ನವದೆಹಲಿ: ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ್ ತಿಂಗಳಲ್ಲಿ (ಏಪ್ರಿಲ್ / ಮೇ) ಹುಣ್ಣಿಮೆಯ ದಿನದಂದು ಬರುತ್ತದೆ.  ಈ ವರ್ಷ ಇಂದು (ಮೇ 7) ಬುದ್ಧ ಪೂರ್ಣಿಮವನ್ನು ಆಚರಿಸಲಾಗುತ್ತಿದೆ. ಬೌದ್ಧ ಧರ್ಮದ ಸಂಸ್ಥಾಪಕ ಗೌತಮ್ ಬುದ್ಧನ ಜನ್ಮದಿನವನ್ನು ಬುದ್ಧ ಪೂರ್ಣಿಮಾ ಅಥವಾ ಬುದ್ಧ ಜಯಂತಿ ಎಂದು ಆಚರಿಸಲಾಗುತ್ತದೆ.  


COMMERCIAL BREAK
SCROLL TO CONTINUE READING

ಭಾರತ, ಆಗ್ನೇಯ ಏಷ್ಯಾ ಮತ್ತು ಚೀನಾ, ಜಪಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಬೌದ್ಧ ಧರ್ಮದ ಅನುಯಾಯಿಗಳು ಇದ್ದಾರೆ.  ಮೇ 6, 2020 ರಂದು ಸಂಜೆ 7.44 ಕ್ಕೆ ಆರಂಭವಾಗಿರುವ ಬುದ್ಧ ಪೂರ್ಣಿಮ ಶುಭ ಸಮಯವು ಮೇ 7 ಸಂಜೆ 4.14ರವರೆಗೆ ಇರಲಿದೆ.


ದೇಶಕ್ಕೆ ಶಾಂತಿ ಸಂದೇಶವನ್ನು ಸಾರಿದ ಮಹಾನ್ ನಾಯಕ ಬುದ್ಧ ಪೂರ್ಣಿಮಾ ದಿನದ ಈ ಕೆಲಸಗಳನ್ನು ಅಪ್ಪಿ-ತಪ್ಪಿಯೂ ಮಾಡಬೇಡಿ ಎಂದು ಹಲವು ಜ್ಞಾನಿಗಳು ಹೇಳುತ್ತಾರೆ. ಅಂತಹ ಕೆಲವು ಕೆಲಸಗಳೆಂದರೆ:
- ಇತರರಿಗೆ ಅವಾಚ್ಯ ಶಬ್ಧಗಳಿಂದ ಬಳಸಬಾರದು.
- ಇಂದು ಮಾಂಸವನ್ನು ಸೇವಿಸಬೇಡಿ.
- ಬೇರೆಯವರೊಂದಿಗೆ ಜಗಳವಾಡಬಾರದು.
- ಎಲ್ಲಕ್ಕಿಂತ ಮುಖ್ಯವಾಗಿ ಸುಳ್ಳು ಹೇಳಬಾರದು.


ಇಂದು ಏನು ಮಾಡಬೇಕು:
- ಸೂರ್ಯೋದಯಕ್ಕೆ ಮೊದಲು ಏಳಬೇಕು.
- ಮನೆಯನ್ನು ಸ್ವಚ್ಛಗೊಳಿಸಿದ ಸ್ನಾನ ಮಾಡಿದ ನಂತರ, ಗಂಗಾ ನೀರನ್ನು ಪ್ರೋಕ್ಷಣೆ ಮಾಡಿಕೊಳ್ಳಬೇಕು.
- ಮನೆಯ ದೇವಾಲಯದಲ್ಲಿ ವಿಷ್ಣುವಿನ ಪ್ರತಿಮೆಯ ಮುಂದೆ ದೀಪಗಳನ್ನು ಬೆಳಗಿಸಿ ಪೂಜಿಸಿ.
- ಮನೆಯ ಮುಂದೆ ಸ್ವಸ್ತಿಕ್ ರಂಗೋಲಿ ಬಿಡಿಸಿ ಅರಿಶಿನ, ಕುಂಕುಮ ಹಚ್ಚಿ ಗಂಗಾ ನೀರನ್ನು ಪ್ರೋಕ್ಷಿಸಬೇಕು.
- ಅಗತ್ಯವಿರುವವರಿಗೆ ಆಹಾರವನ್ನು ಒದಗಿಸಿ ಮತ್ತು ಬಟ್ಟೆಗಳನ್ನು ದಾನ ಮಾಡಿ.
- ಉದಯಿಸುತ್ತಿರುವ ಚಂದ್ರನಿಗೆ ನೀರನ್ನು ಅರ್ಪಿಸಬೇಕು.