Vastu Tips For Navratri 2023 : ನವರಾತ್ರಿಯು ಅಕ್ಟೋಬರ್ 15 ರ ಭಾನುವಾರದಿಂದ ಪ್ರಾರಂಭವಾಗಲಿದೆ. ನವರಾತ್ರಿಯು ಅಶ್ವಿನ್ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನಾಂಕದಿಂದ ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ, ಭಕ್ತರು ದುರ್ಗಾ ದೇವಿಯನ್ನು ಪೂಜಿಸುವ ಮೂಲಕ ಅವಳ ಕೃಪೆಗೆ ಪಾತ್ರರಾಗಲು ಯತ್ನಿಸುತ್ತಾರೆ. ನವರಾತ್ರಿಯಲ್ಲಿ ಅನೇಕ ಕಡೆಗಳಲ್ಲಿ ದುರ್ಗೆಯ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. 9 ದಿನಗಳ ಕಾಲ ಪೂರ್ಣ ಭಕ್ತಿಯಿಂದ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತದೆ. ದುರ್ಗೆಯ ಪೂಜೆಯಲ್ಲಿ ಎಳ್ಳಷ್ಟು ಏರುಪೇರಾದರೂ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಅವಳ ಪೂಜೆ ಬಹಳ ಕಟ್ಟು ನಿಟ್ಟಿನಿಂದ ನಡೆಯುತ್ತದೆ. 


COMMERCIAL BREAK
SCROLL TO CONTINUE READING

ನವರಾತ್ರಿಯ ವೇಳೆ ಮನೆಯ ದೇವರ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಹುದು, ಯಾವ ವಸ್ತುಗಳನ್ನು ಇಡಬಾರದು ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.  ಯಾಕೆಂದರೆ ಕೆಲವೊಂದು ವಸ್ತುಗಳು ದುರ್ಗೆಯ ಕೋಪಕ್ಕೆ ಕಾರಣವಾಗುತ್ತದೆ. ಇದರಿಂದಾಗಿ ಕುಟುಂಬ ಕಲಹ ಮತ್ತು ವಾಸ್ತು ದೋಷಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಿದ್ದರೆ ನವರಾತ್ರಿಯ ಮೊದಲು ದೇವರ ಕೋಣೆಯಿಂದ ಯಾವ ವಸ್ತುಗಳನ್ನು ತೆಗೆದು ಹೊರ ಹಾಕಬೇಕು ಎನ್ನುವುದನ್ನು ವಿವರವಾಗಿ ತಿಳಿದುಕೊಳ್ಳೋಣ. 


ಇದನ್ನೂ ಓದಿ : ನವರಾತ್ರಿಯಲ್ಲಿ ತುಲಾ ರಾಶಿಯಲ್ಲಿ ಬುಧಾದಿತ್ಯ ಯೋಗ... ಈ 3 ರಾಶಿಗಳ ಮೇಲೆ ಹಣದ ಮಳೆ, ಸಂಪತ್ತಿನ ಹೊಳೆ!


ದೇವರ ಮನೆಯಲ್ಲಿ ಕತ್ತರಿ ಇಡುವುದು ಶುಭವಲ್ಲ :
ದೇವರ ಮನೆ ಅಥವಾ ದೇವರ ಕೋಣೆಯಲ್ಲಿ ಕತ್ತರಿ ಇಟ್ಟಿದ್ದರೆ ಅದನ್ನು ತಕ್ಷಣ ತೆಗೆಯಬೇಕು ಎನ್ನುತ್ತದೆ ವಾಸ್ತು ಶಾಸ್ತ್ರ. ದೇವರ ಮನೆಯಲ್ಲಿ ಕತ್ತರಿ ಇಡುವುದನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ. ಇದು ವಾಸ್ತು ದೋಷಗಳನ್ನು ಉಂಟುಮಾಡಬಹುದು ಮತ್ತು ಕುಟುಂಬದಲ್ಲಿ ತೊಂದರೆಗಳನ್ನು ಉಂಟುಮಾಡಬಹುದು.


ಚೂಪಾದ ವಸ್ತುಗಳಿಗೆ ದೇವರ ಮನೆಯಲ್ಲಿ ಜಾಗ ಬೇಡ : 
ವಾಸ್ತು ಶಾಸ್ತ್ರದ ಪ್ರಕಾರ ದೇವಸ್ಥಾನದಲ್ಲಿ ಕತ್ತರಿ ಮಾತ್ರವಲ್ಲ ಯಾವುದೇ ಚೂಪಾದ ವಸ್ತು ಇಡಬಾರದು. ಏಕೆಂದರೆ ಇದು ನಕಾರಾತ್ಮಕ ಶಕ್ತಿಯನ್ನು ರವಾನಿಸುತ್ತದೆ. ಇದು ಆಧ್ಯಾತ್ಮಿಕ ಪರಿಸರದ ಮೇಲೂ ಪರಿಣಾಮ ಬೀರುತ್ತದೆ. ಇದರಿಂದಾಗಿ ವ್ಯಕ್ತಿಯು ಪೂಜೆಯಲ್ಲಿ ಗಮನಹರಿಸುವುದು  ಸಾಧ್ಯವಾಗುವುದಿಲ್ಲ.


ಇದನ್ನೂ ಓದಿ : ಇನ್ನು ಮೂರು ದಿನಗಳಲ್ಲಿ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು ! ಉಕ್ಕಿ ಬರುವುದು ಧನ ಸಂಪತ್ತು ! ಹೆಚ್ಚುವುದು ಗೌರವ, ಕೀರ್ತಿ


ಈ ವಸ್ತುಗಳನ್ನು ದೇವಸ್ಥಾನದಲ್ಲಿ ಇಡಬೇಡಿ : 
ನವರಾತ್ರಿಯ ಮೊದಲು ದೇವರ ಕೋಣೆಯನ್ನು ಸ್ವಚ್ಛಗೊಳಿಸುವುದು ಅವಶ್ಯಕ. ಈ ವೇಳೆಯಲ್ಲಿ ದೇವರ ಮನೆಯಲ್ಲಿ ಯಾವುದೇ ಮುರಿದ ವಿಗ್ರಹ ಅಥವಾ ದೇವರ ಫೋಟೋ ಇದ್ದರೆ ಅದನ್ನು ತೆಗೆದು ಹಾಕಿ. ಇದರ ಹೊರತಾಗಿ ಪೂಜೆಗೆ ಸಂಬಂಧಿಸಿದ ಯಾವುದೇ ಹರಿದ ಪುಸ್ತಕವನ್ನು ಇಟ್ಟುಕೊಳ್ಳಬೇಡಿ. ಇನ್ನು ಒಣ ಹೂವುಗಳು ಅಥವಾ ಹೂಮಾಲೆಗಳು ಕೂಡಾ ದೇವರ ಕೋಣೆಯಲ್ಲಿ ಇರಬಾರದು ಎಂಬುದನ್ನು ನೆನಪಿನಲ್ಲಿಡಿ. ಒಂದಕ್ಕಿಂತ ಹೆಚ್ಚು ಶಂಖಗಳನ್ನು ಕೂಡಾ ಇಲ್ಲಿ ಇಡಬೇಡಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.