Mysuru Dasara: ವಿಂಟೇಜ್ ಕಾರುಗಳ ಪ್ರದರ್ಶನಕ್ಕೆ ಚಾಲನೆ
Mysuru Dasara: ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾದಲ್ಲಿ 1909 ಇಸವಿಯಿಂದ 1970 ರವರೆಗೆ ವಿದೇಶಗಳಲ್ಲಿ ಬಳಕೆಯಲ್ಲಿದ್ದ ವಿಂಟೇಜ್ ಕಾರುಗಳನ್ನ ಮೈಸೂರಿನ ಉದ್ಯಮಿ ಗೋಪಿನಾಥ್ ಶೆಣೈಎಂಬುವರು ಸಂಗ್ರಹ ಮಾಡಿ, ದಸರಾ ಹಿನ್ನೆಲೆ ಸಾರ್ವಜನಿಕ ಪ್ರದರ್ಶನ ಮಾಡಲಾಯಿತು.
Mysuru Dasara: ದಸರಾ ಹಿನ್ನೆಲೆ ಮೈಸೂರಿನಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಯಿತು. ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದೆ.
ಮೈಸೂರಿನ ಹೆಬ್ಬಾಳ ಇಂಡಸ್ಟ್ರಿಯಲ್ ಏರಿಯಾದಲ್ಲಿ 1909 ಇಸವಿಯಿಂದ 1970 ರವರೆಗೆ ವಿದೇಶಗಳಲ್ಲಿ ಬಳಕೆಯಲ್ಲಿದ್ದ ವಿಂಟೇಜ್ ಕಾರುಗಳನ್ನ ಮೈಸೂರಿನ ಉದ್ಯಮಿ ಗೋಪಿನಾಥ್ ಶೆಣೈಎಂಬುವರು ಸಂಗ್ರಹ ಮಾಡಿ, ದಸರಾ ಹಿನ್ನೆಲೆ ಸಾರ್ವಜನಿಕ ಪ್ರದರ್ಶನ ಮಾಡಲಾಯಿತು.
ಇದನ್ನೂ ಓದಿ- ಮೈಸೂರು ದಸರಾಗೆ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್ ಘೋಷಣೆ
ವಿಂಟೇಜ್ ಕಾರುಗಳ ಪ್ರದರ್ಶನದಲ್ಲಿ ರೋಲ್ಸ್ ರಾಯ್, ಬೆನ್ಜ್, ಲ್ಯಾಂಡ್ ರೋವರ್, ಫಾರ್ಡ್, ಕ್ರೋಡ್ ಕಂಪನಿ ಸೇರಿದಂತೆ 40ಕ್ಕೂ ಹೆಚ್ಚು ಬಗೆಯ ಕಾರುಗಳ ಪ್ರದರ್ಶನ ಮಾಡಲಾಯಿತು. ಕಾರ್ಯಕ್ರಮಕ್ಕೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಪ್ರತಾಪ್ ಸಿಂಹ, ದಸರಾದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನವನ್ನ ಎಸ್ಟಿ ಸೋಮಶೇಖರ್ ಅವರು ಮೈಸೂರು ಉಸ್ತುವಾರಿ ಆಗಿದ್ದಾಗ ಏರ್ಪಡಿಸಲಾಗಿತ್ತು, ಈ ಬಾರಿ ಅದನ್ನ ಮುಂದುವರೆಸಲಾಗಿದೆ. ಗೋಪಿನಾಥ್ ಶೆಣೈ ಅವರು ಮೈಸೂರಿನಲ್ಲಿ ಇಂತಹ ಕಾರು ಕಲೆಕ್ಷನ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಬೆಂಗಳೂರಿನ ಕೆಲವರನ್ನ ಹೊರತುಪಡಿಸಿದರೆ ಅತಿ ಹೆಚ್ಚು ವಿಂಟೇಜ್ ಕಾರು ಬೈಕ್ ಗಳ ಸಂಗ್ರಹ ಮಾಡಿರೋದು ಶೆಣೈ ಅವರು. ನಿಜಕ್ಕೂ ಅವರು ಮೈಸೂರಿನವರು ಅನ್ನೋದು ನಮ್ಮ ಹೆಮ್ಮೆ. ಮುಂದಿನ ವರ್ಷ ಇದನ್ನ ಇನ್ನೂ ಅದ್ದೂರಿಯಾಗಿ ಆಯೋಜನೆ ಮಾಡೋಣ ಎಂದರು.
ಇದನ್ನೂ ಓದಿ- ನಾನಾ ಹೆಸರುಗಳಿಂದ ಆಚರಣೆ ಮಾಡುವ ದಸರಾ ಹಬ್ಬ
ಕಾರ್ಯಕ್ರಮದಲ್ಲಿ ಶಾಸಕ ಶ್ರೀವತ್ಸ, ಹಿರಿಯ ಪತ್ರಕರ್ತ ಡಾ. ಕೆ.ಬಿ.ಗಣಪತಿ, ಕಾರ್ ಕಲೆಕ್ಷನ್ ಮಾಲೀಕ ಎಂ ಗೋಪಿನಾಥ್ ಶೆಣೈ, ಸಾವಿತ್ರಿ ಗೋಪಿನಾಥ್, ಎಂ ಜಿ ಮಾಧವ್ ಶೆಣೈ, ಸಂದೀಪ್ ನಾಯಕ್ ಭಾಗಿಯಾಗಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.