Special Train For Deepavali: ಬೆಳಕಿನ‌ ಹಬ್ಬ ಎಂದೇ ಕರೆಯಲಾಗುವ ದೀಪಾವಳಿ (Deepavali) ಪ್ರಯುಕ್ತ ಸಾಲು ಸಾಲು ರಜೆ ಬರುತ್ತಿವೆ. ಉದ್ಯೋಗದ ನಿಮಿತ್ತ ಅಥವಾ ಇನ್ನಿತರ ಕಾರಣಗಳಿಗೆ ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಜನ ವರ್ಷಕ್ಕೆ ಒಮ್ಮೆ ಬರುವ ಬೆಳಕಿನ‌ ಹಬ್ಬಕ್ಕೆ ಮತ್ತೆ ತಮ್ಮೂರಿನತ್ತ ತೆರಳುವುದು ವಾಡಿಕೆ. ಇದೇ ಈ‌ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕೆಲವು ಕಡೆಗೆ ವಿಶೇಷ ರೈಲುಗಳನ್ನು (Special Trains) ಬಿಡಲಾಗಿದೆ. 


COMMERCIAL BREAK
SCROLL TO CONTINUE READING

ಪ್ರತಿವರ್ಷ ದೀಪಾವಳಿ ಹಬ್ಬ ಬಂತು ಎಂದರೆ ಸಾಕು ಬೆಂಗಳೂರಿನಿಂದ ರಾಜ್ಯದ ವಿವಿಧ ಊರುಗಳಿಗೆ ಹಾಗೂ ದೇಶದ ವಿವಿಧ ಜಾಗಗಳಿಗೆ ತೆರಳುವುದು ಸಾಮಾನ್ಯ. ಅದೇ ರೀತಿ ಬೇರೆ ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬರುವುದು ಮತ್ತು ಆನಂತರ ಬೆಂಗಳೂರಿನಿಂದ ಅವರವರ ಊರಿಗೆ ಹೋಗುವುದೂ ಸಾಮಾನ್ಯ. ಒಂದೇ ಸಲಕ್ಕೆ ಜನ‌ ಪ್ರಯಾಣ ಬೆಳಸುವುದರಿಂದ ದೀಪಾವಳಿಗೂ ಹಿಂದಿನ ಮೂರ್ನಾಲ್ಕು ದಿನ ಪ್ರಯಾಣಿಕರ ದಟ್ಟಣೆಯಾಗಲಿದೆ. ಇದನ್ನು ತೆರವುಗೊಳಿಸುವ ಸಲುವಾಗಿ ವಿಶೇಷ ಬಸ್ಸು, ರೈಲು ಸಂಚಾರ ಏರ್ಪಡಿಸಲಾಗುತ್ತದೆ. ಅದೇ ರೀತಿ ಈ ಬಾರಿ ತಮಿಳುನಾಡಿನ ನಾಗರಕೋಯಿಲ್ ಮತ್ತು ಬೆಂಗಳೂರಿನ ಸರ್.ಎಂ.ವಿಶೇಶ್ವರಯ್ಯ ಟರ್ಮಿನಲ್ ನಡುವೆ ವಿಶೇಷ ರೈಲು ಸಂಚಾರವನ್ನು ವ್ಯವಸ್ಥೆ ಮಾಡಲಾಗಿದೆ.


ತಮಿಳುನಾಡಿನ ನಾಗರಕೋಯಿಲ್ ಮತ್ತು ಬೆಂಗಳೂರಿನ ಸರ್.ಎಂ.ವಿಶೇಶ್ವರಯ್ಯ ಟರ್ಮಿನಲ್ ನಡುವೆ ಮೂರು ಟ್ರಿಪ್ ಗಳಲ್ಲಿ ಈ ವಿಶೇಷ ರೈಲುಗಳನ್ನು ಓಡಿಸಲು ದಕ್ಷಿಣ ರೈಲ್ವೆ ವಲಯ ನಿರ್ಧರಿಸಿದ್ದು ವಿವರಗಳು ಕೆಳಗಿನಂತಿದೆ.


ಇದನ್ನೂ ಓದಿ- ಹಿರಿಯ ನಾಗರಿಕರ ಪ್ರಯಾಣ ದರದಲ್ಲಿ ರಿಯಾಯಿತಿ : ಭಾರತೀಯ ರೈಲ್ವೇ ನೀಡಿದ ಮಾಹಿತಿ


ಎಲ್ಲೆಲ್ಲಿಗೆ ವಿಶೇಷ ರೈಲು ವ್ಯವಸ್ಥೆ?
1) ರೈಲು ಸಂಖ್ಯೆ 06083/06084 ತಮಿಳುನಾಡಿನ ನಾಗರಕೋಯಿಲ್ ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ವರೆಗೆ.


ರೈಲು ನವೆಂಬರ್ 7, 14 ಮತ್ತು 21 ರಂದು ಸಂಜೆ 7.35 ಕ್ಕೆ ನಾಗರಕೋಯಿಲ್ ನಿಲ್ದಾಣದಿಂದ ಹೊರಟು ಮರುದಿನ 12.40 ಗಂಟೆಗೆ ಕೆ.ಎಸ್.ಆರ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ


2). ಮೇಲಿನ ರೈಲುಗಳಿಗೆ ವಿರುದ್ಧ ದಿಕ್ಕಿನಲ್ಲಿ  ರೈಲು ಸಂಖ್ಯೆ 06084 ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ತಮಿಳುನಾಡಿನ ನಾಗರಕೋಯಿಲ್ ಗೆ ತೆರಳಲಿದೆ.


