ಮುಂಬೈ: ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆಮಿ ಜಾಕ್ಸನ್ ನಟನೆಯ 2.0 ಚಿತ್ರದ ಟೀಸರ್ ಭಾನುವಾರ ಬೆಳಿಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿದ್ದು, ಈ ವಿಡಿಯೋ ಆನ್ಲೈನ್ ಅಲ್ಲಿ ಇದೀಗ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಆದರೆ ಮೆಗಾಸ್ಟಾರ್ ಅಭಿಮಾನಿಗಳು ಮತ್ತು ಪೈರಸಿಯನ್ನು ವಿರೋಧಿಸುವವರು ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡದಂತೆ ಇಂಟರ್ನೆಟ್ ಬಳಕೆದಾರರನ್ನು ವಿನಂತಿಸಿದ್ದಾರೆ.


ಇದಕ್ಕೆ ಪ್ರತಿಕ್ರಿಯಿಸಿರುವ ತಮಿಳು ಸೂಪರ್ ಸ್ಟಾರ್ ರಜಿನಿಕಾಂತ್ ಕಿರಿಯ ಪುತ್ರಿ ಸೌಂದರ್ಯ, "ತಮ್ಮ ಅಲ್ಪ ನಿಮಿಷದ ಸಂತೋಷಕ್ಕೋಸ್ಕರ ಅಷ್ಟು ದಿನಗಳಿಂದ ತಯಾರಕರು ಮಾಡಿದ ಪ್ರಯತ್ನಗಳು ಮತ್ತು ಭಾವನೆಗಳನ್ನು ನಿರ್ಲಕ್ಷಿಸಿ ಮಾಡಿರುವ ಈ ಹೃದಯಹೀನ ನಡೆ ಬೇಸರ ತಂದಿದೆ" ಎಂದಿದ್ದಾರೆ. 


ತಮ್ಮ ಕೋಪವನ್ನು ಟ್ವೀಟ್ ಮೂಲಕ ವ್ಯಕ್ತಪಡಿಸಿರುವ ಸೌಂದರ್ಯ ಈ ರೀತಿ ನಿರಾಶೆ ವ್ಯಕ್ತಪಡಿಸಿದ್ದಾರೆ. 



2.0 ಚಿತ್ರ 2010 ರಲ್ಲಿ ಬಿಡುಗಡೆಯಾದ ಎಂಥಿರನ್-2 ಸೀಕ್ವೆಲ್ ಚಿತ್ರವಾಗಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ನಟಿಸಿದ್ದಾರೆ. ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದು, 450 ಕೋಟಿ ಬಜೆಟ್ ನ ಚಿತ್ರವಾಗಿದೆ.