ವಿಶ್ವ ಮಹಿಳಾ ದಿನಾಚರಣೆಯಂದು ಮಹಿಳೆಯರಿಗಾಗಿ ಗೀತೆ ಬಿಡುಗಡೆ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಬೆಂಗಳೂರಿನ ಮಹಿಳಾ ಸಂಘಗಳು ಸೇರಿ ಮಹಿಳೆಯರಿಗಾಗಿ ಒಂದು ಹಾಡನ್ನು ಚಿತ್ರೀಕರಿಸಿ ಬಿಡುಗಡೆ ಮಾಡಿದೆ.
ಬೆಂಗಳೂರು : ಹೆತ್ತು ಹೊತ್ತು ತಾಯಿಯಾಗಿ, ತಂಗಿಯಾಗಿ, ಅಕ್ಕನಾಗಿ, ಮಗಳಾಗಿ, ಪತ್ನಿಯಾಗಿ ಜೀವನ ತುಂಬುವ ಮಹಿಳೆಗೆ ಜಗತ್ತಿನಲ್ಲಿ ಅಪೂರ್ವ ಸ್ಥಾನವಿದೆ. ಅಂತಹ ಮಹಿಳೆಗಾಗಿಯೇ ಪ್ರತಿ ವರ್ಷ ಮಾ.8 ರಂದು ವಿಶ್ವ ಸಂಸ್ಥೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಎಂದು ಘೋಷಿಸಿದೆ. ಈ ಸಂದರ್ಭದಲ್ಲಿ ಬೆಂಗಳೂರಿನ ಮಹಿಳಾ ಸಂಘಗಳು ಸೇರಿ ಮಹಿಳೆಯರಿಗಾಗಿ ಒಂದು ಹಾಡನ್ನು ಚಿತ್ರೀಕರಿಸಿ ಬಿಡುಗಡೆ ಮಾಡಿದೆ.
ನಾವು ಯಾರಿಗೂ ಕಮ್ಮಿ ಇಲ್ಲ. ನಾವು ಸಮಾನರು ಎನ್ನುತ್ತಾ ಕ್ರೀಡೆ, ರಾಜಕೀಯ, ಕಲೆ, ಸಾಹಿತ್ಯ, ರಂಗಭೂಮಿ, ಸೇನೆ, ವೈದ್ಯಕೀಯ, ವಿಜ್ಞಾನ-ತಂತ್ರಜ್ಞಾನ, ಶಿಕ್ಷಣ...ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಿದ ಮಹಿಳೆಯರನ್ನು ಮಾದರಿಯಾಗಿಟ್ಟುಕೊಂಡು ಈ ಹಾಡನ್ನು ತಯಾರಿಸಲಾಗಿದೆ.
ಆ ಹಾಡಿನ ಒಂದು ಝಲಕ್ ಇಲ್ಲಿದೆ...