ಶಾರದೀಯ ನವರಾತ್ರಿ 2023: ನವರಾತ್ರಿಯ ವೈಭವವು ಅನಂತವಾಗಿದೆ. ಲಂಕಾದ ಮೇಲಿನ ವಿಜಯದ ಜೊತೆಗೆ ಶ್ರೀರಾಮನು ರಾವಣನನ್ನು ಕೊಂದು ತಾಯಿ ಸೀತೆಯನ್ನು ಮರಳಿ ತರಲು ನವರಾತ್ರಿಯಂದು ಉಪವಾಸವನ್ನು ಆಚರಿಸಿದ್ದನು. ಅಲ್ಲಿ ಮಾತೃದೇವತೆ ಕಾಣಿಸಿಕೊಂಡು ಆತನಿಗೆ ಜಯವಾಗುವಂತೆ ಅನುಗ್ರಹಿಸಿದಳು. ಈ ಬಾರಿಯ ಶಾರದೀಯ ನವರಾತ್ರಿಯು ಅಕ್ಟೋಬರ್ 15ರಂದು ಅಶ್ವಿನ ಶುಕ್ಲ ಪಕ್ಷ ಪ್ರತಿಪದದಿಂದ ಪ್ರಾರಂಭವಾಗುತ್ತದೆ.


COMMERCIAL BREAK
SCROLL TO CONTINUE READING

ರಾವಣನಿಗೆ ತಾಯಿ ಸೀತೆಯ ಎಚ್ಚರಿಕೆ


ತನ್ನ ತಂದೆ ಅಯೋಧ್ಯೆಯ ರಾಜ ದಶರಥನ ಇಚ್ಛೆಯ ಮೇರೆಗೆ ಭಗವಾನ್ ಶ್ರೀರಾಮನು ತನ್ನ ಧರ್ಮಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣನೊಂದಿಗೆ ಕಾಡಿನಲ್ಲಿ ಅಲೆದಾಡುತ್ತಿದ್ದಾಗ, ರಾವಣನು ಮೋಸದಿಂದ ಮಾರೀಚನನ್ನು ಚಿನ್ನದ ಜಿಂಕೆಯಾಗಿ ಪರಿವರ್ತಿಸಿ ಕಾಡಿಗೆ ಕಳುಹಿಸಿದನು. ಜಿಂಕೆಯನ್ನು ನೋಡಿದ ಸೀತೆ ಅದು ತನಗೆ ಬೇಕೆಂದು ಶ್ರೀರಾಮನನ್ನು ಬೇಟೆಯಾಡಲು ಕಳುಹಿಸಿದಳು. ಕಾಡಿನಲ್ಲಿ ಲಕ್ಷ್ಮಣನ ಧ್ವನಿಯನ್ನು ಕೇಳಿದ ಸೀತೆಗೆ ಭಗವಾನ್ ಶ್ರೀರಾಮನಿಗೆ ಏನೋ ತೊಂದರೆಯಾಗಿದೆ ಎಂದು ಭಾವಿಸಿದಳು.


ಇದನ್ನೂ ಓದಿ: Gemstone: ಈ 4 ರತ್ನಗಳಿಗೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುವ ಶಕ್ತಿ ಇದೆ..!


ಆದ್ದರಿಂದ ಗುಡಿಸಲಿನಲ್ಲಿ ತನ್ನನ್ನು ರಕ್ಷಿಸುತ್ತಿದ್ದ ಲಕ್ಷ್ಮಣನನ್ನೂ ಪ್ರಭು ಶ್ರೀರಾಮನನ್ನು ರಕ್ಷಿಸುವಂತೆ ಹೇಳೆ ಕಾಡಿಗೆ ಕಳುಹಿಸಿದಳು. ಈ ಅವಕಾಶವನ್ನು ಬಳಸಿಕೊಂಡ ರಾವಣನು ಮೋಸದಿಂದ ಸೀತೆಯನ್ನು ತನ್ನ ಕೈವಶ ಮಾಡಿಕೊಂಡು ಪುಷ್ಪಕ ವಿಮಾನದಲ್ಲಿ ಲಂಕೆಗೆ ಕರೆದೊಯ್ದನು. ಲಂಕೆಗೆ ಹೋಗಿ ಸೀತೆಯನ್ನು ಹುಡುಕುವುದರೊಂದಿಗೆ ಹನುಮಂತನು ರಾವಣನ ಚಿನ್ನದ ಲಂಕೆಯನ್ನು ಸುಟ್ಟುಹಾಕಿದನು. ಬಳಿಕ ಸೀತಾಮಾತೆಯನ್ನು ಬಿಡದಿದ್ದರೆ ನಿನ್ನ ಜೀವನವೇ ಸರ್ವನಾಶವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದನು.   


