ಇತ್ತೀಚಿನ ದಿನಗಳಲ್ಲಿ ಹನುಮಂತನ ಬಗ್ಗೆ ವಿವಾದಾತ್ಮಕ ಹೇಳಿಕೆಗಳು ಕೇಳಿಬರುತ್ತಿವೆ. ಯಾರೋ ಅವನನ್ನು ದಲಿತ ಎಂದು ಕರೆದರೆ, ಇನ್ಯಾರೋ ಮುಸ್ಲಿಂ ಎಂದು, ಮತ್ಯಾರೋ ಮತ್ಯಾವುದೋ ಜಾತಿಯಾವ ಎಂದು ಕರೆಯುತ್ತಿದ್ದಾರೆ. ಈ ವಿಷಯ ದೇಶಾದ್ಯಂತ ಬಹಳಷ್ಟು ಚರ್ಚೆಗೆ ಗ್ರಾಸವಾಗಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ ಹನುಮಾನನ್ನು ಹಿಂದೂಗಳ ಪ್ರಮುಖ ದೇವರುಗಳಲ್ಲಿ ಒಬ್ಬನೆಂದು ಪೂಜಿಸಲಾಗುತ್ತದೆ. ಆದರೆ ಹನುಮನನ್ನು ಪೂಜಿಸದ ಒಂದು ಗ್ರಾಮ ನಮ್ಮ ಭಾರತದಲ್ಲೇ ಇದೇ ಎಂಬುದು ಕೆಲವೇ ಕೆಲವು ಮಂದಿಗಷ್ಟೇ ಗೊತ್ತು. ಇಲ್ಲಿನ ನಿವಾಸಿಗಳು ಹನುಮಾನ್ ಮಾಡಿದ ಒಂದು ಕೆಲಸದಿಂದಾಗಿ ಕೋಪಗೊಂಡಿರುವ ಕಾರಣ ಅವರು ಹನುಮನನ್ನು ಪೂಜಿಸುವುದಿಲ್ಲವಂತೆ. ಆ ಸ್ಥಳ ಉತ್ತರಖಂಡದ ದ್ರೋಣಿಗಿರಿ ಗ್ರಾಮ.


ಉತ್ತರ ಖಂಡದ ಚಮೋಲಿ ಜಿಲ್ಲೆಯ ಜೋಶಿಮತ್ ವಿಕಾಸ್ ಬ್ಲಾಕ್ನಲ್ಲಿ ಜೋಶಿಮತ್ ನೀತಿ ಮಾರ್ಗದಲ್ಲಿ ದ್ರೋಣಗಿರಿ ಎಂಬ ಗ್ರಾಮವಿದೆ. ಈ ಹಳ್ಳಿ ಸುಮಾರು 14000 ಅಡಿ ಎತ್ತರದಲ್ಲಿದೆ. ಇಲ್ಲಿರುವ ಜನರು ಸಂಜೀವನಿಗಾಗಿ ಹನುಮಾನ್ ಪರ್ವತವನ್ನು ಕೊಂಡೊಯ್ದಿದ್ದಾರೆ ಎಂದು ನಂಬುತ್ತಾರೆ. ದ್ರೋಣಗಿರಿ ಜನರು ಪರ್ವತವನ್ನು ಪೂಜಿಸುವುದರಿಂದ, ಪರ್ವತವನ್ನು ಕೊಂಡೊಯ್ದ ಕಾರಣ ಅವರು ಹನುಮಾನ ವಿರುದ್ಧ ಕೋಪಗೊಂಡಿದ್ದಾರೆ. ಹಾಗಾಗಿ ಇಲ್ಲಿನ ಜನ ಇಂದಿಗೂ ಸಹ ಹನುಮಂತನನ್ನು ಪೂಜಿಸುವುದಿಲ್ಲ. ಈ ಹಳ್ಳಿಯಲ್ಲಿ ಕೆಂಪು ಧ್ವಜವನ್ನೂ ಸಹ ನಿಷೇಧಿಸಲಾಗಿದೆ.


File Image


ದ್ರೋಣಗಿರಿ ಗ್ರಾಮದ ನಿವಾಸಿಗಳ ಪ್ರಕಾರ, ಹನುಮಾನ್ ಗ್ರಾಮಕ್ಕೆ ಬಂದಾಗ ಅವರು ಗೊಂದಲಕ್ಕೊಳಗಾದರು. ಆ ಪರ್ವತವು  ಸಂಜೀವಿನಿ ಪರ್ವತ ಆಗಿರಬಹುದು ಎಂದು ಅವರು ಭಾವಿಸಿರಲಿಲ್ಲ. ನಂತರ ಗ್ರಾಮದಲ್ಲಿ ವೃದ್ಧ ಮಹಿಳೆಯೊಬ್ಬರು ಕಾಣಿಸಿಕೊಂಡರು. ಸಂಜೀವನಿ ಎಲ್ಲಿದೆ ಎಂದು ಹನುಮಾನ್ ಕೇಳಿದರು. ವೃದ್ಧೆಯು ದ್ರೋಣಗಿರಿ ಪರ್ವತದ ಕಡೆಗೆ ಕೈ ತೋರಿಸಿದರು. ಹನುಮಾನ್ ಪರ್ವತಕ್ಕೆ ಹಾರಿಹೋದರು, ಆದರೆ ಅಲ್ಲಿ ಸಂಜೀವಿನಿ ಎಲ್ಲಿದೆ ಎಂದು ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ.


ನಂತರ ಅವರು ಮತ್ತೆ ಗ್ರಾಮಕ್ಕೆ ಬಂದು ವೃದ್ಧೆಯನ್ನು ಸಂಜೀವಿನಿ ಯಾವ ಸ್ಥಳದಲ್ಲಿದೆ ಎಂದು ಕೇಳಿದರು. ವೃದ್ಧೆಯು ಪರ್ವತವನ್ನು ತೋರಿಸಿದರು. ಹನುಮಾನ್ ಜಿ ಆ ಪರ್ವತದ ಬಹುಭಾಗವನ್ನು ಹೊತ್ತೊಯ್ದನು. ಇದರಿಂದಾಗಿ ಹನುಮಂತನಿಗೆ ಸಹಾಯ ಮಾಡಿದ ವೃದ್ಧೆಯನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಯಿತು ಎಂದು ವಿವರಿಸಲಾಗಿದೆ. ಇಂದಿಗೂ ಸಹ ಈ ಗ್ರಾಮದ ಆರಾಧ್ಯ ದೈವವಾದ ಪರ್ವತದ ವಿಶೇಷ ಪೂಜೆಯಲ್ಲಿ ಜನರು ಮಹಿಳೆಯರ ಕೈಯಿಂದ ಏನನ್ನೂ ಸೇವಿಸುವುದಿಲ್ಲ. ಅಲ್ಲದೆ ಈ ಪೂಜೆಯಲ್ಲಿ ಮಹಿಳೆಯರು ಬಹಿರಂಗವಾಗಿ ಭಾಗವಹಿಸುವುದಿಲ್ಲ.