3) ಬೆಂಗಳೂರು-ನಾಗರಕೋಯಿಲ್ ವಿಶೇಷ ಎಕ್ಸ್ ಪ್ರೆಸ್ ರೈಲು ನವೆಂಬರ್ 8, 15 ಮತ್ತು 22 ರಂದು ಮಧ್ಯಾಹ್ನ 2 ಗಂಟೆಗೆ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಟು ಮರುದಿನ ಬೆಳಗ್ಗೆ 6.10 ಗಂಟೆಗೆ ನಾಗರಕೋಯಿಲ್ ನಿಲ್ದಾಣವನ್ನು ತಲುಪಲಿವೆ.


ಈ ವಿಶೇಷ ರೈಲುಗಳು ವಲ್ಲಿಯೂರ್, ತಿರುನೆಲ್ವೇಲಿ, ಕೋವಿಲ್ಪಟ್ಟಿ, ಸತೂರ್, ವಿರುಧುನಗರ, ಮಧುರೈ, ದಿಂಡಿಗಲ್, ತಿರುಚ್ಚಿರಾಪಳ್ಳಿ, ಕರೂರ್, ನಮಕ್ಕಲ್, ಸೇಲಂ, ಮೊರಪ್ಪೂರ್, ತಿರುಪತ್ತೂರು, ಬಂಗಾರಪೇಟೆ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ.


ಇದಲ್ಲದೆ ಭಗತ್ ಕಿ ಕೋಠಿ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಕೂಡ ವಿಶೇಷ ರೈಲುಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ.


ಇದನ್ನೂ ಓದಿ- ಧಾರವಾಡ-ಬೆಂಗಳೂರು ವಂದೇ ಭಾರತ್‌ ರೈಲಿಗೆ ಯುವಕರೇ ಹೆಚ್ಚು ಫಿದಾ


ರೈಲು ಸಂಖ್ಯೆ 04813/04814 ಭಗತ್ ಕಿ ಕೋಠಿ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವಿನ ಭಗತ್ ಕಿ ಕೋಠಿ ವಿಶೇಷ ಎಕ್ಸ್ ಪ್ರೆಸ್ ಒಟ್ಟು 8 ಟ್ರಿಪ್ ಮಾಡಲಿದೆ. 


1. ರೈಲು ಸಂಖ್ಯೆ 04813 ಭಗತ್ ಕಿ ಕೋಠಿ-ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್ ಪ್ರೆಸ್  ನವೆಂಬರ್ 11 ರಿಂದ ಡಿಸೆಂಬರ್ 4 ರವರೆಗೆ ಪ್ರತಿ ಶನಿವಾರ ಮತ್ತು ಸೋಮವಾರ 05:15 ಗಂಟೆಗೆ  ಭಗತ್ ಕಿ ಕೋಠಿ ನಿಲ್ದಾಣದಿಂದ ಹೊರಟು ಮರುದಿನ 23.30 ಗಂಟೆಗೆ ಎಸ್.ಎಂ.ವಿ.ಟಿ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿವೆ.


2. ರೈಲು ಸಂಖ್ಯೆ 04814 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಭಗತ್ ಕಿ ಕೋಠಿ ವಿಶೇಷ ಎಕ್ಸ್ ಪ್ರೆಸ್ ರೈಲು ನವೆಂಬರ್ 13 ರಿಂದ ಡಿಸೆಂಬರ್ 6 ರವರೆಗೆ ಪ್ರತಿ ಸೋಮವಾರ ಮತ್ತು ಬುಧವಾರ ಮಧ್ಯಾಹ್ನ 4.30 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು ಮಾರನೇ ದಿನ 12:40 ಗಂಟೆಗೆ  ಭಗತ್ ಕಿ ಕೋಠಿ ನಿಲ್ದಾಣವನ್ನು ತಲುಪಲಿದೆ


ಈ ವಿಶೇಷ ರೈಲುಗಳು ಲೂನಿ, ಸಂದಾರಿ, ಜಾಲೋರ್, ಮಾರ್ವಾರ್ ಭಿನ್ಮಾಲ್, ರಾಣಿವಾರ, ಧನೇರಾ, ಭಿಲ್ಡಿ ಜಂಕ್ಷನ್, ಪಟಾನ್, ಮಹೇಸನಾ ಜಂಕ್ಷನ್, ಅಹಮದಾಬಾದ್ ಜಂಕ್ಷನ್, ವಡೋದರಾ ಜಂಕ್ಷನ್, ಸೂರತ್, ವಾಪಿ, ವಸಾಯಿ ರೋಡ್, ಕಲ್ಯಾಣ್ ಜಂಕ್ಷನ್, ಪುಣೆ ಜಂಕ್ಷನ್, ಸತಾರಾ, ಮಿರಜ್ ಜಂಕ್ಷನ್, ಘಟಪ್ರಭಾ, ಬೆಳಗಾವಿ, ಧಾರವಾಡ, ಎಸ್ಎಸ್ಎಸ್ ಹುಬ್ಬಳ್ಳಿ, ಎಸ್ಎಂಎಂ ಹಾವೇರಿ, ರಾಣಿಬೆನ್ನೂರ್, ದಾವಣಗೆರೆ, ಬೀರೂರ್, ಅರಸೀಕೆರೆ ಮತ್ತು ತಮಕೂರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.