ನವರಾತ್ರಿಯ ಸಮಯದಲ್ಲಿ ಶ್ರೀರಾಮನ ಉಪವಾಸ


ಸೀತೆಯನ್ನು ಕಳೆದುಕೊಂಡ ದುಃಖದಲ್ಲಿದ್ದ ಶ್ರೀರಾಮನು ಹೇಗಾದರೂ ಮಾಡಿ ರಾವಣನಿಗೆ ಸರಿಯಾಗಿ ಬುದ್ಧಿ ಕಲಿಸಿ ಸೀತೆಯನ್ನು ಮರಳಿ ಕರೆತರುವ ಯೋಚನೆ ಮಾಡುತ್ತಿದ್ದನು. ಈ ವೇಳೆ ಮಹರ್ಷಿ ನಾರದರು ಅಲ್ಲಿ ಕಾಣಿಸಿಕೊಂಡರು. ರಾಮನ ದುಃಖದ ಕಾರಣ ಕೇಳಿದ ನಾರದರು, ರಾವಣನ ಸಂಹಾರಕ್ಕೆ ಪರಿಹಾರವನ್ನು ತಿಳಿಸಿ ಅಶ್ವಿನ ಮಾಸದಲ್ಲಿ ನೀವು ಭಕ್ತಿಯಿಂದ ನವರಾತ್ರಿಯ ಆಚರಣೆಗಳನ್ನು ಮಾಡಬೇಕೆಂದು ಸಲಹೆ ನೀಡಿದರು. ನವರಾತ್ರಿಯಲ್ಲಿ ಉಪವಾಸವಿದ್ದು, ಭಗವತಿ ದೇವಿಯನ್ನು ಪೂಜಿಸಿ ಸರಿಯಾಗಿ ಪಠಿಸುವುದರಿಂದ ಸಕಲ ಸಿದ್ಧಿ ಪ್ರಾಪ್ತಿಯಾಗುತ್ತದೆ ಎಂದರು.


ಇದನ್ನೂ ಓದಿ: ಮನೆಯ ಮುಂದೆ ಈ ಗಿಡಗಳನ್ನು ನೆಟ್ಟರೆ ಸೊಳ್ಳೆಗಳು ಹತ್ತಿರವೂ ಸುಳಿಯದು !


ಇದಕ್ಕೂ ಮೊದಲು ಸ್ವರ್ಗದಲ್ಲಿ ನೆಲೆಸಿರುವ ಬ್ರಹ್ಮ, ವಿಷ್ಣು, ಮಹೇಶ್ವರ ಮತ್ತು ಇಂದ್ರರು ಸಹ ಈ ನವರಾತ್ರಿಯ ವ್ರತದ ಆಚರಣೆಗಳನ್ನು ಮಾಡಿದ್ದರು. ಅದರಂತೆ ಶ್ರೀರಾಮನು 9 ದಿನಗಳ ಕಾಲ ದೇವಿಯನ್ನು ಪೂಜಿಸಿ ತಾಯಿ ಭಗವತಿಯನ್ನು ಮೆಚ್ಚಿಸಿ ಸಿದ್ಧಿಗಳನ್ನು ಸಾಧಿಸಿದರು. ಬಳಿಕ ಲಂಕೆಯ ಮೇಲೆ ದಾಳಿ ನಡೆಸಿ ರಾವಣನನ್ನು ಸಂಹಾರ ಮಾಡಿ, ಸೀತೆಯನ್ನು ಮರಳಿ ಕರೆತಂದರು. ಈ ವೇಳೆ ಶ್ರೀರಾಮನು ತನ್ನ  ಉಪವಾಸದ ಸಂಪೂರ್ಣ ವಿಧಾನವನ್ನು ಎಲ್ಲರಿಗೂ ತಿಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.