ನವದೆಹಲಿ: ವಾಸ್ತು ಶಾಸ್ತ್ರವು ನಮ್ಮ ಜೀವನದೊಂದಿಗೆ ಘನಿಷ್ಟ ಸಂಬಂಧ ಹೊಂದಿದೆ. ಮನೆಯ ನಿರ್ಮಾಣವು ವಾಸ್ತು ನಿಯಮಗಳ ಪ್ರಕಾರ ಇಲ್ಲದಿದ್ದರೆ, ಜೀವನದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ.


COMMERCIAL BREAK
SCROLL TO CONTINUE READING

ವಾಸ್ತುಶಾಸ್ತ್ರದಲ್ಲಿ ದಿಕ್ಕುಗಳಿಗೆ ತನ್ನದೇ ಆದ ಮಹತ್ವವಿದೆ. ಸರಿಯಾದ ದಿಕ್ಕಿನಲ್ಲಿ ಒಂದು ವೇಳೆ ಯಾವುದೇ ಕೆಲಸವನ್ನು ಮಾಡದೆ ಹೋದಲ್ಲಿ ಕಾರ್ಯಸಿದ್ಧಿ ಪ್ರಾಪ್ತಿಯಾಗುವುದಿಲ್ಲ ಎನ್ನಲಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಇಂತಹ ಹಲವು ಕೆಲಸ ಕಾರ್ಯಗಳಿವೆ. ಈ ಕಾರ್ಯಗಳಿಗೆ ಸರಿಯಾದ ದಿಕ್ಕು ತಿಳಿದುಕೊಳ್ಳುವುದು ಆವಶ್ಯಕ. ಸರಿಯಾದ ದಿಕ್ಕನ್ನು ತಿಳಿದುಕೊಳ್ಳಲು ಅಗತ್ಯವಿರುವ ಕೆಲವು ದೈನಂದಿನ ಕಾರ್ಯಗಳ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.


ಪೂಜಾ ಸ್ಥಳ: ಪೂಜೆ ಮಾಡುವಾಗ ನಿಮ್ಮ ಮುಖ ಈಶಾನ್ಯ ಅಥವಾ ವಾಯುವ್ಯ ದಿಕ್ಕನ್ನು ಎದುರಿಸುವಂತಿರಬೇಕು. ಮನೆಯಲ್ಲಿ ದೇವರ ಕೋಣೆ ಎಂದಿಗೂ ಕೂಡ ಈಶಾನ್ಯ ದಿಕ್ಕಿನಲ್ಲಿರಬೇಕು. ಇದನ್ನು ಮನೆಯ ಈಶಾನ್ಯ ದಿಕ್ಕು ಎಂದೂ ಕೂಡ ಕರೆಯಲಾಗುತ್ತದೆ.


ಊಟ ಮಾಡುವ ವೇಳೆ: ಊಟಮಾಡುವ ದಿಕ್ಕಿನ ಕುರಿತು ಕೂಡ ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದೆ. ಒತ್ತಮಾಡುವ ವೇಳೆ ಊಟದ ತಟ್ಟೆಯನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸಬೇಕು. ಊಟ ಮಾಡುವ ವೇಳೆ ನಿಮ್ಮ ಮುಖ ಪೂರ್ವ ದಿಕ್ಕಿನೆಡೆ ಇರಬೇಕು.


ಮಲಗುವ ವೇಳೆಗೆ: ಮಲಗುವ ಕೋಣೆಯಲ್ಲಿ, ನಿಮ್ಮ ಮಲಗುವ ಹಾಸಿಗೆ ಅಥವಾ ಮಂಚ ದಕ್ಷಿಣ ಮತ್ತು ಉತ್ತರ ದಿಕ್ಕಿನಲ್ಲಿ ಇಡಬೇಕು. ನಿಮ್ಮ ಮುಖವನ್ನು ದಕ್ಷಿಣದ ಕಡೆಗೆ ಮತ್ತು ಮಲಗುವ ಸಮಯದಲ್ಲಿ ನಿಮ್ಮ ಪಾದಗಳು ಉತ್ತರದ ಕಡೆಗೆ ಇರಬೇಕಾದ ರೀತಿಯಲ್ಲಿ ನಿಮ್ಮ ಹಾಸಿಗೆಯನ್ನು ಇರಿಸಿ.


ನೀರಿನ ಸ್ಥಳ: ವಾಸ್ತು ಶಾಸ್ತ್ರದ ಪ್ರಕಾರ, ತಪ್ಪಾದ ದಿಕ್ಕಿನಲ್ಲಿ ನೀರಿನ ಹರಿವಿನಿಂದಾಗಿ, ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಮನೆಯ ಈಶಾನ್ಯ ದಿಕ್ಕಿನಲ್ಲಿ ನೀರಿನ ಸ್ಥಳವನ್ನು ಮಾಡಿ, ಮತ್ತು ಆ ಸ್ಥಳದಿಂದ ಇಡೀ ಮನೆಗೆ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಿ.