ದುಬೈ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಅಚ್ಚುಮೆಚ್ಚಿನ ಭಜನೆ "ವೈಷ್ಣವ ಜನ ತೋ" ವನ್ನು ಇನ್ಮುಂದೆ ಹೆಚ್ಚಿನ ಭಾಷೆಯಲ್ಲಿ ಕೇಳಬಹುದು. ಇದೀಗ ಸೌದಿ ಅರೇಬಿಯಾದ ಪ್ರಸಿದ್ಧ ಗಾಯಕ ಯಾಸಿರ್ ಹಬೀಬ್ ಅವರ ಧ್ವನಿಯಲ್ಲಿ ಈ ಪ್ರಸಿದ್ಧ ಗೀತೆ ಮೂಡಿಬಂದಿದೆ. ಅವರು ಬಾಪು ಅವರನ್ನು ತನ್ನದೇ ಆದ ಶೈಲಿಯಲ್ಲಿ ನೆನಪಿಸಿಕೊಂಡು ಈ ಗೀತೆ ಹಾಡಿದ್ದಾರೆ. ಮಹಾತ್ಮ ಗಾಂಧಿಯವರ 150 ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಶಾಂತಿ ಧೂತನನ್ನು ಇಡೀ ವಿಶ್ವವೇ ನೆನಪಿಸಿಕೊಂಡಿದೆ. ಸೌದಿ ಅರಬ್ ಮತ್ತು ಗಲ್ಫ್ ದೇಶಗಳು, ಈ ಸಮಯದಲ್ಲಿ, ಅಹಿಂಸೆಯ ಈ ಅತಿದೊಡ್ಡ ಪಾದ್ರಿಯನ್ನು ತಮ್ಮದೇ ಆದ ಶೈಲಿಯಲ್ಲಿ ನೆನಪಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಬ್ಯಾಂಕ್ ಉದ್ಯಮಿ ಮತ್ತು ಗಾಯಕರೂ ಆಗಿರುವ ಯಾಸಿರ್ ಹಬೀಬ್ ಅವರು ಗಾಂಧಿಯವರ ನೆಚ್ಚಿನ "ವೈಷ್ಣವ ಜನ ತೋ" ಅನ್ನ ಹಾಡುತ್ತಾ ಪ್ರೇಮ ಮತ್ತು ಸಾಮರಸ್ಯದ ಸಂದೇಶವನ್ನು ನೀಡಿದರು.  124 ದೇಶಗಳ ಕಲಾವಿದರಿಂದ ಮಹಾತ್ಮ ಗಾಂಧಿಗೆ ನಮನ



5ನೇ ಶತಮಾನದಲ್ಲಿ ಗುಜರಾತಿಯಲ್ಲಿ ಈ ಕವಿತೆಯನ್ನು ನರಸಿಂಹ ಮೆಹ್ತಾ ಎನ್ನುವವರು ರಚಿಸಿದರು. ಈ ಕೀರ್ತನವನ್ನು ಗುಜರಾತಿನಲ್ಲಿ ಮಾತ್ರ ಬರೆಯಲಾಗಿತ್ತು. ಮಹಾತ್ಮ ಗಾಂಧಿಯವರ ಈ ಪ್ರೀತಿಯ ಭಜನೆಯನ್ನು ಅವರ 150ನೇ ಜನ್ಮದಿನ ಅಂಗವಾಗಿ ವಿದೇಶಗಳಲ್ಲಿರುವ ಎಲ್ಲಾ ಭಾರತೀಯ ಹೈಕಮಿಷನ್ ಕಛೇರಿಗಳು ಸಂಗೀತ ತಂಡಗಳನ್ನು ರಚಿಸಿ ಗಾಂಧಿ ಜಯಂತಿಗೂ ಮುನ್ನ ಈ ಭಜನೆಯನ್ನು ರೆಕಾರ್ಡ್ ಮಾಡಿವೆ. 


ಅಲ್ಲದೆ ವಿಶ್ವದ ಅತಿ ಎತ್ತರದ ಕಟ್ಟಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬುರ್ಜ್ ಖಲೀಫಾ ಕಟ್ಟಡದ ಮೇಲೆ ಎಲ್ಇಡಿ ಪ್ರೊಜೆಕ್ಟರ್ ಮೂಲಕ ಗಾಂಧೀಜಿ ಅವರ ಜೀವನ ಸಂದೇಶವನ್ನು ಸಾರುವ ಮೂಲಕ ವಿಶೇಷ ರೀತಿಯ ಗೌರವ ಸಲ್ಲಿಸಿದೆ.