ಹೆಸರೇ ಸೂಚಿಸುವಂತೆ ನಮ್ಮ ಪಿತೃಗಳು ಎಂದರೆ ನಮ್ಮ ತಂದೆ-ತಾಯಿಗಳು(ಹಿರಿಯರು) ಕಾಲವಾದ ನಂತರದಲ್ಲಿ ಆತ್ಮಗಳು ಮೋಕ್ಷವನ್ನು ಪಡೆಯಲು ವರ್ಷದಲ್ಲಿ ಒಮ್ಮೆ ಪಿತೃಗಳಿಗೆ ಆಹಾರ ನೀಡುವ ಆಚರಣೆಯೇ ಪಿತೃ ಪಕ್ಷ. ಹೊರಹೋದ ಆತ್ಮಗಳು ಮೋಕ್ಷವನ್ನು ಸಾಧಿಸಲು ನೆರವಾಗಲು, ಅವರ ಸಂಬಂಧಿಕರು ಶ್ರಾದ್ಧ ಆಚರಣೆಯನ್ನು ಮಾಡಿ, ತರ್ಪಣ ಬಿಟ್ಟು, ಪಿಂಡ ಇಡುವ ಮೂಲಕ ಪ್ರತಿ ವರ್ಷ ಹಿರಿಯರ ಆತ್ಮಕ್ಕೆ ಶಾಂತಿ ಕೋರುತ್ತಾರೆ. 


COMMERCIAL BREAK
SCROLL TO CONTINUE READING

ಕೆಲವರು ತಮ್ಮ ಪಿತೃಗಳಿಗೆ ಆಹಾರ ನೀಡುವ ಕಾರ್ಯವನ್ನು ಅವರು ಮರಣ ಹೊಂದಿದ ದಿನ, ನಕ್ಷತ್ರಗಳನ್ನು ಗುರುತಿ ಹಾಕಿ ಅದೇ ತಿಥಿ, ನಕ್ಷತ್ರದ ದಿನದಂದು ಪ್ರತಿ ವರ್ಷ ಆಚರಿಸುತ್ತಾರೆ. ಮತ್ತೆ ಕೆಲವರು ಪಿತೃ ಪಕ್ಷದ ಸಮಯದಲ್ಲಿ ಆಚರಿಸುತ್ತಾರೆ.


ಪಿತೃ ಪಕ್ಷವು ಸಾಮಾನ್ಯವಾಗಿ ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಿನಲ್ಲಿ ಬರುತ್ತದೆ. ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 5 ರಂದು ಪ್ರಾರಂಭವಾಗಿದ್ದು ಮತ್ತು ಸೆಪ್ಟೆಂಬರ್ 19 ರಂದು ಮಹಾಲಯ ಅಮಾವಾಸ್ಯೆಯೊಂದಿಗೆ ಮುಕ್ತಾಯಗೊಳ್ಳಲಿದೆ.


ಹಲವಾರು ಜನರು ಗಯಾದಲ್ಲಿ ಪಿಂಡ ದಾನ ಮಾಡುತ್ತಾರೆ, ಇದು ಶ್ರಾದ್ಧ ಆಚರಣೆಗಳನ್ನು ನಿರ್ವಹಿಸಲು ಪವಿತ್ರವಾದ ಸ್ಥಳಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ.


ಪಿಂಡ ದಾನ ಒಂದು ವಾತಾವರಣದ ಸೃಷ್ಟಿಗೆ ಸಹಾಯ ಮಾಡುತ್ತದೆ. ಅದು ನಮ್ಮ ಪಿತೃ ಆತ್ಮಗಳು ಮೋಕ್ಷವನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಭೌತಿಕ ಪ್ರಪಂಚದಿಂದ ತಮ್ಮನ್ನು ಮುಕ್ತಗೊಳಿಸುತ್ತದೆ. ಅವರು ಜನನ, ಮರಣ ಮತ್ತು ಪುನರ್ಜನ್ಮದ ಚಕ್ರದಿಂದ ಬಿಡುಗಡೆಗೊಳ್ಳುವವರೆಗೂ, ಅವರು ರೋಮಾಂಚನದಿಂದ ಸಂಚರಿಸುತ್ತಾರೆ ಮತ್ತು ಸಂಪೂರ್ಣ ಹತಾಶೆಯ ಸ್ಥಿತಿಯಲ್ಲಿ ಅಸ್ತಿತ್ವದಲ್ಲಿರುತ್ತಾರೆ.


ಪಿಂಡಗಳು ಅಕ್ಕಿ ಹಿಟ್ಟು, ಗೋಧಿ, ಎಳ್ಳಿನ ಬೀಜಗಳು, ಜೇನುತುಪ್ಪ ಮತ್ತು ಹಾಲಿನೊಂದಿಗೆ ಮಾಡಿದ ಚೆಂಡುಗಳಾಗಿವೆ. ಶ್ರಾದ್ಧದ ಸಮಯದಲ್ಲಿ ಏಳು ಪಿಂಡಗಳನ್ನು ತಯಾರಿಸಲಾಗುತ್ತದೆ ಮತ್ತು ಇದನ್ನು ನಿರ್ಗಮಿಸಿದ ಆತ್ಮಗಳಿಗೆ ನೀಡಲಾಗುತ್ತದೆ.


ಗಯಾದಲ್ಲಿ, ಫಾಲ್ಗು, ಅಕ್ಷಯ್ ವಾಟ್ ಮತ್ತು ಕೆಲವು ಇತರ ಪವಿತ್ರ ಸ್ಥಳಗಳ ಬಳಿ ಭಗವಾನ್ ವಿಷ್ಣುವಿನ ಹೆಜ್ಜೆಗುರುತುಗಳಿಗೆ ಪಿಂಡಗಳನ್ನು ನೀಡಲಾಗುತ್ತದೆ. ಪಿಂಡ ದಾನ ಮಾಡಲು ಬಯಸಿದರೆ ಸೂಕ್ತ ದಿನಾಂಕವನ್ನು ಆಯ್ಕೆ ಮಾಡಲು ಕುಲ ಪುರೋಹಿತರನ್ನು ಭೇಟಿ ಮಾಡಿ ತಿಳಿದುಕೊಳ್ಳಿ.


ಸ್ನಾನ ಮಾಡಿದ ನಂತರ ಸಂಕಲ್ಪ(ನಿರ್ಣಯ) ತೊಟ್ಟು ಪಿಂಡ ಹಾಕಿ ಅಂತಿಮವಾಗಿ ತರ್ಪಣ ಬಿಟ್ಟ ನಂತರ ಶ್ರಾದ್ಧ ಕಾರ್ಯವು ಪೂರ್ಣಗೊಳ್ಳುತ್ತದೆ. ಪಿತೃ ಪಕ್ಷವನ್ನು ಈ ಹದಿನೈದು ದಿನಗಳಲ್ಲಿ ಅಂದರೆ ಬಾಧ್ರಪದ ಮಾಸದ ಹುಣ್ಣಿಮೆಯ ನಂತರದಿಂದ ಮಹಾಲಯ ಅಮಾವಾಸ್ಯೆಯ ವರೆಗೂ ಯಾವ ದಿನವಾದರೂ ಮಾಡಬಹುದು.