆ ಶಾಂತವಾಗಿರುತ್ತಾನೆ. ಇದರಿಂದ ಕೋಪಗೊಂಡ ರಾಜನು ಹತ್ತಿರದಲ್ಲಿದ್ದ ಹಾವನ್ನು ಮುನಿಯ ಮೇಲೆ ಬಿಡುತ್ತಾನೆ. ಸ್ವಲ್ಪ ಸಮಯದ ನಂತರ, ಮುನಿಗೆ ಅವಮಾನಿಸಿದ ಕೋಪದಲ್ಲಿ, ಆತ ರಾಜನಿಗೆ ಶಾಪ ನೀಡುತ್ತಾನೆ — ಹಾವಿನ ಕಚ್ಚುವಿಕೆಯ ಮೂಲಕವೇ ಅವನಿಗೆ ಮರಣ ಸಂಭವಿಸಲಿ ಎಂದು. ಶಾಪದ ಪರಿಣಾಮವಾಗಿ, ಪರೀಕ್ಷಿತ ಮಹಾರಾಜನಿಗೆ ಹಾವು ಕಚ್ಚಿ ಅವನು ಸಾವನ್ನಪ್ಪುತ್ತಾನೆ.ತಂದೆಯ ಮರಣದ ಆಕ್ರೋಶದಿಂದ, ಜನಮೇಜಯನು ಎಲ್ಲ ಹಾವುಗಳು ಯಜ್ಞಕೊಂಡದಲ್ಲಿ ಬಿದ್ದು ಸಾಯುವಂತೆ ಒಂದು ಮಹಾಯಜ್ಞವನ್ನು ಆರಂಭಿಸುತ್ತಾನೆ.ಹಾವುಗಳು ಯಜ್ಞದಲ್ಲಿ ಬಿದ್ದು ಸಾಯುತ್ತಿದ್ದಾಗ, ಒಂದು ಸಣ್ಣ ಹಾವು ದೇವರ ಸಹಾಯಕ್ಕಾಗಿ ಮೊರೆಯಿಡುತ್ತದೆ.ಯಜ್ಞವನ್ನು ನಿಲ್ಲಿಸಬೇಕೆಂದು ವಿನಂತಿಸುತ್ತದೆ. ತಕ್ಷಣ ದಿವ್ಯ ಶಬ್ದವೊಂದು ಜನಮೇಜಯನಿಗೆ ಎಚ್ಚರಿಕೆ ನೀಡುತ್ತದೆ .ಯಜ್ಞವನ್ನು ಮುಂದುವರಿಸಿದರೆ ಅವನಿಗೂ ತಂದೆಯಂತೆಯೇ ಅಂತ್ಯ ಉಂಟಾಗುತ್ತದೆ ಎಂದು. ಈ ಮಾತು ಕೇಳಿ, ಜನಮೇಜಯನು ಯಜ್ಞವನ್ನು ತಕ್ಷಣ ನಿಲ್ಲಿಸುತ್ತಾನೆ.ಆದರೂ, ಸರ್ಪದೋಷದಿಂದ ಮುಕ್ತಿಯಾಗಲು, ಅವನು ಹಲವು ದೇಗುಲಗಳನ್ನು ನಿರ್ಮಿಸುತ್ತಾನೆ. ಈ ಆಂಜನೇಯ ದೇವಾಲಯವು ಅವನು ನಿರ್ಮಿಸಿದ ಆ ದೇಗುಲಗಳಲ್ಲಿ ಒಂದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.