ನವದೆಹಲಿ: ಜೀವನದಲ್ಲಿ ಹಣವೇ ಮುಖ್ಯವಲ್ಲ. ಆದರೆ, ಬಹಳಷ್ಟು ಸಂಗತಿಗಳಿಗೆ ಹಣದ ಅವಶ್ಯಕತೆ ಬೀಳುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿಯೂ ಕೂಡ ಹಣದ ಕೊರತೆ ಎದುರಾಗಿದ್ದರೆ ಮತ್ತು ದೇವಿ ಲಕ್ಷ್ಮಿ(Goddess Lakshmi) ಕೋಪಿಸಿಕೊಂಡಿದ್ದರೆ, ಧನಪ್ರಾಪ್ತಿಗಾಗಿ ಈ ಉಪಾಯಗಳನ್ನು ಅನುಸರಿಸಿ ಮತ್ತೆ ದೇವಿ ಲಕ್ಷಿಯನ್ನು ಒಲಿಸಿಕೊಳ್ಳಿ.


COMMERCIAL BREAK
SCROLL TO CONTINUE READING

ಇದನ್ನು ಓದಿ- ರಾಹು-ಕೇತುಗಳ ಬಳಿಕ ಇದೀಗ ತನ್ನ ನಡೆ ಬದಲಾಯಿಸಲು ಮುಂದಾದ ಶನಿ, ಈ ಐದು ರಾಶಿಗಳಿಗೆ ಸಂಕಷ್ಟ


ಧನ ಪ್ರಾಪ್ತಿಗಾಗಿ ಇಲ್ಲಿವೆ ಉಪಾಯಗಳು
1. ದೇವಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಮನೆ ಹಾಗೂ ಕೆಲಸದ ಸ್ಥಳದಲ್ಲಿ ಸ್ವಚ್ಛತೆಯ ಕಡೆಗೆ ಗಮನಹರಿಸಿ. ಅಶುದ್ಧವಾದ ಹಾಗೂ ಕೊಳಚೆ ಇರುವ ಪ್ರದೇಶಗಳಿಂದ ದೇವಿ ಹೊರಟುಹೋಗುತ್ತಾಳೆ. ರಾತ್ರಿ ವೇಳೆ ಕಿಚನ್ ನಲ್ಲಿ ಮುಸುರೆ ಪಾತ್ರಗಳನ್ನು ಇಡಬೇಡಿ.


2. ಎಂಜಲು ಕೈಗಳಿಂದ ಹಣವನ್ನು ಮುಟ್ಟಬೇಡಿ. ನೋಟುಗಳನ್ನು ಎಣಿಸುವಾಗ ಬೆರಳುಗಳಿಗೆ ಉಗುಳನ್ನು ಹಚ್ಚಬೇಡಿ. 


3. ಶುಕ್ರವಾರದ ದಿನ ಮನೆಯ ಮುಖ್ಯದ್ವಾರದ ಹೊರಗೆ ನೆಲದ ಮೇಲೆ ರಂಗೋಲಿ ಅಥವಾ ಕೆಂಪುಬಣ್ಣದಿಂದ ತಾಯಿ ಲಕುಮಿಯ ಪಾದ ಚಿನ್ಹೆಗಳನ್ನು ಮೂಡಿಸಿ.


ಇದನ್ನು ಓದಿ- ಶುಕ್ರವಾರ ಮೊಸರು ತಿನ್ನುವುದರಿಂದ ವಿಶೇಷ ಫಲ: ಈ ಬಣ್ಣದ ಬಟ್ಟೆ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ


4.ಮಾತೆ ಲಕ್ಷ್ಮಿಯ ಆಶೀರ್ವಾದ ಪಡೆಯಲು ಶುಕ್ರವಾರ ಪ್ರಾತಃಕಾಲದಲ್ಲಿ ಸ್ನಾನ-ಧ್ಯಾನ ಮುಗಿಸಿ ಬಿಳಿ ಅಥವಾ ಕ್ರೀಮ್ ಕಲರ್ ಬಟ್ಟೆಯನ್ನು ಧರಿಸಿ. ಮಾತೆ ಲಕ್ಷ್ಮಿಯ ಭಾವ ಚಿತ್ರವನ್ನು ಎಂದಿಗೂ ಕೂಡ ಈಶಾನ್ಯ ಕೋನದಲ್ಲಿ ಅಥವಾ ಪೂರ್ವ ದಿಕ್ಕಿನಲ್ಲಿ  ಸ್ಥಾಪಿಸಿ ಪೂಜೆ ಸಲ್ಲಿಸಿ.


