ಕಾನ್ಷಿರಾಮ್ ದೇಶದ ಸ್ವಾತಂತ್ರೋತ್ತರ ಭಾರತದ ಇತಿಹಾಸದಲ್ಲಿ ಅಚ್ಚಳಿಯದ ಹೆಸರು.ಇವರು ತಮ್ಮ ಜೀವ ಮಾನವಿಡಿ ದಲಿತರು ಹಿಂದುಳಿದ ಸಮುದಾಯದ ಏಳಿಗೆಗಾಗಿ ಶ್ರಮಿಸಿದವರು.ಪ್ರಮುಖವಾಗಿ ದಲಿತರಿಗೆ ಚುನಾವಣಾ ರಾಜಕಾರಣದ ವ್ಯಾಕರಣವನ್ನು ಪರಿಚಯಿಸಿದವರು. ಇಂದು ಇಂತಹ ಮಹಾನ್ ನಾಯಕ್  ಜನಿಸಿದ ದಿನ.


COMMERCIAL BREAK
SCROLL TO CONTINUE READING

ಕಾನ್ಶಿರಾಂ ರವರು ಮಾರ್ಚ್ 15 1934 ರಲ್ಲಿ ಪಂಜಾಬ್ ನ ರೂಪನಗರ್ ಜಿಲ್ಲೆಯ ಖವಾಸ್ ಪುರ ಗ್ರಾಮದಲ್ಲಿ ದಲಿತ ಸಮುದಾಯದಲ್ಲಿ ಜನಿಸಿದರು. ಮೂಲತ ವಿಜ್ಞಾನಿಯಾಗಿದ್ದ ಇವರು ಅಂಬೇಡ್ಕರ್ ರವರ ವಿಚಾರದಾರೆಗೆ ಮನಸೋತು 1971ರಲ್ಲಿ  ಬ್ಯಾಮ್ಸಪ್ ಸಂಘಟನೆಯನ್ನು ಶೋಷಿತ ಸಮುದಾಯ ನೌಕರರಿಗಾಗಿ ಹುಟ್ಟುಹಾಕಿದರು.ತದನಂತರ 1984 ರಲ್ಲಿ  ಬಹುಜನ್ ಸಮುದಾಯ ಪಾರ್ಟಿಯನ್ನು ಹುಟ್ಟುಹಾಕಿ ಮಾಯಾವತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿಸುವಲ್ಲಿ ಗಮನಾರ್ಹ ಪಾತ್ರವನ್ನು ವಹಿಸಿದರು. ಆ ಮೂಲಕ ದಲಿತರೋಬ್ಬರನ್ನು ದೇಶದ ಅತಿ ದೊಡ್ಡ ರಾಜ್ಯವೊಂದರ ಅಧಿಕಾರದ ಚುಕ್ಕಾನೆ ಹಿಡಿಯುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದರು. 


ಕಾನ್ಷಿರಾಮ್ ರವರು ತಮ್ಮ 72 ವಯಸ್ಸಿನಲ್ಲಿ ಹೃದಯಾಘಾತದಿಂದ 2006 ರಲ್ಲಿ ನಿಧನರಾದರು.