5.ಮಾತೆ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಶ್ರೀಯಂತ್ರದ ಮೇಲೆ ಕಮಲದ ಹೂವು ಅರ್ಪಿಸಿ ಹಾಗೂ ಶ್ರೀಸೂಕ್ತ ಪಠಿಸಿ. ಕಮಲಗಟ್ಟೆ ಅಥವಾ ಸ್ಪಟಿಕದ ಮಾಲೆ ಬಳಸಿ ಮಾತೆ ಲಕ್ಷ್ಮಿಯ ಮಂತ್ರಗಳನ್ನು ಪಠಿಸಿ. ಶ್ರೀ ನಾರಾಯಣನ ಪೂಜೆ ಕೂಡ ಮಾಡಿ. ನಾರಾಯಣ ಹಾಗೂ ಲಕ್ಷ್ಮಿಗೆ ಪೂಜೆ ಸಲ್ಲಿಸುವುದರಿಂದ ಎಲ್ಲ ದೇವಿ-ದೇವತೆಗಳು ಪ್ರಸನ್ನರಾಗಿ ಆಶೀರ್ವಾದ ಮಾಡುತ್ತಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಅದಲ್ಲದೆ ಆರ್ಥಿಕ ಮುಗ್ಗಟ್ಟು ದೂರವಾಗುತ್ತದೆ.

6. ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಲು ಮಹಾಲಕ್ಷ್ಮಿ ಯಂತ್ರವನ್ನು ಸ್ಥಾಪಿಸಿ ಹಾಗೂ ನಿತ್ಯ ಅದರ ಪೂಜೆ ಸಲ್ಲಿಸಿ. ಮಹಾಲಕ್ಷ್ಮಿ ಯಂತ್ರವನ್ನು ತಿಜೋರಿ ಅಥವಾ ಕ್ಯಾಶ್ ಬ್ಯಾಗ್ ನಲ್ಲಿಡುವುದರಿಂದ ಧನ ಲಾಭವಾಗುತ್ತದೆ.


ಇದನ್ನು ಓದಿ- ನಿಮ್ಮ ಭಾಗ್ಯದಲ್ಲಿ Government Job ಇದೆಯೋ ಅಥವಾ ಇಲ್ಲವೋ ಹೀಗೆ ತಿಳಿಯಿರಿ

7.ಮಾತೆ ಲಕ್ಷ್ಮಿಗೆ ಪ್ರಿಯವಾದ ವಸ್ತುಗಳಾದ ಶಂಖ, ಕವಡೆ, ಶ್ರಿಫಲ ಅಂದರೆ ತೆಂಗಿನಕಾಯಿ  ಇತ್ಯಾದಿಗಳನ್ನು ಪೂಜೆಯವೆಲೆ ಅರ್ಪಿಸಿ. ಪ್ರಸಾದದ ರೂಪದಲ್ಲಿ ಕಲ್ಲು ಸಕ್ಕರೆ ಹಾಗೂ ಪಾಯಸದ ಭೋಗ ನೀಡಿ.

8. ಮಾತೆ ಲಕ್ಷ್ಮಿಯ ಕೃಪಾಕಟಾಕ್ಷ ಸದಾ ನಿಮ್ಮ ಮೇಲೆ ಇರಲು ಅಪ್ಪಿತಪ್ಪಿಯೂ ಕೂಡ ರಾತ್ರಿ ಊಟದಲ್ಲಿ ಅನ್ನ ಹಾಗೂ ಮೊಸರು ಇತ್ಯಾದಿಗಳ ಸೇವನೆ ಮಾಡಬೇಡಿ.

9. ಶುಕ್ರವಾರ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸಕ್ಕರೆ, ಹಾಲು, ಅಕ್ಕಿ, ಬೆಳ್ಳಿ, ಸುಗಂಧಿ ದ್ರವ್ಯಗಳಂಥಹ ಬಿಳಿ ಬಣ್ಣದ ವಸ್ತುಗಳನ್ನು ದಾನವಾಗಿ ನೀಡಿ.


ಇದನ್ನು ಓದಿ- ಧನ ಹಾನಿಯಿಂದ ಪಾರಾಗಲು ಶುಕ್ರವಾರ ಈ ಐದು ಕೆಲಸಗಳನ್ನು ತಪ್ಪದೆ ಮಾಡಿ

10. ಪೊರಕೆಗೆ ಕಾಲನ್ನು ಸ್ಪರ್ಶಿಸಬೇಡಿ ಹಾಗೂ ಅದನ್ನು ಯಾವಾಗಲು ಮರೆಮಾಚಿ. ಪೊರಕೆಯನ್ನು ನೇರವಾಗಿ ಇಡಬೇಡಿ.